ಬೆಂಗಳೂರು, (ಆಗಸ್ಟ್ 20): ಯಶವಂತಪುರ ಕ್ಷೇತ್ರದಲ್ಲಿ ಕೆಲ ಮೂಲ ಬಿಜೆಪಿಗರ ನಡೆಯಿಂದ ಬೇಸತ್ತು ಅಸಮಾಧಾನಗೊಂಡಿರುವ ಶಾಸಕ ಎಸ್ಟಿ ಸೋಮಶೇಖರ್ಗೆ (ST Somashekar) ಕಾಂಗ್ರೆಸ್ (Congress) ಗಾಳ ಹಾಕಿದೆ. ಹೇಗಾದರೂ ಮಾಡಿ ಸೋಮಶೇಖರ್ ಅವರನ್ನು ಕಾಂಗ್ರೆಸ್ ವಾಪಸ್ ಕರೆಯಿಸಿಕೊಳ್ಳಬೇಕೆಂದು ಡಿಕೆ ಶಿವಕುಮಾರ್(DK Shivakumar) ಪ್ಲ್ಯಾನ್ ಮಾಡಿದ್ದಾರೆ. ಈ ವಿಷಯ ತಿಳಿದುಯುತ್ತಿದ್ದಂತೆಯೇ ಬಿಜೆಪಿ(BJP) ನಾಯಕರು ಸೋಮಶೇಖರ್ ಅವರನ್ನು ಹಿಡಿದಿಟ್ಟುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹೀಗಾಗಿ ಕಳೆದ ಎರಡ್ಮೂರು ದಿನಗಳಿಂದ ಸೋಮಶೇಖರ್ ಪಕ್ಷಾಂತರ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಇಂದು (ಆಗಸ್ಟ್ 20) ಸೋಮಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಸಿಎಂ ಅಧಿಕೃತ ನಿವಾಸದಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಯಶವಂತಪುರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು ಸಲ್ಲಿಸಿದರು. ಈ ವೇಳೆ ತಮ್ಮ ಕ್ಷೇತ್ರದ ಕಾರ್ಯಗಳ ಬಗ್ಗೆ ಒಟ್ಟು ಎರಡು ಮನವಿ ಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಕ್ಷೇತ್ರದ ಸಮಸ್ಯೆ ವಿಚಾರವಾಗಿ ಮಾತನಾಡಲು ಸಿಎಂ ಅವರಿಗೆ ಒಂದು ವಾರದಿಂದ ಅಪಾಯಿಂಟ್ಮೆಂಟ್ ಕೇಳಿದ್ದೆ. ಇವತ್ತು ಬರುವುದಕ್ಕೆ ಹೇಳಿದ್ದರು. ಅದರಂತೆ ಇಂದು ಬಂದು ಭೇಟಿಯಾಗಿದ್ದೇನೆ. ಮುಖ್ಯಮಂತ್ರಿಗಳು ನನಗೇನು ಹೇಳಿಲ್ಲ. ನನ್ನ ಕ್ಷೇತ್ರಕ್ಕೆ ಬಂದಾಗಲೇ ಒಂದಷ್ಟು ಸಮಸ್ಯೆ ಬಗ್ಗೆ ಹೇಳಿದ್ದರು. ತಮ್ಮ ಆಫೀಸಿನ ಜೊತೆ ಸಂಪರ್ಕದಲ್ಲಿರುವುದಕ್ಕೆ ಹೇಳಿದ್ರು. ಇವತ್ತು ಬರೋಕೆ ಹೇಳಿದ್ರು, ಬಂದು ಪತ್ರ ಕೊಟ್ಟಿದ್ದೇನೆ. ಕೆಂಗೇರಿ ಬ್ರಿಡ್ಜ್ ಬಗ್ಗೆ ಮಾತನಾಡಿದ್ದು, ಕಾವೇರಿ ನೀರನ್ನ ವಾರಕ್ಕೆ ಮೂರು ದಿವಸ ಎಕ್ಸೆಸ್ ಆಗಿ ಕೊಡಬೇಕು. ಕುಡಿಯೋ ನೀರಿಗೆ ಸಮಸ್ಯೆ ಇದೆ ಬಗೆಹರಿಸಿ ಎಂದು ಕೇಳಿದ್ದೇನೆ. ಹಾಗೇ ಹೆಚ್ಚುವರಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸೇರಿದಂತೆ ಮೂರು ಮನವಿ ಮಾಡಿದ್ದೇನೆ. ನಾಳೆ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ನನ್ನ ಬೆಂಬಲಿಗರು ಯಾರು ಕಾಂಗ್ರೆಸ್ಗೆ ಹೋಗುತ್ತಿಲ್ಲ. ಕೆಲ ಕಾರ್ಪೋರೇಟರ್ ಗಳು ಹೋಗುತ್ತಿದ್ದಾರೆ. ಜೆಡಿಎಸ್ ನವರು ಹೋಗುತ್ತಿದ್ದಾರೆ. ಯಾರ್ಯಾರಿಗೆ ಕಾಂಗ್ರೆಸ್ ಸೇರುವುದಕ್ಕೆ ಆಸೆ ಇದೆಯೋ ಅವರು ಹೋಗುತ್ತಾರೆ. ನನಗೆ ಪಕ್ಷದ ಮೇಲೆ ಅಸಮಧಾನ ಇಲ್ಲ. ಆದ್ರೆ, ಕ್ಷೇತ್ರದ ವಿಚಾರವಾಗಿ ಅಸಮಧಾನ ಇದೆ ಎಂದರು.
ಈಗಾಗಲೇ ಸಿಟಿ ರವಿ, ಆರ್ ಅಶೋಕ್ ಮಾತಾಡಿ ಸರಿಪಡಿಸಿದ್ದಾರೆ. ನಾನು ಪಕ್ಷದ ಕಮೀಟ್ಮೆಂಟ್ ಗೆ ಕೆಲಸ ಮಾಡಿದ್ದೇನೆ. ಇನ್ನು ಮುಂದೆ ಕೂಡ ಅದೇ ವಾತಾವರಣ ಇರುವಂತೆ ನೋಡಿಕೊಳ್ಳಿ ಎಂದು ಹೇಳಿದ್ದೇನೆ. ಅದಕ್ಕೆ ಸರಿಪಡಿಸುತ್ತೇವೆ ಎಂದು ನಮ್ಮ ಪಕ್ಷದ ಮುಖಂಡರು ಹೇಳಿದ್ದಾರೆ. ನಾನು ಯಾರನ್ನೂ ಸಸ್ಪೆಂಡ್ ಮಾಡಿ ಎಂದು ಹೇಳಿಲ್ಲ. ಬದಲಿಗೆ ಎಚ್ಚರಿಕೆ ನೀಡಿ ಎಂದು ಹೇಳಿದ್ದರು ಎಂದು ಹೇಳಿದರು.
ನನಗೆ ಅದೃಷ್ಟ ಇತ್ತು ಗೆದ್ದೆ, ಹೆಚ್ಚು ಕಮ್ಮಿ ಆದ್ರೆ ಏನಾಗುತ್ತಿತ್ತೋ? ನಾನು ಕೊಟ್ಟಿರೋ ದೂರಿಗೆ ದಾಖಲಾತಿ ಒದಗಿಸಿದ್ದೇನೆ ಮುಂದಿನ ಕಾರ್ಪೊರೇಷನ್ ಸೇರಿದಂತೆ ಎಲೆಕ್ಷನ್ ಗಳಿಗೆ ಸರಿಪಡಿಸಲು ಹೇಳಿದ್ದೇನೆ. ದಾಖಲಾತಿ ಆಧಾರದ ಮೇಲೆ ಕ್ರಮ ಕೈಗೊಂಡಿದ್ದಾರೆ. ನಾನು ಕ್ರಮ ಕೈಗೊಳ್ಳಿ ಅಂತಾ ಹೇಳಿಲ್ಲ ಎಂದರು ತಿಳಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ