ತಲಾಖ್ ಬಗ್ಗೆ ನಿಮ್ಮ ನಿಲುವೇನು?: ಪರಮೇಶ್ವರ್ಗೆ ಅಶ್ವತ್ಥನಾರಾಯಣ ಪ್ರಶ್ನೆ
ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಎತ್ತಿದ ಕರ್ನಾಟಕದ ಗೃಹಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಬಿಜೆಪಿ ನಾಯಕರು ಮುಗಿಬೀಳಲು ಆರಂಭಿಸಿದ್ದಾರೆ. ಹಿಂದೂ ಧರ್ಮವನ್ನು ಬೇರೆ ಧರ್ಮಕ್ಕೆ ಹೋಲಿಸುವ ಪ್ರಮೇಯ ಇಲ್ಲ ಎಂದು ಎನ್ ರವಿಕುಮಾರ್ ಹೇಳಿದರೆ, ತಲಾಖ್ ಬಗ್ಗೆ ಪರಮೇಶ್ವರ್ ಅವರ ನಿಲುವು ಏನು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಪ್ರಶ್ನಿಸಿದ್ದಾರೆ.
ಬೆಂಗಳೂರು, ಸೆ.5: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಯಲ್ಲಿರುವ ಕೆಲವು ಪಕ್ಷಗಳ ನಾಯಕರು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಇದಕ್ಕೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತಿದೆ. ಹಿಂದೂ ಧರ್ಮವನ್ನು (Hindu Religion) ಯಾರು ಹುಟ್ಟಿಸಿದರು, ಯಾವಾಗ ಹುಟ್ಟಿತು ಎಂದು ಪ್ರಶ್ನಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಅವರಿಗೆ ತ್ರಿವಳಿ ತಲಾಖ್ನ ಬಗ್ಗೆ ನಿಮ್ಮ ನಿಲುವೇನು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ (Ashwath Narayan) ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಅಶ್ವಥ್ ನಾರಾಯಣ, ಪರಮೇಶ್ವರ್ ರಾಜ್ಯದ ಗೃಹ ಸಚಿವರು, ವಿದ್ಯಾವಂತರು. ಬಹಳ ನಿಕೃಷ್ಟವಾಗಿ ಹಿಂದೂ ಧರ್ಮದ ಬಗ್ಗೆ ಮಾತಾಡಿದ್ದಾರೆ. ಪರಮೇಶ್ವರ್ ಬಾಯಲ್ಲಿ ಈ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಹಿಂದೂ ಧರ್ಮದ ರೀತಿ ಬೇರೆ ಧರ್ಮದಲ್ಲಿ ಸುಧಾರಣೆ ಕಾಣಲು ಸಾಧ್ಯವಿಲ್ಲ. ಹಾಗೇನಾದರೂ ಬೇರೆ ಧರ್ಮದಲ್ಲಿ ಸುಧಾರಣೆ ಕಂಡಿರುವುದನ್ನು ಪರಮೇಶ್ವರ್ ಉದಾಹರಣೆ ಕೊಟ್ಟು ಹೇಳಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರೆಂಬುದೇ ಪ್ರಶ್ನೆ; ಸಚಿವ ಜಿ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ
ತಲಾಖ್ ಬಗ್ಗೆ ಪರಮೇಶ್ವರ್ ಅವರ ನಿಲುವು ಏನು ಎಂದು ಪ್ರಶ್ನಿಸಿದ ಅಶ್ವತ್ಥ ನಾರಾಯಣ, ಎಲ್ಲರನ್ನೂ ಅಪ್ಪಿಕೊಳ್ಳುವ ಸನಾತನ ಧರ್ಮವೇ ಹಿಂದೂ ಧರ್ಮ. ಪರಮೇಶ್ವರ್ ನಮ್ಮ ಧರ್ಮದ ಬಗ್ಗೆ ಹೀಯಾಳಿಸಿ ಮಾತಾಡುವುದು ಗೌರವ ತರುವಂತಹದ್ದಲ್ಲ. ಕೂಡಲೇ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಕ್ರಿಶ್ಚಿಯನ್, ಇಸ್ಲಾಂ ಸೀಮಿತವಾದ ಧರ್ಮಗಳು
ಡಾ.ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್, ಹಿಂದೂ ಧರ್ಮದ ಬಗ್ಗೆ ಪರಮೇಶ್ವರ್ ವ್ಯಂಗ್ಯವಾಗಿ ಮಾತಾಡಿದ್ದಾರೆ. ಹಿಂದೂ ಧರ್ಮವನ್ನು ಬೇರೆ ಧರ್ಮಕ್ಕೆ ಹೋಲಿಸುವ ಪ್ರಮೇಯ ಇಲ್ಲ ಎಂದರು. ಬೆಂಗಳೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಹಿಂದೂ ಧರ್ಮ ಒಂದು ಮಹಾಸಾಗರ ಎಂದರು. ಕ್ರಿಶ್ಚಿಯನ್, ಇಸ್ಲಾಂ ಧರ್ಮಗ್ರಂಥ, ಧರ್ಮಗುರು ನಂಬಿಕೊಂಡಿರುವ ಧರ್ಮ. ಆದರೆ ಎಲ್ಲರೂ ಒಪ್ಪಿಕೊಳ್ಳಬಹುದಾದ ಧರ್ಮ ಇದ್ದರೆ ಅದು ಹಿಂದೂ ಧರ್ಮ. ಪರಮೇಶ್ವರ್ ಅವರೇ ಹೋಲಿಕೆ ಮಾಡಲು ಹೋಗಬೇಡಿ. ಕ್ರಿಶ್ಚಿಯನ್, ಇಸ್ಲಾಂ ಸೀಮಿತವಾದ ಧರ್ಮಗಳು ಎಂದರು.
ಇದನ್ನೂ ಓದಿ: ಸನಾತನ ಧರ್ಮಕ್ಕೆ ಹುಟ್ಟಿಲ್ಲ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದೆ; ಗೌರಿನೆನಪು ಕಾರ್ಯಕ್ರಮದಲ್ಲಿ ಪ್ರಕಾಶ್ ರೈ
ಎಂಎಲ್ಸಿ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಕೆಟ್ಟ ಮಾತುಗಳನ್ನು ಡಾ.ಜಿ.ಪರಮೇಶ್ವರ್ ಬಾಯಿಂದ ನಿರೀಕ್ಷಿಸಿರಲಿಲ್ಲ. ವರ್ಗಾವಣೆ ದಂಧೆ ಅಸಹ್ಯ ಹುಟ್ಟಿಸುವ ರೀತಿ ನಡೆದು ಹೋಗಿದೆ. ಕಾಂಗ್ರೆಸ್ನ ಈ ಸಂಸ್ಕೃತಿ ಉದಯನಿಧಿ ಭಾವನೆಗೆ ಒತ್ತು ಕೊಡುತ್ತಿದೆ. ಇತರರನ್ನು ಓಲೈಕೆ ಮಾಡಲು ಹಿಂದೂ ಧರ್ಮದ ಅಸ್ವಿತ್ವ ಪ್ರಶ್ನಿಸಿದ್ದಾರೆ. ಹಿಂದೂಗಳ ವಿರೋಧಿಸುವುದೇ ಕಾಂಗ್ರೆಸ್ ಗುರಿ ಎಂಬುದು ಜಗಜ್ಜಾಹೀರಾಗಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 pm, Tue, 5 September 23