ಗದಗದಲ್ಲಿ ಭಾಷಣದ ವೇಳೆ ಡಿಕೆ ಶಿವಕುಮಾರ್ ಹೆಸರೇ ಮರೆತ ಸಿದ್ದರಾಮಯ್ಯ!

| Updated By: Ganapathi Sharma

Updated on: Nov 03, 2023 | 6:01 PM

ಸಭಾ ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಸಿದ್ದರಾಮಯ್ಯ, ಒಬ್ಬೊಬ್ಬರಾಗಿ ಗಣ್ಯರ ಹೆಸರನ್ನು ಪ್ರಸ್ತಾಪಿಸಿದರು. ಆದರೆ, ಡಿಕೆ ಶಿವಕುಮಾರ್​ ಹೆಸರನ್ನೇ ಉಲ್ಲೇಖಿಸಲಿಲ್ಲ. ಈ ವೇಳೆ, ಭೈರತಿ ಸುರೇಶ್ ಮಧ್ಯ ಪ್ರವೇಶಿಸಿ ಡಿಕೆ ಶಿವಕುಮಾರ್ ಹೆಸರು ಹೇಳುವಂತೆ ನೆನಪಿಸಿದರು. ತಕ್ಷಣ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರ ಹೆಸರನ್ನೂ ಪ್ರಸ್ತಾಪಿಸಿದರು.

ಗದಗದಲ್ಲಿ ಭಾಷಣದ ವೇಳೆ ಡಿಕೆ ಶಿವಕುಮಾರ್ ಹೆಸರೇ ಮರೆತ ಸಿದ್ದರಾಮಯ್ಯ!
ಗದಗದಲ್ಲಿ ಭಾಷಣದ ವೇಳೆ ಡಿಕೆ ಶಿವಕುಮಾರ್ ಹೆಸರೇ ಮರೆತ ಸಿದ್ದರಾಮಯ್ಯ!
Follow us on

ಗದಗ, ನವೆಂಬರ್ 3: ಕರ್ನಾಟಕ ರಾಜ್ಯ ನಾಮಕರಣಕ್ಕೆ 50ರ ಸಂಭ್ರಮದ ಪ್ರಯುಕ್ತ ಗದಗ (Gadag) ನಗರದಲ್ಲಿ ಹಮ್ಮಿಕೊಂಡಿರುವ ಅದ್ದೂರಿ ಕನ್ನಡ ಹಬ್ಬ ಆಚರಣೆಯ ಸಭಾ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೆಸರನ್ನು ಉಲ್ಲೇಖಿಸಲು ಮರೆತರು. ನಾನೇ ಸಿಎಂ ಆಗಿ ಮುಂದುವರಿಯಲಿದ್ದೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ ಸೃಷ್ಟಿಸಿದ ಮರು ದಿನವೇ ಈ ವಿದ್ಯಮಾನ ನಡೆದಿದೆ.

ಸಭಾ ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಸಿದ್ದರಾಮಯ್ಯ, ಒಬ್ಬೊಬ್ಬರಾಗಿ ಗಣ್ಯರ ಹೆಸರನ್ನು ಪ್ರಸ್ತಾಪಿಸಿದರು. ಆದರೆ, ಡಿಕೆ ಶಿವಕುಮಾರ್​ ಹೆಸರನ್ನೇ ಉಲ್ಲೇಖಿಸಲಿಲ್ಲ. ಈ ವೇಳೆ, ಭೈರತಿ ಸುರೇಶ್ ಮಧ್ಯ ಪ್ರವೇಶಿಸಿ ಡಿಕೆ ಶಿವಕುಮಾರ್ ಹೆಸರು ಹೇಳುವಂತೆ ನೆನಪಿಸಿದರು. ತಕ್ಷಣ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರ ಹೆಸರನ್ನೂ ಪ್ರಸ್ತಾಪಿಸಿದರು.

ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ಜನರಿಂದ ಘೋಷಣೆ ಮೊಳಗಿದವು.

ಅಕ್ಕಪಕ್ಕ ಕುಳಿತರೂ ಮೌನಕ್ಕೆ ಜಾರಿದ ಸಿಎಂ ಡಿಸಿಎಂ

ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಅಕ್ಕಪಕ್ಕವೇ ಕುಳಿತಿದ್ದರೂ ಅವರ ನಡುವೆ ಅಸಮಾಧಾನ ಇದ್ದಂತೆ ಕಂಡುಬಂತು. ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಿಲ್ಲ. ವೀರನಾರಾಯಣ ದೇವರ ದರ್ಶನದ ವೇಳೆಯೂ ಸಿಎಂ ಮುಂದೆ ಮುಂದೆ ಇದ್ದರೆ, ಡಿಸಿಎಂ ಹಿಂದೆ ಹಿಂದೆ ಸರಿಯುತ್ತಿದ್ದುದು ಕಾಣಿಸುತ್ತಿತ್ತು.

ಕಾರ್ಯಕ್ರಮದ ರೂವಾರಿ, ಸಚಿವ ಹೆಚ್​​​ಕೆ ಪಾಟೀಲ್ ಸೇರಿ ಹಲವು ಸಚಿವರು ಸಿಎಂಗೆ ಸಾಥ್ ನೀಡಿದರು. ಆದರೆ ಹಿಂದೆ ಹೋಗುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಏಕಾಂಗಿಯಾಗಿ ಇದ್ದರು. ತೆರೆದ ವಾಹನದಲ್ಲಿ ನಡೆದ ಮೆರವಣಿಗೆಯಲ್ಲಿಯೂ ಇಬ್ಬರೂ ನಾಯಕರು ಮಾತನಾಡಿಲ್ಲ. ಸಿಎಂ ಬಳಿ ನಿಲ್ಲದೇ ವಾಹನದ ಮೂಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನಿಂತಿದ್ದರು. ಗದಗ ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೊಸೈಯಿಟಿ ಆವರಣದವರೆಗೂ ಮೆರವಣಿಗೆ ನಡೆಯಿತು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಏನನ್ನೋ ಓದುತ್ತಾ ಕುಳಿತರ, ಸಿಎಂ ಸಿದ್ದರಾಮಯ್ಯ ಡ್ರೈ ಫ್ರುಟ್ಸ್ ತಿನ್ನುತ್ತಾ ಕುಳಿತಿದ್ದರು.

ಐದು ವರ್ಷ ನಾನೇ ಸಿಎಂ ಎಂಬ ಸಿದ್ಧರಾಮಯ್ಯ ಹೇಳಿಕೆಯಿಂದ ಡಿಸಿಎಂ ಒಳಗೊಳಗೆ ಅಸಮಾಧಾನಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಗುರುವಾರ ಬೆಂಗಳೂರಿನಲ್ಲಿ ಉತ್ತರಿಸಿದ್ದ ಡಿಕೆ ಶಿವಕುಮಾರ್, ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ ಎಂದಿದ್ದರು.

ಇದನ್ನೂ ಓದಿ: ಗದಗ: ಕರ್ನಾಟಕ ಸಂಭ್ರಮ ಮೆರವಣಿಗೆಯಲ್ಲಿ ಶಿವಕುಮಾರ್, ಸಿದ್ದರಾಮಯ್ಯರಿಂದ ‘ಅಂತರ’ ಕಾಯ್ದುಕೊಂಡಿದ್ದು ಆಕಸ್ಮಿಕವೋ?

ಆದರೆ, ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್​​ನಲ್ಲಿ ಅಪಸ್ವರ ಮೂಡಲು ಕಾರಣವಾಗಿತ್ತು. ವರಿಷ್ಠರ ಸೂಚನೆಯನ್ನು ಚಿಕ್ಕ ಹಾಗೂ ದೊಡ್ಡ ನಾಯಕರು ಎಲ್ಲರೂ ಪಾಲಿಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದರು. ಇದರ ಬೆನ್ನಲ್ಲೇ ರಾಮನಗರದಲ್ಲಿ ಶಾಸಕ ಇಕ್ಬಾಲ್, ಒಂದೂವರೆ ವರ್ಷದ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದರು. ಇದೀಗ ಪ್ರಿಯಾಂಕ್ ಖರ್ಗೆ, ಜಿ. ಪರಮೇಶ್ವರ ಎಲ್ಲರೂ ಸಿಎಂ ಹುದ್ದೆ ಬಗ್ಗೆ ಮಾತನಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ