Bellary: ಸೀರೆ ಹಂಚುವವರು ಹಂಚಲಿ ನಾನು ಹಕ್ಕುಪತ್ರ ನೀಡುತ್ತಿದ್ದೇನೆ: ಅತ್ತಿಗೆ ಅರುಣಾಗೆ ಟಾಂಗ್​ ನೀಡಿದ ಸೋಮಶೇಖರ್​ ರೆಡ್ಡಿ

|

Updated on: Feb 26, 2023 | 1:55 PM

ಸೀರೆ ಹಂಚುವವರು ಹಂಚಲಿ ನನಗೆ ಯಾವುದೇ ತೊಂದರೆ ಇಲ್ಲ. ಕ್ಷೇತ್ರದ ಜನರಿಗೆ ಮನೆ ಹಕ್ಕುಪತ್ರ ನೀಡುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

Bellary: ಸೀರೆ ಹಂಚುವವರು ಹಂಚಲಿ ನಾನು ಹಕ್ಕುಪತ್ರ ನೀಡುತ್ತಿದ್ದೇನೆ: ಅತ್ತಿಗೆ ಅರುಣಾಗೆ ಟಾಂಗ್​ ನೀಡಿದ ಸೋಮಶೇಖರ್​ ರೆಡ್ಡಿ
ಅರುಣಾ ರೆಡ್ಡಿ, (ಎಡಚಿತ್ರ) ಸೋಮಶೇಖರ ರೆಡ್ಡಿ (ಬಲಚಿತ್ರ)
Follow us on

ಬಳ್ಳಾರಿ: ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ (Janardhana Reddy) ಸೆಕೆಂಡ್​ ಇನಿಂಗ್ಸ್​​ ಪ್ರಾರಂಭಿಸಲು ಮುಂದಾಗಿದ್ದು, ವಿಧಾನಸಭೆ ಚುನಾವಣೆಗೆ (Assembly Election) ರೆಡಿಯಾಗುತ್ತಿದ್ದಾರೆ. ಬಿಜೆಪಿಯಿಂದ ಹೊರ ಬಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRP) ಹೊಸ ಪಕ್ಷ ಸ್ಥಾಪಿಸಿರುವ ರೆಡ್ಡಿ ಈಗಾಗಲೇ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಜೊತೆಗೆ ಹೊಸಪಕ್ಷ ಸಂಘಟನೆಗೆ ಒಂದಲ್ಲಾ ಒಂದು ರೀತಿಯಲ್ಲಿ ಕಸರತ್ತು ನಡೆಸಿದ್ದು, ತನ್ನ ಪತ್ನಿ ಅರುಣಾ ಲಕ್ಷ್ಮೀ ರೆಡ್ಡಿಯನ್ನು ಬಳ್ಳಾರಿ ಕ್ಷೇತ್ರದಿಂದ ಕಣಕ್ಕೆ ಇಳಿಸಿದ್ದಾರೆ. ಈ ಹಿನ್ನೆಲೆ ಮತದಾರರನ್ನು ಸೆಳೆಯಲು ಕಸರತ್ತು ನಡೆದಿದ್ದು, ಕಳೆದ ಕೆಲವು ದಿನಗಳ ಹಿಂದೆ ರೆಡ್ಡಿ ಪುತ್ರಿ ಬ್ರಹ್ಮಿಣಿ ಸೀರೆ, ಮತ್ತು ಅರುಣಾ ಲಕ್ಷ್ಮೀ ರೆಡ್ಡಿ ಸೀರೆ ಹಂಚಿಕೆ ಮಾಡಿದ್ದು ಸಖತ್ ಸುದ್ದಿಯಾಗಿತ್ತು. ಈ ವಿಚಾರವಾಗಿ ಕುಕ್ಕರ್ ಹಂಚುವವರು ಹಂಚಲಿ ನನಗೆ ಯಾವುದೇ ತೊಂದರೆ ಇಲ್ಲ. ಕ್ಷೇತ್ರದ ಜನರಿಗೆ ಮನೆ ಹಕ್ಕುಪತ್ರ ನೀಡುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ (Somashekar Reddy) ಹೇಳಿದ್ದಾರೆ.

ಇದರ ಮುಂದೆ ಸೀರೆ, ಕುಕ್ಕರ್ ಯಾವ ಲೆಕ್ಕ. ಬಳ್ಳಾರಿ ನಗರ 12,800 ಮನೆಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಕೇಂದ್ರ ಸಚಿವ ಅಮಿತ್ ಶಾ ಪ್ರವಾಸ ಬಳಿಕ ನನಗೆ ಗೆಲುವಿನ ವಿಶ್ವಾಸ ಹೆಚ್ಚಾಗಿದೆ. ಈ ಬಾರಿ ಗೆಲವು ನನಗೆ ಉತ್ಸಾಹ ಕೂಡ ಹೆಚ್ಚಾಗಿದೆ. ಇನ್ನೂ ಮೋದಿ ಕೂಡ ಬರುವವರಿದ್ದಾರೆ ಎಂದರು.

ಬಳ್ಳಾರಿಯಿಂದಲೇ ಚುನಾವಣೆ ಸ್ಪರ್ಧೆ ಮಾಡಲು ಯಡಿಯೂರಪ್ಪಗೆ ಆಹ್ವಾನ

ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ. ಈಗ ಸೋಮಶೇಖರ ರೆಡ್ಡಿ ಯಡಿಯೂರಪ್ಪ ಧೀಮಂತ ನಾಯಕ ಬಳ್ಳಾರಿ ನಗರ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಲಿ. ಯಡಿಯೂರಪ್ಪ ಅವರಿಗೆ ಕ್ಷೇತ್ರ ಬಿಟ್ಟ ಕೊಡುವೆ. ಯಡಿಯೂರಪ್ಪ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಿದ್ರಿ‌ 1 ಲಕ್ಷ ಗಳ ಅಂತರ ಗೆಲವು ಆಗುತ್ತದೆ ಎಂದು ಮೊನ್ನೆ ಸಂಡೂರಿಗೆ ಬಂದಾಗ ಬಿಎಸ್‌ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವೆ. ಅವರಿಗಾಗಿ ಬಳ್ಳಾರಿ ನನ್ನ ಕ್ಷೇತ್ರ ಬಿಟ್ಟು ಕೊಡುವೆ. ಅವರ ಸಲಹೆ, ಮಾರ್ಗದರ್ಶನ ಬೇಕು ನನಗೆ ಅಷ್ಟೇ ಹೇಳಿದರು.

ಸಚಿವ ಡಾ. ಕೆ ಸುಧಾಕರ್ ಅವರಿಗೆ ಪ್ರಣಾಳಿಕೆ ಸಮಿತಿ ಜವಾಬ್ದಾರಿ ನೀಡಿರುವ ವಿಚಾರವಾಗಿ ಮಾತನಾಡಿದ ಅವರು ಜ್ಞಾನ ಇದ್ದವರಿಗೆ ಮಾತ್ರ ಪ್ರಣಾಳಿಕೆ ಸಮಿತಿ ಜವಾಬ್ದಾರಿ ನೀಡುತ್ತಾರೆ. ಎಲ್ಲರಿಗೂ ನಾಲೆಡ್ಜ್ ಇರುತ್ತದೆ ಅದರೇ ಕೆಲವರಿಗೆ ಅವಕಾಶ ಸಿಗುತ್ತದೆ. ಸಮಿತಿ ಮಾಡಿದಾಗ ಅಸಮಾಧಾನ ಇದ್ದೇ ಇರುತ್ತದೆ ಇದು ಸಾಮಾನ್ಯ. ಏನು ಮಾಡೋಕೆ ಅಗಲ್ಲ ಎಂದು ಪರೋಕ್ಷವಾಗಿ ಸುಧಾಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:54 pm, Sun, 26 February 23