ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ತಂತ್ರ ಹೂಡಿದ ಡಿಕೆ ಶಿವಕುಮಾರ್!

| Updated By: ಸಾಧು ಶ್ರೀನಾಥ್​

Updated on: Sep 04, 2021 | 12:15 PM

ಕರ್ನಾಟಕ ಕಾಂಗ್ರೆಸ್ ಅಧಿನಾಯಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಬೆಂಬಲ ಸೂಚಿಸಿದೆ. ಇದೇ ವೇಳೆ, ಹಿಂದುಳಿದ ವರ್ಗಗಳ ಒಕ್ಕೂಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶೀರ್ವಾದ ದಕ್ಕಿದೆ. ಹೀಗಾಗಿ ಹಿಂದುಳಿದ ವರ್ಗಗಳನ್ನ ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್​ ಹೊಸ ದಾಳ ಪ್ರಯೋಗಿಸಿದ್ದು, ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ಡಿಕೆಶಿ ತಂತ್ರ ಹೂಡಿದ್ದಾರೆ.

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ತಂತ್ರ ಹೂಡಿದ ಡಿಕೆ ಶಿವಕುಮಾರ್!
ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ತಂತ್ರ ಹೂಡಿದ ಡಿಕೆ ಶಿವಕುಮಾರ್!
Follow us on

ಬೆಂಗಳೂರು: ರಾಜಕೀಯ ನೇತಾರರು ಜಾತಿ ಧರ್ಮದ ಜೇನುಗೂಡಿನತ್ತ ಆಗಾಗ ಕಲ್ಲು ಒಗೆಯುತ್ತಾ ಇರುತ್ತಾರೆ. ಒಟ್ಟಿನಲ್ಲಿ ಅವರಿಗೆ ರಾಜಕೀಯದಲ್ಲಿ ಜಾತಿ ಧರ್ಮದ ಹಣತೆ ದಹಿಸುತ್ತಿರಬೇಕು. ಕಾಂಗ್ರೆಸ್​​ ಪಕ್ಷದ ನಾಯಕರು ಹಿಂದುಳಿದವರ ಮನೆ ಗೆಲ್ಲಲು ಹೊಸ ದಾಳ ಉರುಳಿಸಿದ್ದಾರೆ. ಹಿಂದುಳಿದ ಸಂಘಟನೆಗಳ ವಾರ್ ಕಾಂಗ್ರೆಸ್‌ ಪಕ್ಷದಲ್ಲೇ ಶುರುವಾಗಿದೆ.

ಕರ್ನಾಟಕ ಕಾಂಗ್ರೆಸ್ ಅಧಿನಾಯಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಬೆಂಬಲ ಸೂಚಿಸಿದೆ. ಇದೇ ವೇಳೆ, ಹಿಂದುಳಿದ ವರ್ಗಗಳ ಒಕ್ಕೂಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶೀರ್ವಾದ ದಕ್ಕಿದೆ. ಹೀಗಾಗಿ ಹಿಂದುಳಿದ ವರ್ಗಗಳನ್ನ ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್​ ಹೊಸ ದಾಳ ಪ್ರಯೋಗಿಸಿದ್ದು, ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ಡಿಕೆಶಿ ತಂತ್ರ ಹೂಡಿದ್ದಾರೆ.

ಹಿಂದುಳಿದ ವರ್ಗಗಳ ಮನ ಗೆಲ್ಲಲು ಡಿ.ಕೆ.ಶಿವಕುಮಾರ್‌ ಪ್ಲ್ಯಾನ್‌ ರೂಪಿಸಿದ್ದು ಸಂವಾದ ಕಾರ್ಯಕ್ರಮ ಮೂಲಕ ಸಣ್ಣ ಸಮುದಾಯಕ್ಕೆ ರೀಚ್ ಆಗಲುಯ ಮುಂದಾಗಿದ್ದಾರೆ. ಹೊಸದಾಗಿ ತಲೆ ಎತ್ತಿರುವ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಡಿಕೆಶಿಗೆ ಸಾಥ್ ನೀಡಿದೆ. ವೇದಿಕೆ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜೊತೆ ಸಣ್ಣ ಸಮುದಾಯಗಳ ಸಂವಾದ ಕಾರ್ಯಕ್ರಮ ಆಯೋಜಿಸ್ತಿದಾರೆ. ಡಿಕೆಶಿ ಪಾಲ್ಗೊಳ್ಳುವ ಪ್ರತಿ ಕಾರ್ಯಕ್ರಮದಲ್ಲೂ ವೇದಿಕೆಯ ನಾಯಕರು ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ವೇದಿಕೆಯ ನಾಯಕ ಡಾ. ದ್ವಾರಕಾನಾಥ್‌ರಿಂದಲೇ ಕಾರ್ಯತಂತ್ರ ರೂಪುಗೊಳ್ಳೂತ್ತಿದೆ.

ವೇದಿಕೆ ನಾಯಕ ಡಾ.ದ್ವಾರಕಾನಾಥ್‌ರಿಂದಲೇ ಕಾರ್ಯತಂತ್ರ:

ಇತ್ತಿಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಡಾ. ದ್ವಾರಕಾನಾಥ್‌ ನೇತೃತ್ವದಲ್ಲಿ ಜಾಗೃತ ವೇದಿಕೆ ಹೋರಾಟಗಳಿಗೆ ಡಿಕೆಶಿ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಗಮನಾರ್ಹವೆಂದರೆ ಇದಕ್ಕೆ ಕೌಂಟರ್ ನೀಡಲು ಸಿದ್ದರಾಮಯ್ಯ ಕೂಡ ಪ್ರತಿತಂತ್ರ ರೂಪಿಸಿದ್ದಾರೆ. ಹಿಂದುಳಿದ ವರ್ಗಗಳ ಒಕ್ಕೂಟದಿಂದ ಜಾತಿ ಗಣತಿ ಹೋರಾಟಕ್ಕೆ ಮತ್ತೆ ಒತ್ತು ನೀಡಿದ್ದಾರೆ. ಒಕ್ಕೂಟವು ಸಿದ್ದರಾಮಯ್ಯ ಜತೆ ಈಗಾಗಲೇ ಚರ್ಚೆ ನಡೆಸಿದೆ. ಅತಿ ಹಿಂದುಳಿದ ವರ್ಗಗಳ ವೇದಿಕೆಯಿಂದಲೂ ಹೋರಾಟ ಹಮ್ಮಿಕೊಳ್ಳಲಾಗಿದೆ.

ವೇದಿಕೆಯು ಕೆಲ ದಿನಗಳ ಹಿಂದೆ ಜಾತಿ ಗಣತಿ ಹೋರಾಟ ನಡೆಸಿತ್ತು. ಈಗ ಸಿದ್ದರಾಮಯ್ಯ ಬೆಂಬಲಿತ ಹಿಂದುಳಿದ ಒಕ್ಕೂಟದಿಂದಲೂ ಸಕ್ರಿಯ ಹೋರಾಟ ಆರಂಭವಾಗಿದೆ. ಅತಿ ಹಿಂದುಳಿದ ವರ್ಗಗಳ ವೇದಿಕೆ ಅಖಾಡಕ್ಕೆ ಇಳಿದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಪರ್ಯಾಯ ಹೋರಾಟ ಆರಂಭ ಪಡೆದಿದೆ. ಒಕ್ಕೂಟದ ಹೋರಾಟಕ್ಕೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯರಿಂದ ಸಂಪೂರ್ಣ ಬೆಂಬಲ ಘೋಷಣೆಯಾಗಿದೆ.

ಇದನ್ನೂ ಓದಿ:
ಪ್ರತ್ಯೇಕ ಲಿಂಗಾಯತ ಧರ್ಮ: ಮತ್ತೆ ಧ್ವನಿ ಎತ್ತಿದ ಎಂಬಿ ಪಾಟೀಲ್​ಗೆ ಶಾಮನೂರು ಶಿವಶಂಕರಪ್ಪ ಗುದ್ದು

(CLP leader siddaramaiah and KPCC President DK Shivakumar fight to gain back ward classes support)