ಕೇಂದ್ರ ಸಚಿವ ಭಗವಂತ ಖೂಬಾ ಹಠಾವೋ…ಬಿಜೆಪಿ ಬಚಾವೋ…ಧ್ವನಿ ಎತ್ತಿದ ಬಿಜೆಪಿ ಶಾಸಕ

ಸ್ವಪಕ್ಷದ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಬಿಜೆಪಿ ಶಾಸಕ ಪ್ರಭು ಚೌಹಾಣ್ ನಡುವಿನ ಮಾತಿನ ಸಮರ ತಾರಕಕ್ಕೇರಿದ್ದು, ಖೂಬಾ ಹಠಾವೋ...ಬಿಜೆಪಿ ಬಚಾವೋ...ಎಂದು ಪ್ರಭು ಚೌಹಾಣ್ ಧ್ವನಿ ಎತ್ತಿದ್ದಾರೆ.

ಕೇಂದ್ರ ಸಚಿವ ಭಗವಂತ ಖೂಬಾ ಹಠಾವೋ...ಬಿಜೆಪಿ ಬಚಾವೋ...ಧ್ವನಿ ಎತ್ತಿದ ಬಿಜೆಪಿ ಶಾಸಕ
ಭಗವಂತ ಖೂಬಾ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Aug 15, 2023 | 3:48 PM

ಬೀದರ್, (ಆಗಸ್ಟ್ 15): ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabhu Chauhan) ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ(bhagwanth khuba) ನಡುವಿನ ವಾಕ್ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಜೀವ ಬೆದರಿಕೆ ಸೇರಿದಂತೆ ಇತರೆ ಗಂಭೀರ ಆರೋಪ ಮಾಡಿದ್ದ ಪ್ರಭು ಚೌಹಾಣ್, ಇದೀಗ ಮತ್ತೆ ಭಗವಂತ ಖೂಬಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೀದರ್​ ಜಿಲ್ಲೆ ಔರಾದ್​ನಲ್ಲಿ ಮಾತನಾಡಿದ ಪ್ರಭು ಚೌಹಾಣ್, ಯಾವ ರೀತಿ ಟಾರ್ಚರ್ ಮಾಡಿದ್ದಾರೆ ನನಗೆ ಗೊತ್ತಿದೆ. ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಅವರ ಜತೆ ಕಾಂಗ್ರೆಸ್ಸಿಗರಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಬೆಂಬಲಿಸಿದವರು ಅವರ ಜೊತೆಗೆ ಇದ್ದರು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಖೂಬಾ ಹಗಲಿರುಳು ದುಡಿದಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದರು.

ಭಗವಂತ ಖೂಬಾ ಸುಳ್ಳಿನ‌ ಸರದಾರ. ಲಕ್ಕಿಯಾಗಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ಭಗವಂತ ಖೂಬಾ ಗೆದ್ದಿದ್ದಾರೆ. ಅವರಿಗೆ ಸಂಘಟನೆ ಗೊತ್ತಿಲ್ಲ ಬಿಜೆಪಿ ಕಾರ್ಯಕರ್ತರನ್ನ ಅವರು ಬೆಳೆಸಿಲ್ಲ. ಈ ಸಲ ಭಗವಂತ ಖೂಬಾ ಅವರಿಗೆ ಪಕ್ಷ ಟೀಕೇಟ್ ಕೊಡಬಾರದು. ಅವರು ಎಲ್ಲರ ವಿರೋಧ ಕಟ್ಟಿಕೊಂಡಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಹಠಾವೋ ಬಿಜೆಪಿ ಬಚಾವೋ ಎಂದು ಕರೆ ನೀಡಿದರು.

ಇದನ್ನೂ ಓದಿ: ಭಗವಂತ ಖೂಬಾ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಪ್ರಭು ಚೌಹಾಣ್

ಕೇಂದ್ರ ಸಚಿವರನ್ನಾಗಿ ಮಾಡಿದ ಪಕ್ಷಕ್ಕೆ ಖೂಬಾ ದ್ರೋಹ ಮಾಡಿದ್ದಾರೆ. ಭಗವಂತ ಖೂಬಾರನ್ನು ನಾನು, ನಮ್ಮ ಪಕ್ಷ ಸಹಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿಕೊಂಡು ಖೂಬಾ ಗೆದ್ದಿದ್ದಾರೆ. ಖೂಬಾಗೆ ಸಂಘಟನೆ ಗೊತ್ತಿಲ್ಲ, ಕಾರ್ಯಕರ್ತರನ್ನು ಅವರು ಬೆಳೆಸಿಲ್ಲ. ಖೂಬಾರಿಂದ ನನಗೆ ಜೀವ ಬೆದರಿಕೆ ಇದೆ ಹೀಗಾಗಿ ದೂರು ಕೊಟ್ಟಿರುವೆ ಎಂದು ಹೇಳಿದರು.

ತಾಯಿಗೆ ದ್ರೋಹ ಮಾಡುತ್ತಿರುವ ಭಗವಂತ ಖೂಬಾರನ್ನ ನಾನು ನಮ್ಮ ಪಕ್ಷ ಸಹಿಸಿಕೊಳ್ಳುವುದಿಲ್ಲ. ನಾನು ನನ್ನ 20ನೇ ವಯಸ್ಸಿನಲ್ಲೇ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದಾನೆ. ಅವರು ಕಾಂಗ್ರೆಸ್ ನಿಂದ ಬಂದು ಬಿಜೆಪಿಯಿಂದ ಸಂಸದರಾಗಿದ್ದಾರೆ. ನಾನು ಅಪ್ಪಟ ಬಿಜೆಪಿಗ. ಭಗವಂತ ಖೂಬಾ ಭಾಷಣ ಮಾಡುವಾಗ ಪ್ರಭು‌ ಚೌಹಾಣ್​ಗೆ ಕ್ಯಾನ್ಸರ್ ಬರಲಿ. ಪ್ರಭು ಚೌಹಾಣ್​ಗೆ ಏಡ್ಸ್ ಬರಲಿ. ಅವರು ರಸ್ತೆ ಅಪಘಾತದಲ್ಲಿ ಸತ್ತರು ಅವರ ಮಣ್ಣಿಗೆ ಹೋಗುವುದಿಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಸಾರ್ವಜನಿಕವಾಗಿ ಭಾಷಣ ಮಾಡುತ್ತಾರೆ ಎಂದು ಕಿರಿಕಾರಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು