NDA VS INDIA: ಚಿರಾಗ್ ಪಾಸ್ವಾನ್ ಮೋದಿ ಅಪ್ಪುಗೆ: ಇದು ರಾಹುಲ್ ಗಾಂಧಿ ಪ್ರಭಾವ ಎಂದು ಟೀಕಿಸಿದ ಕಾಂಗ್ರೆಸ್​

ಪ್ರಧಾನಿ ಮೋದಿ ಮತ್ತು ಚಿರಾಗ್ ಪಾಸ್ವಾನ್ ತಬ್ಬಿಕೊಂಡಿರುವ ಬಗ್ಗೆ ಕಾಂಗ್ರೆಸ್​ ನಾಯಕರು ಟೀಕಿಸಿದ್ದು, ಪ್ರಧಾನಿ ಮೋದಿ ಅವರು ರಾಹುಲ್​​ ಗಾಂಧಿಯವರಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿದ್ದಾರೆ.

NDA VS INDIA: ಚಿರಾಗ್ ಪಾಸ್ವಾನ್ ಮೋದಿ ಅಪ್ಪುಗೆ: ಇದು ರಾಹುಲ್ ಗಾಂಧಿ ಪ್ರಭಾವ ಎಂದು ಟೀಕಿಸಿದ ಕಾಂಗ್ರೆಸ್​
ಚಿರಾಗ್ ಪಾಸ್ವಾನ್ ಮೋದಿ ಅಪ್ಪುಗೆ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jul 19, 2023 | 12:31 PM

ದೆಹಲಿ, ಜು.19 : ಲೋಕಸಭೆ ಚುನಾವಣೆ ಬರುತ್ತಿದ್ದಂತೆ, ಎಲ್ಲ ಪಕ್ಷಗಳು ಚುರುಕಿನಲ್ಲಿ ರಾಜಕೀಯ ಚುಟುವಟಿಕೆಯನ್ನು ನಡೆಸಲು ಆರಂಭಿಸಿದೆ. ಒಂದು ಕಡೆ ಬೆಂಗಳೂರಿನಲ್ಲಿ ಕಾಂಗ್ರೆಸ್​ ಸೇರಿದಂತೆ, ಇತರ ಪಕ್ಷಗಳು ಇಂಡಿಯಾ ಎಂಬ ಒಗ್ಗಟಿನ ಸಭೆಯನ್ನು ನೆನ್ನೆ (ಜು.19) ನಡೆಸಿದೆ. ಇನ್ನೊಂದು ಕಡೆ ಬಿಜೆಪಿ ನೇತೃತ್ವದಲ್ಲಿ ಎನ್​​ಡಿಎ ಮಿತ್ರಪಕ್ಷಗಳ ಸಭೆ ಕೂಡ ನಡೆಸಿದೆ. ಎನ್​​ಡಿಎ ಮಿತ್ರಪಕ್ಷಗಳ ಸಭೆಯಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್ ಪಾಸ್ವಾನ್) ಚಿರಾಗ್ ಪಾಸ್ವಾನ್ ಅವರು ಭಾಗವಹಿಸಿದ್ದರು. ಈ ಸಮಯದಲ್ಲಿ ಮೋದಿಯವರನ್ನು ಕಂಡು ಅವರ ಪಾದಕ್ಕೆ ಚಿರಾಗ್ ಪಾಸ್ವಾನ್ ನಮಸ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ತಬ್ಬಿಕೊಂಡಿದ್ದಾರೆ. ಈ ಬಗ್ಗೆ ಚಿರಾಗ್ ಪಾಸ್ವಾನ್ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರ ಪ್ರೀತಿ ಮತ್ತು ಗೌರವಕ್ಕಾಗಿ ಧನ್ಯವಾದ ಎಂದು ಹೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯೆಸಿದ ಕಾಂಗ್ರೆಸ್​, ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿ ವಿದೇಶಿ ನಾಯಕರನ್ನು ಮಾತ್ರ ತಬ್ಬಿಕೊಳ್ಳುತ್ತಾರೆ ಎಂದುಕೊಂಡಿದ್ದೇವು, ಆದರೆ ರಾಹುಲ್ ಗಾಂಧಿ ಪ್ರಭಾವದಿಂದಾಗಿ ನಮ್ಮ ದೇಶದ ನಾಯಕರನ್ನು ಬಲವಂತವಾಗಿ ತಬ್ಬಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದ್ದಾರೆ.

ತನ್ನ ಸಹೋದ್ಯೋಗಿಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ ವ್ಯಕ್ತಿ ಮತ್ತು ವಿಶ್ವ ನಾಯಕರನ್ನು ಮಾತ್ರ ಬಲವಂತವಾಗಿ ತಬ್ಬಿಕೊಳ್ಳುತ್ತಾರೆ. ಮನುಷ್ಯನಂತೆ ಕಾಣಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಆದರೆ ಇದು ಅವರಲ್ಲಿ ಸಹಾನುಭೂತಿಯನ್ನು ರೂಪಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸುರ್ಪಿಯಾ ಶ್ರಿನೇಟ್ ಟ್ವಿಟರ್​​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ನವಭಾರತದ ಆಶಯವೇ ಎನ್​ಡಿಎ: ಪ್ರಧಾನಿ ಮೋದಿ ವ್ಯಾಖ್ಯಾನ

ಚಿರಾಗ್ ಪಾಸ್ವಾನ್ ಸೋಮವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿ ನಾವು ಎನ್ ಡಿಎ ಸೇರುವುದಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷದ ಎಲ್ಲಾ ಬೇಡಿಕೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈಗ ತನ್ನ ಚಿಕ್ಕಪ್ಪ ಪಶುಪತಿ ಪಾರಸ್ ಪ್ರತಿನಿಧಿಸುತ್ತಿರುವ ಹಾಜಿಪುರ ಲೋಕಸಭೆಯಿಂದ ತಾನು ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾನೆ. ಕಳೆದ ಮೂರು ವರ್ಷಗಳಿಂದ ಎನ್‌ಡಿಎ ಜೊತೆ ತಮ್ಮ ಪಾಲುದಾರಿಕೆ ಇಲ್ಲದಿದ್ದರೂ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ಎಂದಿಗೂ ನಡೆದುಕೊಂಡಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೂಡ ನಡೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Wed, 19 July 23