ಸಿದ್ದರಾಮಯ್ಯ ಸರ್ಕಾರದ 100 ದಿನದ ನೂರಾರು ಹಳವಂಡಗಳು: ವಿಡಿಯೋ ಹಂಚಿಕೊಂಡ ಬಿಜೆಪಿ
ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆ ಬಿಜೆಪಿ ಸರಣಿ ಟ್ವೀಟ್ ಮಾಡಿ ಬರೀ 100 ದಿನಕ್ಕೆ ನೂರಾರು ಹಳವಂಡಗಳು ಎಂದು ವ್ಯಂಗ್ಯವಾಡಿದೆ. ಅಧಿಕಾರ, ಆಡಳಿತದ ಸೂತ್ರ ಅಸಮರ್ಥ ಅಧಿಕಾರದಾಹಿಗಳ ಕೈ ಸೇರಿದರೆ ಹೇಗಿರುತ್ತೆ ಎನ್ನುವುದಕ್ಕೆ ಇದಕ್ಕಿಂತಲೂ ಉದಾಹರಣೆ ಸಿಗಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಬೆಂಗಳೂರು, (ಆಗಸ್ಟ್ 29): ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ(Congress government 100 days ). ಇದಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ರಾಜ್ಯದ ಜನತೆಗೆ ಕೃತಜ್ಞತೆ ತಿಳಿಸಿದ್ದಾರೆ. ಇತ್ತ ಬಿಜೆಪಿ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರದ(Congress government) ನೂರು ದಿನಗಳಲ್ಲಿ ನೂರೆಂಟು ಕರ್ಮಕಾಂಡಗಳನ್ನು ಮಾಡಿದೆ ಎಂದು ವಿಡಿಯೋವೊಂದನ್ನು ಹಂಚಿಕೊಂಡು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಶತದಿನದ ಸಂಭ್ರಮ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಬೆಲೆ ಏರಿಕೆ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ, ಶ್ಯಾಡೋ ಸಿಎಂ, ವರ್ಗಾವಣೆ ದಂಧೆ, ರೈತರ ಆತ್ಮಹತ್ಯೆ, ಕಲುಷಿತ ನೀರು, ಕಳಪೆ ಆಹಾರ, ಗುತ್ತಿಗೆದಾರರ ಪ್ರತಿಭಟನೆ, ಉಡುಪಿ ಘಟನೆ, ಸುಳ್ಳು ಸುದ್ದಿ, ಮರಳು ಮಾಫಿಯಾ ಅಬ್ಬಬ್ಬಾ ಒಂದಾ ಎರಡಾ. ಅಸಮರ್ಥ ಸರ್ಕಾರದ ಹಳವಂಡಗಳ ಬೃಹತ್ ಪಟ್ಟಿಯೇ ಇಲ್ಲಿದೆ ನೋಡಿ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದೆ.
ರಾಜ್ಯದಲ್ಲಿ @siddaramaiah ಅವರ ನೂರು ದಿನ ಸರ್ಕಾರದ ನೂರೆಂಟು ಕರ್ಮಕಾಂಡಗಳು..!
ಬೆಲೆ ಏರಿಕೆ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ, ಶ್ಯಾಡೋ ಸಿಎಂ, ವರ್ಗಾವಣೆ ದಂಧೆ, ರೈತರ ಆತ್ಮಹತ್ಯೆ, ಕಲುಷಿತ ನೀರು, ಕಳಪೆ ಆಹಾರ, ಗುತ್ತಿಗೆದಾರರ ಪ್ರತಿಭಟನೆ, ಉಡುಪಿ ಘಟನೆ, ಸುಳ್ಳು ಸುದ್ದಿ, ಮರಳು ಮಾಫಿಯಾ ಅಬ್ಬಬ್ಬಾ ಒಂದಾ ಎರಡಾ…
ಅಸಮರ್ಥ ಸರ್ಕಾರದ… pic.twitter.com/nNo63piWgl
— BJP Karnataka (@BJP4Karnataka) August 29, 2023
ಗ್ಯಾರಂಟಿಗಳಿಗೆ ಹಣವಿಲ್ಲದೆ ಸಿದ್ದರಾಮಯ್ಯ ಪತರಗುಟ್ಟಿ ಹೋಗಿದ್ದರೆ. ಸಚಿವರು ಅಕ್ರಮ ದಂಧೆಗಳಿಗೆ ನಾಂದಿಯಾಡಿದರು. ತನ್ನ ಹಿಂದಿನ ಹಳೆಯ ವೈಖರಿಯಂತೆ ಮರಳು ಮಾಫಿಯಾ ಜಾರಿಗೆ ತಂದಿತು. ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ತವರು ಜಿಲ್ಲೆಯಲ್ಲೇ ಮರಳು ಮಾಫಿಯಾ ಕಾನ್ಸ್ಟೇಬಲ್ ಮೇಲೆ ಮರಳು ಮಾಫಿಯಾ ಟ್ರ್ಯಾಕ್ಟರ್ ಹರಿಸಿ ಬಲಿ ಪಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರುಗಳ ದೌಲತ್ತು, ಧಿಮಾಕುಗಳು ಜೋರಾಯಿತು. ಆಯಾ ಜಿಲ್ಲೆಗಳಲ್ಲಿ ಅಕ್ರಮ ದಂಧೆಗಳು ತಲೆ ಎತ್ತಲಾರಂಭಿಸಿದವು. ಅಸಲಿಗೆ ತುಘಲಕ್ ದರ್ಬಾರ್‌ಗೆ ಕಡಿವಾಣವೇ ಇಲ್ಲದಂತಾಯಿತು. ಹೀಗೆ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ