ಪ್ರತ್ಯೇಕ ಲಿಂಗಾಯತ ಧರ್ಮ: ಮತ್ತೆ ಧ್ವನಿ ಎತ್ತಿದ ಎಂಬಿ ಪಾಟೀಲ್​ಗೆ ಶಾಮನೂರು ಶಿವಶಂಕರಪ್ಪ ಗುದ್ದು

ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋರಾಟ ಮಾಡ್ತೀನಿ ಅನ್ನೋ ಪಾಟೀಲ್ ಹೇಳಿಕೆಗೂ ಶಾಮನೂರು ಶಿವಶಂಕರಪ್ಪ ಗರಂ ಆಗಿದ್ದಾರೆ. ಅವನೇನು ಒಟ್ಟಿಗೆ ಕರೆದುಕೊಂಡು ಹೋಗ್ತಾನೆ, ಅವನ ಹಣೆಬರಹ ಎಂದು ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ: ಮತ್ತೆ ಧ್ವನಿ ಎತ್ತಿದ ಎಂಬಿ ಪಾಟೀಲ್​ಗೆ ಶಾಮನೂರು ಶಿವಶಂಕರಪ್ಪ ಗುದ್ದು
ಪ್ರತ್ಯೇಕ ಲಿಂಗಾಯತ ಧರ್ಮ: ಮತ್ತೆ ಧ್ವನಿ ಎತ್ತಿದ ಎಂಬಿ ಪಾಟೀಲ್​ಗೆ ಶಾಮನೂರು ಶಿವಶಂಕರಪ್ಪ ಗುದ್ದು

ದಾವಣಗೆರೆ: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮತ್ತೆ ಧ್ವನಿ ಎತ್ತಿದ ಎಂಬಿ ಪಾಟೀಲ್ ಗೆ ಅಖಿಲ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತೀರುಗೇಟು ನೀಡಿದ್ದಾರೆ. ವೀರಶೈವ ಲಿಂಗಾಯತ ಒಂದೇ ಅನ್ನೋದು ವೀರಶೈವ ಮಹಾಸಭಾದ ನಿಲುವು. ಲಿಂಗಾಯತರಲ್ಲಿ ಉಪಜಾತಿ ಯಾವುದೂ ಇಲ್ಲ, ಎಲ್ಲವೂ ಒಂದೇ. ಸಾದರ ಲಿಂಗಾಯತ, ಬಣಜಿಗರು, ಪಂಚಾಚಾರ್ಯರು ಹೀಗೆ ಎಲ್ಲರನ್ನೂ ವೀರಶೈವರು ಎಂದೇ ಪರಿಗಣನೆ ಮಾಡ್ತೀವಿ. ಅವರು ಹೋರಾಟ ಮಾಡುವವರು ಮಾಡಲಿ, ಮತ್ತೆ ಅವರು ತಣ್ಣಗಾಗ್ತಾರೆ ಎಂದು ಶಾಮನೂರು ಶಿವಶಂಕರಪ್ಪ ಅವರು ಎಂಬಿ ಪಾಟೀಲ್​ಗೆ ಗುದ್ದು ನೀಡಿದ್ದಾರೆ.

ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋರಾಟ ಮಾಡ್ತೀನಿ ಅನ್ನೋ ಪಾಟೀಲ್ ಹೇಳಿಕೆಗೂ ಶಾಮನೂರು ಶಿವಶಂಕರಪ್ಪ ಗರಂ ಆಗಿದ್ದಾರೆ. ಅವನೇನು ಒಟ್ಟಿಗೆ ಕರೆದುಕೊಂಡು ಹೋಗ್ತಾನೆ, ಅವನ ಹಣೆಬರಹ ಎಂದು ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದ್ದಾರೆ.

ಅವನು ಏನೇ ಹೇಳಿಕೆ ಕೊಡಲಿ, ನಮ್ಮ ನಿಲುವು ಒಂದೇ. ವೀರಶೈವ ಲಿಂಗಾಯತ ಒಂದೇ ಎಂಬ ನಿರಾಣಿ ಹೇಳಿಕೆ ಸರಿಯಾಗಿದೆ. ಎಂಬಿ ಪಾಟೀಲ್ ಲಿಂಗಾಯತ ನಾಯಕ ಆಗೋಕೆ ಹೊರಟಿರೋ ವಿಚಾರವಾಗಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು ಅವರ ಊರಲ್ಲಿ ಮೊದಲು ಗೆಲ್ಲಲಿ. ಲಿಂಗಾಯತರ ನಾಯಕ ಆಗಬೇಕು ಅಂತಾ ಬಹಳ ಜನ ಹೋಗ್ತಾರೆ. ಜನರೇ ಅವರನ್ನ ನಾಯಕರನ್ನಾಗಿ ಮಾಡಬೇಕು. ನಾನಾಗೆ ನಾಯಕನಾಗ್ತೀನಿ ಅಂತಾ ಹೋದ್ರೆ ಆಗುತ್ತದಾ? ಎಂದು ಸ್ವಪಕ್ಷದ ನಾಯಕನ ವಿರುದ್ಧವೇ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಶಾಮನೂರು ಗುಡುಗಿದರು.

ಇದೇ ವೇಳೆ ಎಸ್ ಎಮ್ ಜಾಮದಾರ ವಿರುದ್ಧವೂ ಶಾಮನೂರು ಶಿವಶಂಕರಪ್ಪ ಗರಂ ಆದರು. ಅವನ ಸುದ್ದಿ ನನ್ನ ಹತ್ತರ ಹೇಳಬೇಡಿ. ಅವೆಲ್ಲ ಸವಕಳಿ ನಾಣ್ಯ, ಸುಮ್ನೆ ಮಾತನಾಡ್ತವೆ ಎಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

Also Read:
ಪ್ರತ್ಯೇಕ ಲಿಂಗಾಯತ ಧರ್ಮ‌ ವಿಚಾರ; ಕಾಂಗ್ರೆಸ್​ ನಾಯಕ ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿ

(shamanur shivashankarappa on mb patil regarding separate lingayat)

Read Full Article

Click on your DTH Provider to Add TV9 Kannada