ಪಿಎಚ್​ಡಿಯ ಮೌಖಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಿಟಿ ರವಿ, ವಿಷಯ ಯಾವುದು?

ಬಿಜೆಪಿ ನಾಯಕ ಸಿಟಿ ರವಿ ರಾಜಕೀಯದಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಒಂದು ಕೈ ಮುಂದೆ. ಹೌದು.. ಸಿಟಿ ರವಿ ಅವರ ಪಿಎಚ್​ಡಿ ಪದವಿ ಅಂತಿಮ ಹಂತಕ್ಕೆ ಬಂದಿದೆ. ಇಂದು ಅವರು ಸಲ್ಲಿಸಿದ್ದ ಮಹಾ ಪ್ರಬಂಧದ ಮೇಲಿನ ಮೌಖಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಪಿಎಚ್​ಡಿಯ ಮೌಖಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಿಟಿ ರವಿ, ವಿಷಯ ಯಾವುದು?
Follow us
| Updated By: ರಮೇಶ್ ಬಿ. ಜವಳಗೇರಾ

Updated on: Dec 28, 2023 | 11:06 PM

ಮೈಸೂರು, (ಡಿಸೆಂಬರ್ 28): ಬಿಜೆಪಿ ನಾಯಕ ಸಿಟಿ ರವಿ (CT Ravi) ಅವರು ತಮ್ಮ ಪಿಎಚ್​ಡಿಯ(Doctor of Philosophy) ಮಹಾ ಪ್ರಬಂಧ ಸಲ್ಲಿಸಿದ್ದು, ಇದೀಗ “ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು ಅಧ್ಯಯನ” ಇದರ ಮೌಖಿಕ ಪರೀಕ್ಷೆಯನ್ನು ಇಂದು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮೌಖಿಕ ಪರೀಕ್ಷೆಯನ್ನು ಯಶಸ್ವಿಗೊಳಸಿರುವ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ ಜೆ ಸುರೇಶ್ ಅವರ ಮಾರ್ಗದರ್ಶನದಲ್ಲಿ ಸಿಟಿ ರವಿ ಅವರು “ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳು: ಒಂದು ಅಧ್ಯಯನ” ವಿಷಯದ ಮೇಲೆ ಸಂಶೋಧನೆ ನಡೆಸಿದ್ದಾರೆ. ಅಲ್ಲದೇ ಈಗಾಗಲೇ ಪಿಎಚ್.ಡಿ ಪದವಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗಕ್ಕೆ ಮಹಾ ಪ್ರಬಂಧ ಸಲ್ಲಿಸಿದ್ದು, ಇದೀಗ ಇದರ ಮೌಖಿಕ ಪರೀಕ್ಷೆಯನ್ನು ಇಂದು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಸಿಟಿ ರವಿ ಅವರ ಪಿಎಚ್​ಡಿ ಅಂತಿಮ ಹಂತಕ್ಕೆ ಬಂದಿದೆ.

ಇದನ್ನೂ ಓದಿ: HD Devegowda: ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪಿಹೆಚ್. ಡಿ ಸಂಶೋಧನೆಯಲ್ಲಿ ತೊಡಗಿರುವ ಬಿಜೆಪಿ ನಾಯಕ ಸಿಟಿ ರವಿ

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕರಾಮುವಿ) ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಿಟಿ ರವಿ ಅವರು ಇದೀಗ ಅದೇ ವಿವಿಯಲ್ಲಿ ಪಿಎಚ್​ಡಿ ಪದವಿ ಪಡೆದುಕೊಳ್ಳಲಿದ್ದಾರೆ. ಸಿಟಿ ರವಿ ಅವರು ಪಿಎಚ್​ಡಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನವದೆಹಲಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿದ್ದರು. ವಿಧೇಯ ವಿದ್ಯಾರ್ಥಿಯಂತೆ ದೇವೇಗೌಡ ಬಳಿ ಸಂಶೋಧನಾ ಮಾಹಿತಿ ಪಡೆದುಕೊಂಡಿದ್ದರು. ಈ ಬಗ್ಗೆ ಸ್ವತಃ ಸಿಟಿ ರವಿ ಅವರೇ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ