ಈಗ BJP ಕಚೇರಿಯಲ್ಲಿ ಕುಳಿತವರು ಪಂಚಾಯಿತಿ ಚುನಾವಣೆ ಸಹ ಗೆಲ್ಲಲ್ಲ: ಸ್ವಪಕ್ಷದ ನಾಯಕರ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ

| Updated By: ರಮೇಶ್ ಬಿ. ಜವಳಗೇರಾ

Updated on: Sep 10, 2023 | 4:28 PM

ಒಂದೆಡೆ ಜೆಡಿಎಸ್​ನೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ಆದ್ರೆ, ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆ ಸ್ಫೋಟವಾಗಿದೆ. ಯಡಿಯೂರಪ್ಪ ಹಾಗೂ ಬಿಎಲ್ ಸಂತೋಷ್​ ಎನ್ನುವ ಗುಂಪು ಹುಟ್ಟಿಕೊಂಡಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅದರಲ್ಲೂ ರೇಣುಕಾಚಾರ್ಯ ಸ್ವಪಪಕ್ಷದ ನಾಯಕರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ.

ಈಗ BJP ಕಚೇರಿಯಲ್ಲಿ ಕುಳಿತವರು ಪಂಚಾಯಿತಿ ಚುನಾವಣೆ ಸಹ ಗೆಲ್ಲಲ್ಲ: ಸ್ವಪಕ್ಷದ ನಾಯಕರ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ
ಎಂಪಿ ರೇಣುಕಾಚಾರ್ಯ
Follow us on

ದಾವಣಗೆರೆ, (ಸೆಪ್ಟೆಂಬರ್ 10): ವಿಧಾನಸಭೆ ಚುನಾವಣೆಯಲ್ಲಿ(Karnataka Assembly Elections 2023) ಹೀನಾಯವಾಗಿ ಸೋಲುಕಂಡು ಸೊರಗಿರುವ ಬಿಜೆಪಿ, ಲೋಕಸಭೆ ಚುನಾವಣೆಯಲ್ಲಾದರೂ(Loksabha Elections 2024) ಕಾಂಗ್ರೆಸ್​ಗೆ(Congress) ತಿರುಗೇಟು ಕೊಡಬೇಕೆಂದು ಜೆಡಿಎಸ್​ ಜೊತೆ ಮೈತ್ರಿಗೆ(BJP-JDS alliance) ಮುಂದಾಗಿದೆ. ಆದ್ರೆ, ಬಿಜೆಪಿಯೊಳಗೆ ಗುಂಪುಗಾರಿಕೆ ಶುರುವಾಗಿದ್ದು, ಯಡಿಯೂರಪ್ಪ ಆಪ್ತ ನಾಯಕರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್​(ಭಳ ಶಅನತೊಸಹ) ವಿರುದ್ಧ ಸಿಡಿದೆದ್ದಿದ್ದಾರೆ. ಅದರಲ್ಲೂ ಎಂಪಿ ರೇಣುಕಾಚಾರ್ಯ ಪದೇ ಪದೇ ಸಂತೋಷ್​ ಹಾಗೂ ಆಪ್ತ ಬಳಗಳದಲ್ಲಿ ಗುರುತಿಸಿಕೊಂಡಿರುವ ನಾಯಕರ ವಿರುದ್ಧ ಕೆಂಡಕಾರುತ್ತಿದ್ದಾರೆ. ಅದನ್ನೂ ಇಂದೂ ಮುಂದುವರೆಸಿರುವ ರೇಣುಕಾಚಾರ್ಯ, ಈಗ BJP ಕಚೇರಿಯಲ್ಲಿ ಕುಳಿತವರು ಪಂಚಾಯಿತಿ ಚುನಾವಣೆ ಸಹ ಗೆಲ್ಲಲ್ಲ ಎಂದು ಕಿಡಿಕಾರಿದ್ದಾ ರೆ.

ದಾವಣಗೆರೆಯಲ್ಲಿ ಇಂದು(ಸೆಪ್ಟೆಂಬರ್ 10) ಸುದ್ದಿಗಾರರಿಂದಿಗೆ ಮಾತನಾಡಿದ ರೇಣುಕಾಚಾರ್ಯ, ಈಗ BJP ಕಚೇರಿಯಲ್ಲಿ ಕುಳಿತವರು ಪಂಚಾಯಿತಿ ಚುನಾವಣೆ ಸಹ ಗೆಲ್ಲಲ್ಲ. ಮೇಲಾಗಿ ಅವರು ನನ್ನನ್ನು ಏನೂ ಮಾಡುವುದಕ್ಕೆ ಆಗಲ್ಲ ಎಂದು ತಮಗೆ ಶೋಕಾಸ್ ನೋಟಿಸ್ ನೀಡಿರುವ ಬಗ್ಗೆ ಪರೋಕ್ಷವಾಗಿ ಬಿ.ಎಲ್​ಸಂತೋಷ್​ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಜಗದೀಶ್​ ಶೆಟ್ಟರ್​ ಗೇಮ್​ ಪ್ಲ್ಯಾನ್​: ಲಿಂಗಾಯತ ನಾಯಕರೇ ಟಾರ್ಗೆಟ್

ಈಗ ಎಲ್ಲರೂ ಬಿ.ಎಸ್​.ಯಡಿಯೂರಪ್ಪ ನಾಯಕತ್ವ ಎಂದು ಹೇಳುತ್ತಿದ್ದಾರೆ. ಪಕ್ಷ ಸಂಪೂರ್ಣವಾಗಿ ಡ್ಯಾಮೇಜ್ ಆದ ಬಳಿಕ ಈಗ ಹೇಳುತ್ತಿದ್ದಾರೆ. ಈ ಹಿಂದೆ ನಳಿನ್ ಕುಮಾರ್​ ಕಟೀಲು ಆಡಿಯೋ ವೈರಲ್​ ಆಗಿತ್ತು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪರನ್ನು ಮುಗಿಸುವುದಾಗಿ ಹೇಳಿದ್ದರು. ಬಿಜೆಪಿಯನ್ನು ಅಧಿಕಾರಕ್ಕೆ ತಂದ B.S.ಯಡಿಯೂರಪ್ಪ ಅವರನ್ನೇ ಕೆಳಗಿಳಿಸಿದ್ದರು. ಇದರ ಪರಿಣಾಮ‌ ಅನುಭವಿಸಿತ್ತಿದ್ದಾರೆ ಕಿಡಿಕಾರಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ