5 Guarantee: ಎಲ್ಲಾ ಯೋಜನೆಗಳಿಗೂ ಮಾನದಂಡ ಹಾಕಬೇಕಾಗಿದೆ, ಯಾರು ಅರ್ಹ ಅವರಿಗೆ ಯೋಜನೆಗಳು ಲಭಿಸುತ್ತವೆ- ಪ್ರಿಯಾಂಕ್ ಖರ್ಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಭೆ ಮಾಡುತ್ತಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಇದೆ. ಜನರಿಗೆ ಗ್ಯಾರೆಂಟಿ ಯೋಜನೆಗಳ ಬಗ್ಗೆ ನೀರಿಕ್ಷೆ ಇದೆ. ಯಾವಾಗ ಅನುಷ್ಠಾನ ಮಾಡಬೇಕೆಂದು ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಭೆ ಮಾಡುತ್ತಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಇದೆ. ಜನರಿಗೆ ಗ್ಯಾರೆಂಟಿ ಯೋಜನೆಗಳ ಬಗ್ಗೆ ನೀರಿಕ್ಷೆ ಇದೆ. ಯಾವಾಗ ಅನುಷ್ಠಾನ ಮಾಡಬೇಕೆಂದು ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ (Priyank Kharge) ಹೇಳಿದ್ದಾರೆ. ಗ್ಯಾರೆಂಟಿ (Guarantee) ಯೋಜನೆಗೆ ಕಂಡಿಷನ್ಸ್‌ಗಳನ್ನು ಅಪ್ಲೈ ಮಾಡ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸರ್ಕಾರದ ಪ್ರತಿಯೊಂದು ರೂಪಾಯಿ ಕೂಡ ಮಾನದಂಡದ ಆಧಾರದಲ್ಲೇ ಇರಲಿದೆ. ಎಲ್ಲಾ ಯೋಜನೆಗಳಿಗೂ ಮಾನದಂಡ ಹಾಕಬೇಕಾಗಿದೆ ಎಂದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಧಾನಿ ಮೋದಿಯವರ ಯಾವ ಯೋಜನೆಯಲ್ಲಿ ಮಾನದಂಡವಿಲ್ಲ ಹೇಳಿ ? ನಾವು ಹೇಳುತ್ತಿರುವುದರಲ್ಲಿ ತಪ್ಪೇನಿದೆ. ಬಿಪಿಎಲ್ ಕಾರ್ಡ್‌ದಾರರಿಗೆ, ನಿರ್ಗತಿಕರಿಗೆ ಯೋಜನೆ ಮಾಡುತ್ತೇವೆ ಅಂತ ಹೇಳಿದ್ದೇವೆ. ಯೋಜನೆಗಳಿಗೆ ಮಾನದಂಡಗಳು, ಫ್ರೇಮ್ ವರ್ಕ್ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ವರುಣಾ ಕ್ಷೇತ್ರದ ಜನರಿಗೆ ತಮ್ಮ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಿದ ಸಿದ್ದರಾಮಯ್ಯ
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಹಣ ಬಂದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ. ಜನರಿಗೆ ಅರಿವು ಮೂಡಿಸಲು ಗ್ಯಾರಂಟಿ ಕಾರ್ಡ್ ಹಂಚಿದ್ದೇವೆ. ಯಾರು ಅರ್ಹರಿದ್ದಾರೆ ಅವರಿಗೆ ಯೋಜನೆಗಳು ಲಭಿಸುತ್ತವೆ ಎಂದು ತಿಳಿಸಿದರು.
ಎಲ್ಲರಿಗೂ ಉಚಿತ ಕೊಡಲು ಆಗಲ್ಲ, ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ: ಶಿವಲಿಂಗೇಗೌಡ
ಹುಮ್ಮಸ್ಸಿನಲ್ಲಿ ನನಗೂ ಫ್ರೀ ನಿನಗೂ ಫ್ರೀ ಅಂತಾ ಹೇಳಿದ್ದಾರೆ. ರಾಜ್ಯದ ಎಲ್ಲರಿಗೂ ಉಚಿತ ಕೊಡಲು ಆಗಲ್ಲ. ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಗ್ಯಾರಂಟಿಗಳ ಜಾರಿ ಮಾಡಲಾಗುತ್ತದೆ. 5 ವರ್ಷಗಳ ಒಳಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಾರೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಒಂದು ಹದಿನೈದು ದಿನ ಟೈಮ್ ಕೊಡಿ, ಜಾರಿ ಮಾಡಲಿಲ್ಲ ಅಂದ್ರೆ ನಿಮ್ಮ ಜತೆ ನಾನು ಸೇರಿಕೊಳ್ಳುತ್ತೇನೆ. ಈ ಯೋಜನೆ ಐಎಎಸ್ ಐಪಿಎಸ್ ಅವರಿಗೆ ಅಲ್ಲ. ಮದ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಜಾರಿ ಮಾಡಲಾಗುತ್ತದೆ. ನಾನು ಮಿನಿಸ್ಟರ್ ಆಗಬೇಕಿತ್ತು..ಎಲ್ಲ ಹಣೆ ಬರಹ ಎಂದು ಬೇಸರಿಂದ ಹೇಳಿದರು.
ಇಂದು ಅಥವಾ ನಾಳೆ ಚರ್ಚಿಸಿ ತೀರ್ಮಾನ
ಗ್ಯಾರಂಟಿಗಳ ಜಾರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಇಂದು ಅಥವಾ ನಾಳೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಧಾನಸೌಧದಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.
ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Wed, 31 May 23