Andhra Pradesh: ವೈಎಸ್ ಶರ್ಮಿಳಾ ಬೆಂಬಲಿಗರು ಮತ್ತು ಕೆಸಿಆರ್ ಕಾರ್ಯಕರ್ತರ ನಡುವೆ ಘರ್ಷಣೆ
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರ ಬೆಂಬಲಿಗರು ಮತ್ತು ಕೆಸಿಆರ್ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ತೆಲಂಗಾಣ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರ ಬೆಂಬಲಿಗರು ಮತ್ತು ಕೆಸಿಆರ್ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆಯ ನಂತರ ಬಂಧನ ಮಾಡಲಾಗಿದೆ. ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಶರ್ಮಿಳಾ ಅವರ ಬೆಂಬಲಿಗರು ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಕರ್ತರ ನಡುವೆ ಘರ್ಷಣೆಯ ನಂತರ ಬಂಧಿಸಲಾಗಿದೆ. ಶರ್ಮಿಳಾ ಅವರು ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ನೀವು ನನ್ನನ್ನು ಏಕೆ ಬಂಧಿಸುತ್ತಿದ್ದೀರಿ ಎಂದು ಪೊಲೀಸರ ಬಳಿ ಕೇಳಿದ್ದಾರೆ.
ಅಕ್ಟೋಬರ್‌ನಿಂದ ಶರ್ಮಿಳಾ ಅವರು ತಮ್ಮ ಬೆಂಬಲಿಗರೊಂದಿದೆ 3,500 ಕಿ.ಮೀ ಪಾದಯಾತ್ರೆ ನಡೆಸುತ್ತಿದ್ದಾರೆ. ನಿನ್ನೆ ನರಸಂಪೇಟೆಯಲ್ಲಿದ್ದ ಅವರು ಸ್ಥಳೀಯ ಟಿಆರ್‌ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದರು. ಈ ಟೀಕೆ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಪಕ್ಷದ ಕಾರ್ಯಕರ್ತರನ್ನು ಕೆರಳಿಸಿದೆ, ಶರ್ಮಿಳಾ ಅವರ ‘ಪಾದಯಾತ್ರೆ’ ಸಮಯದಲ್ಲಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಇದು ಶರ್ಮಿಳಾ ಅವರ ಬೆಂಬಲಿಗರನ್ನು ಕೆರಳಿಸಿತು ಇದೀಗ ಇಬ್ಬರ ನಡುವೆ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಆಂಧ್ರ ಪ್ರದೇಶದ ಸಿಎಂ ಜಗನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾರಿಂದ ಇಂದು ನೂತನ ರಾಜಕೀಯ ಪಕ್ಷಕ್ಕೆ ಚಾಲನೆ
ನನ್ನನ್ನು ಏಕೆ ಬಂಧಿಸುತ್ತಿದ್ದೀರಿ? ನಾನು ಬಲಿಪಶು, ನಾನು ಇಲ್ಲಿ ಆರೋಪಿಯಲ್ಲ ಎಂದು ಶರ್ಮಿಳಾ ಅವರು ತಮ್ಮ ಬೆಂಬಲಿಗರೊಂದಿಗೆ ಅವರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಕೂಗಾಡಿದ್ದಾರೆ. ಶರ್ಮಿಳಾ ಅವರ ಪಾದಯಾತ್ರೆ ವೈಎಸ್‌ಆರ್‌ಟಿಪಿ ಮತ್ತು ಆಡಳಿತಾರೂಢ ಟಿಆರ್‌ಎಸ್ ನಡುವೆ ಸಾಕಷ್ಟು ರಾಜಕೀಯ ಉದ್ವಿಗ್ನತೆಯನ್ನು ಉಂಟು ಮಾಡಿದೆ. ತೆಲಂಗಾಣ ಪೊಲೀಸರು ಸಾರ್ವಜನಿಕ ಸಭೆಗೆ ಅನುಮತಿ ನಿರಾಕರಿಸಿದರು. ಭೈಂಸಾದಲ್ಲಿ ನಡೆದ ‘ಪಾದಯಾತ್ರೆ’ ಕೋಮು ಸೂಕ್ಷ್ಮವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Published On - 5:06 pm, Mon, 28 November 22