ನುಡಿದಂತೆ ನಡೆದ ಮುನಿರತ್ನ: ಡಿಕೆ ಶಿವಕುಮಾರ್ ಇದ್ದಲ್ಲಿಗೆ ಹೋಗಿ ಕಾಲಿಗೆ ಬಿದ್ದ ಬಿಜೆಪಿ ಶಾಸಕ

| Updated By: Digi Tech Desk

Updated on: Oct 11, 2023 | 2:44 PM

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮೇರೆಗೆ ಬಿಜೆಪಿ ಶಾಸಕ ಮುನಿರತ್ನ ಉಪವಾಸ ಸತ್ಯಾಗ್ರಹ ವಾಪಸ್ ಪಡೆದುಕೊಂಡಿದ್ದಾರೆ. ಬಳಿಕ ನೇರವಾಗಿ ಡಿಕೆ ಶಿವಕುಮಾರ್ ಬಳಿಕಗೆ ಹೋಗಿ ಕ್ಷೇತ್ರದ ಅನುದಾನವನ್ನು ಮರು ಬಿಡುಗಡೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು. ಇದರೊಂದಿಗೆ ಡಿಕೆ ಶಿವಕುಮಾರ್ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಡುವಿನ ರಾಜಕೀಯ ಜಂಗೀ ಕುಸ್ತಿ ಕ್ಲೈಮ್ಯಾಕ್ಸ್​ ಹಂತ ತಲುಪಿದೆ.

ನುಡಿದಂತೆ ನಡೆದ ಮುನಿರತ್ನ: ಡಿಕೆ ಶಿವಕುಮಾರ್ ಇದ್ದಲ್ಲಿಗೆ ಹೋಗಿ ಕಾಲಿಗೆ ಬಿದ್ದ ಬಿಜೆಪಿ ಶಾಸಕ
ಡಿಕೆಶಿ ಕಾಲಿಗೆ ಬಿದ್ದ ಮುನಿರತ್ನ
Follow us on

ಬೆಂಗಳೂರು, (ಅಕ್ಟೋಬರ್ 11): ರಾಜರಾಜೇಶ್ವರಿನಗರ​ ವಿಧಾನಸಭಾ ಕ್ಷೇತ್ರದ ಅನುದಾದನ ಕಡಿತಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ಶಾಸಕ ಮುನಿರತ್ನ (Muniratna) ಅವರ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಮುನಿರತ್ನ ಅವರ ಮನವೊಲಿಸಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಸದ್ಯ ಮುನಿರತ್ನ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದುಕೊಂಡರು. ಬಳಿಕ ನೇರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇರುವ ಸ್ಥಳಕ್ಕೆ ಹೋಗಿ ಮನವಿ ಸಲ್ಲಿಸಿದರು. ಈ ವೇಳೆ ಹೇಳಿದಂತೆ ಡಿಕೆ ಶಿವಕುಮಾರ್ ಅವರಿಗೆ ಕಾಲಿಗೆ ನಮಸ್ಕರಿಸಿದರು.

ಹೇಳಿದಂತೆ ಕಾಲಿಗೆ ಬಿದ್ದ ಮುನಿರತ್ನ

ನನ್ನ ಕ್ಷೇತ್ರದ ಜನರಿಗಾಗಿ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲಿಗೆ ಬೀಳಲೂ ಸಿದ್ಧನಿದ್ದೇನೆ. ಪ್ರತಿಭಟನೆ ಮುಗಿದ ಕೂಡಲೇ ಅವರು ಎಲ್ಲಿರುತ್ತಾರೋ ಅಲ್ಲಿಗೆ ಹೋಗಿ ಕಾಲು ಹಿಡ್ಕೊಂಡು‌ ಬಿಡುತ್ತೇನೆ ಎಂದು ನಿನ್ನೆ(ಅ.10) ಹೇಳಿದ್ದರು. ಅದರಂತೆ ಇದೀಗ ಮುನಿರತ್ನ ಹೇಳಿದಂತೆ ಪ್ರತಿಭಟನೆ ಬಳಿಕ ನೇರವಾಗಿ ಡಿಕೆ ಶಿವಕುಮಾರ್ ಇದ್ದ ಸ್ಥಳಕ್ಕೆ ಹೋಗಿ ಕಾಲಿಗೆ ನಮಸ್ಕರಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕಂಬಳ ಕೆರೆ ಪೂಜೆ ಕಾರ್ಯಕ್ರಮದಲ್ಲಿದ್ದ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಹಿಂಪಡೆದ 126 ಕೋಟಿ ರೂಪಾಯಿ ಅನುದಾನ ಮರು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಡಿಕೆ ಶಿವಕುಮಾರ್ ಸಹ ಮುನಿರತ್ನ ಹೆಗಲ ಮೇಲೆ ಕೈಹಾಕಿ ಆತ್ಮೀಯವಾಗಿ ಮಾತಾಡಿಸಿ ಮನವಿ ಪತ್ರ ಸ್ವೀಕರಿಸಿದರು.

ಮನವಿ ಪತ್ರ ಸ್ವೀಕರಿಸಿ ಡಿಕೆ ಶಿವಕುಮಾರ್ ಹೇಳಿದ್ದೇನು?

ಮುನಿರತ್ನ ಅವರ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರಣಿ, ಹೋರಾಟ ನಡೆಯಬೇಕು. ಬಿಜೆಪಿ ಶಾಸಕ ಮುನಿರತ್ನ ಮನವಿಪತ್ರವನ್ನು ಸ್ವೀಕಾರ ಮಾಡಿದ್ದೇನೆ. ಶಾಸಕ ಮುನಿರತ್ನ ಮನವಿ ಸಲ್ಲಿಸಿದ್ದರಲ್ಲಿ ತಪ್ಪೇನು ಇಲ್ಲ. ನಾನೀಗ ಮೈಸೂರಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದೇನೆ. ಅಷ್ಟೊರಳಗೆ ಸಮಯ ಸಿಕ್ಕರೆ ಕರೆದು ಮಾತಾಡುವುದಾಗಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಅನುದಾನ ಮರು ಬಿಡುಗಡೆ ಮಾಡುವಂತೆ ಬೆಂಗಳೂರು ನಗರ ಉಸ್ತುವಾರಿ ಡಿಕೆ ಶಿವಕುಮಾರ್ ಅವರಿಗೆ ಮುನಿರತ್ನ ಅವರು ಮನವಿ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದೇನೆ.ಕೆಲವೇ ಗಂಟೆಯಲ್ಲಿ ಕರೆದು ಮಾತನಾಡುವುದಾಗಿಹೇಳಿದ್ದಾರೆ ಎಂದು ಹೇಳಿದರು.

ಅಳಲು ತೋಡಿಕೊಂಡ ಮುನಿರತ್ನ

ಪ್ರತಿಭಟನೆ ಕೈಬಿಟ್ಟ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುನಿರತ್ನ, ಚುನಾವಣಾ ಫಲಿತಾಂಶ ಬಂದ ದಿನದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಕಷ್ಟ ಆಗುತ್ತಿದೆ. ಪೊಲೀಸ್ ದೌರ್ಜನ್ಯ, ಕಾಂಗ್ರೆಸ್ ಬೆಂಬಲಿಗರಿಂದ ಸಾರ್ವಜನಿಕರಿಗೆ ಕಿರುಕುಳ ಹೆಚ್ಚಾಗುತ್ತಿದೆ. ನಾನು ಒಂದು ವಾರ್ಡ್ ತನಿಖೆಗೆ ಪತ್ರ ಬರೆದರೆ ಇಡೀ ಕ್ಷೇತ್ರದ ಹಣ ತಡೆಹಿಡಿದಿದ್ದಾರೆ. ಪರಾಜಿತ ಅಭ್ಯರ್ಥಿ ಮತ್ತು ಅವರ ತಂದೆ ನೇರವಾಗಿ ಅಧಿಕಾರಿಗಳ ಸಭೆ, ದೂರವಾಣಿ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೆ ಕುಸುಮಾ ಅವರ ವಿರುದ್ಧ ಆರೋಪ ಮಾಡಿದರು.

ಡಿ.ಕೆ. ಸುರೇಶ್ ಅವರು ಸಂಸದರಾಗಿರುವ ಕ್ಷೇತ್ರಕ್ಕೆ ಹಣ ಕೊಡಿಸುವುದು ಅವರ ಕರ್ತವ್ಯ. ಅನುದಾನ ಬೇರೆಡೆ ವರ್ಗಾವಣೆ ಮಾಡಿದರೂ ಒಂದೇ ಒಂದು ಮಾತು ಮಾತಾಡಿಲ್ಲ. ಎಲ್ಲಾ ಶಾಸಕರನ್ನು ನೋಡುವ ರೀತಿಯಲ್ಲೇ ನನ್ನನ್ನೂ ನೋಡಿ. ಶಾಸಕನಾಗಿ ನಾನೇನು ತಪ್ಪು ಮಾಡಿದ್ದೇನೆ? ಸಂಸದರಿಗೆ ಇಷ್ಟೊಂದು ದ್ವೇಷ ಯಾಕೆ? ನಿಮ್ಮಲ್ಲಿ ನಾನೊಬ್ಬ ಶಾಸಕ. ಒಟ್ಟಾಗಿ ಹೋಗೋಣ, ಕೆಲಸ ಮಾಡೋಣ. ಚುನಾವಣೆಯಲ್ಲಿ ನೀವು ನನ್ನ ಸೋಲಿಸಲು ಕೆಲಸ ಮಾಡಿ ತಪ್ಪು ಇಲ್ಲ ಎಂದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 2:16 pm, Wed, 11 October 23