ಕಾವೇರಿ ನದಿ ನೀರು ವಿವಾದ: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಹೇಳಿದ್ದಿಷ್ಟು
ಮಳೆ ಕಡಿಮೆ ಆದಾಗ ಕಾವೇರಿ ನದಿ ನೀರು ವಿವಾದ ಸದ್ದು ಮಾಡುತ್ತೆ. ಕರ್ನಾಟಕದ ನಿರ್ಧಾರವನ್ನು ನಾನು ಸಮರ್ಥನೆ ಮಾಡುತ್ತೇನೆ. ಆದರೆ 4 ರಾಜ್ಯಗಳ ಸಿಎಂಗಳು ಸೇರಿ ಸಮಸ್ಯೆ ಬಗ್ಗೆ ಸಮಾಲೋಚಿಸಬೇಕು. ಸಂಕಷ್ಟ ಸೂತ್ರದಡಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಬೆಂಗಳೂರು, ಅಕ್ಟೋಬರ್ 01: ಮಳೆ ಕಡಿಮೆ ಆದಾಗ ಕಾವೇರಿ ನದಿ ನೀರು ವಿವಾದ ಸದ್ದು ಮಾಡುತ್ತೆ. ಕರ್ನಾಟಕದ ನಿರ್ಧಾರವನ್ನು ನಾನು ಸಮರ್ಥನೆ ಮಾಡುತ್ತೇನೆ. ಆದರೆ 4 ರಾಜ್ಯಗಳ ಸಿಎಂಗಳು ಸೇರಿ ಸಮಸ್ಯೆ ಬಗ್ಗೆ ಸಮಾಲೋಚಿಸಬೇಕು. ಸಂಕಷ್ಟ ಸೂತ್ರದಡಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗಲೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದ್ದಾರೆ.
ಅಂದು ವಾಜಪೇಯಿ ಸಿಎಂಗಳ ಸಭೆ ಕರೆದು ಸಂಧಾನಕ್ಕೆ ಯತ್ನಿಸಿದ್ದರು. ಆದರೆ ಅಂದಿನ ಪ್ರಧಾನಿ ವಾಜಪೇಯಿ ಕರೆದಿದ್ದ ಸಭೆ ಸಫಲವಾಗಲಿಲ್ಲ. ಅಂತಿಮವಾಗಿ ಅಂದು ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ಬಹುಪರಾಕ್, ತಮ್ಮದೇ ಮುಸ್ಲಿಂ ನಾಯಕರಿಗೆ ಟಾಂಗ್ ಕೊಟ್ಟ ಫಾರೂಕ್
ನಮ್ಮ ಜನ ಸ್ವಯಂಪ್ರೇರಿತರಾಗಿ ತಮ್ಮ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ನ್ಯಾ.ರವೀಂದ್ರ ಸಲಹೆ ಪಡೆಯುತ್ತಿರುವುದು ಉತ್ತಮ ನಿರ್ಧಾರ. ವಿವಾದ ಬಗೆಹರಿಸಲು ಸಂಕಷ್ಟ ಸೂತ್ರದಡಿ ಚರ್ಚೆ ಆಗಬೇಕು ಎಂದಿದ್ದಾರೆ.
ನನ್ನ ನಿಲುವು ಅಪ್ರಸ್ತುತ ಎಂದ ಎಸ್.ಎಂ.ಕೃಷ್ಣ
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ನಾನು ರಾಜಕಾರಣದಲ್ಲಿ ಇಲ್ಲ. ಈ ಸಂದರ್ಭದಲ್ಲಿ ನನ್ನ ನಿಲುವು ಅಪ್ರಸ್ತುತ ಎಂದು ಹೇಳಿದ್ದಾರೆ.
ಎಸ್.ಎಂ.ಕೃಷ್ಣರನ್ನು ಹಾಡಿಹೊಗಳಿದ ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಕೃಷ್ಣ ಅವರ ಒಡನಾಟ 35 ವರ್ಷಗಳದ್ದು. ಅವರು ಕಷ್ಟದ ಕಾಲದಲ್ಲಿ ಅಧಿಕಾರ ಹಿಡಿದರು. ಬರ, ಕಾವೇರಿ ವಿವಾದ, ರಾಜ್ ಕುಮಾರ್ ಘಟನೆ ಮತ್ತು ಆರ್ಥಿಕ ಸಂಕಷ್ಟ. ಇದೆಲ್ಲವನ್ನೂ ಮೆಟ್ಟಿ ನಿಂತು ಕೃಷ್ಣ ಅವರ ಕಾಲ ಅಂತ ಹೆಸರು ಮಾಡಿದರು. ಕೃಷ್ಣ ಅವರ ಕಾಲದಲ್ಲಿ ಇದ್ದ ಬಜೆಟ್ 34 ಸಾವಿರ ಕೋಟಿ ರೂ. ಹೆಚ್ಚಳ ಮಾಡಿದರು. ಈಗ 3.5 ಲಕ್ಷ ಕೋಟಿ ರೂ. ಇದೆ. ಕೃಷ್ಣ ಅವರು ಬೆಂಗಳೂರನ್ನು ಇಂಟರ್ ನ್ಯಾಷನಲ್ ಮಾರ್ಕೆಟ್ ಮಾಡಿದರು. ವಿಕಾಸಸೌಧ, ಉದ್ಯೋಗ ಸೌಧ ಮಾಡಿದ್ದು ಕೃಷ್ಣ ಅವರು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.