ಕರುಣಾನಿಧಿ ತಳಿಯೇ ದೇಶಕ್ಕೆ, ಧರ್ಮಕ್ಕೆ ನಿಷ್ಠೆ ಇಲ್ಲದ ವಿಷದ ಹಾವು; ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು

ಬಿಜೆಪಿ ವಿಷದ ಹಾವು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಕರುಣಾನಿಧಿ ಕುಟುಂಬ ಒಂದು ಕಾಲದಲ್ಲಿ ಎಲ್​ಟಿಟಿಇಗೆ ಬೆಂಬಲ ಕೊಟ್ಟವರು. ದೇಶ ವಿರೋಧಿ ಚಟುವಟಿಕೆಗೆ ಬೆಂಬಲ ನೀಡಿದವರು. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ಕರುಣಾನಿಧಿ ತಳಿಯೇ ದೇಶಕ್ಕೆ, ಧರ್ಮಕ್ಕೆ ನಿಷ್ಠೆ ಇಲ್ಲದ ವಿಷದ ಹಾವು; ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು
ಬಸನಗೌಡ ಪಾಟೀಲ್ ಯತ್ನಾಳ್
Edited By:

Updated on: Sep 12, 2023 | 7:24 PM

ವಿಜಯಪುರ, ಸೆಪ್ಟೆಂಬರ್ 12: ಬಿಜೆಪಿ ವಿಷದ ಹಾವು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪ್ರತಿಕ್ರಿಯಿಸಿದ್ದು, ಕರುಣಾನಿಧಿ ತಳಿಯೇ ದೇಶಕ್ಕೆ, ಧರ್ಮಕ್ಕೆ ನಿಷ್ಠೆ ಇಲ್ಲದ ವಿಷದ ಹಾವು ಎಂದು ತಿರುಗೇಟು ನೀಡಿದ್ದಾರೆ. ವಿಜಯಪುರ ನಗರದಲ್ಲಿ ಕರುಣಾನಿಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಕರುಣಾನಿಧಿ ತಳಿಯೆ ವಿಷದ ಹಾವು. ಅದು ಕೆಟ್ಟ ತಳಿ ಇದೆ. ಈ ತಳಿಗೆ ದೇಶಕ್ಕೆ ನಿಷ್ಠೆ ಇಲ್ಲ, ಧರ್ಮಕ್ಕೆ ನಿಷ್ಠೆ ಇಲ್ಲ ಎಂದು ಹೇಳಿದ್ದಾರೆ.

ಕರುಣಾನಿಧಿ ಕುಟುಂಬ ಒಂದು ಕಾಲದಲ್ಲಿ ಎಲ್​ಟಿಟಿಇಗೆ ಬೆಂಬಲ ಕೊಟ್ಟವರು. ದೇಶ ವಿರೋಧಿ ಚಟುವಟಿಕೆಗೆ ಬೆಂಬಲ ನೀಡಿದವರು. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ನಟನನ್ನು ಹಂದಿಗೆ ಹೋಲಿಸಿದ್ದಾರೆ. ಸನಾತನ ಧರ್ಮ ಕಾಗೆ ಎಂಬ ಪ್ರಕಾಶ್ ರಾಜ್ ಹೇಳಿಕೆಗೆ ತಿರುಗೇಟು ನೀಡಿ, ಆತ ಹಂದಿ ಇದ್ದ ಹಾಗೆ. ಪ್ರಕಾಶ್ ರೈ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ. ಸ್ವಚ್ಛ ಮಾಡಲು ಹಂದಿ ಇರುತ್ತದೆ, ಹಾಗೆ ನಮ್ಮಲ್ಲಿ ಪ್ರಕಾಶ್ ರೈ ಎನ್ನುವ ಹಂದಿ ಇದೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪರ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್; ಡಿಕೆ ಶಿವಕುಮಾರ್​ಗೆ ಸವಾಲು

ಪಂಚಮಸಾಲಿ ಹೋರಾಟದ ಬಗ್ಗೆ ಏನಂದ್ರು ಯತ್ನಾಳ್?

ಮತ್ತೆ ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಪಂಚಮಸಾಲಿ ರಿಸರ್ವೇಷನ್ ನಾವು ಈಗಾಗಲೇ ಕೊಟ್ಟಿದ್ದೇವೆ. ಮುಂದೆ ಏನಾದರೂ ಆಗಬೇಕಾದ ಆದರೆ ಗುರುಗಳ ಶಿಷ್ಯಂದಿರು ಇದ್ದಾರೆ. ಕಾಶಪ್ಪನವರ, ವಿನಯ ಕುಲಕರ್ಣಿ, ಲಕ್ಷ್ಮಿ ಹೆಬ್ಬಾಳ್ಕರ ಅವರು ಇದ್ದಾರೆ, ಅವರ ಸರ್ಕಾರವಿದೆ ನೊಡೋಣ. ನಾವು ಮಾಡಿಬಿಟ್ಟಿದ್ದೇವೆ, ಸುಮ್ಮಸುಮ್ಮನೇ ಹಾಗೆಲ್ಲ (ಪದೆಪದೆ) ಭಾಗವಹಿಸಲು ನಮಗೆ ಕೆಲಸ ಇಲ್ಲವಾ? ಹಾಗೆಲ್ಲ ಏನು ಭಾಗವಹಿಸುವುದು? ನಮ್ಮ ಸರ್ಕಾರ ಇದ್ದಾಗ ನೋಟಿಫಿಕೇಷನ್ ಮಾಡಿದ್ದೀವಿ, ರಾಜ್ಯಪಾಲರ ಸುಗ್ರೀವಾಜ್ಞೆ ಆಗಿಬಿಟ್ಟಿದೆ. ಈಗ ಅದನ್ನು ಜಾರಿಗೊಳಿಸುವುದು ಕಾಂಗ್ರೆಸ್ ಸರ್ಕಾರದ ಕೈಯಲ್ಲಿದೆ, ನಮ್ಮ ಕೈಯಲ್ಲಿ ಏನೂ ಇಲ್ಲಾ. ಪಂಚಮಸಾಲಿಯವರು ಕಾಂಗ್ರೆಸ್ ನಾಯಕರು ಸಾಕಷ್ಟು ಜನ ಎಂಎಲ್ಎ, ಮಂತ್ರಿಗಳು ಆಗಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:49 pm, Tue, 12 September 23