ಕಾಂಗ್ರೆಸ್ಗೆ ಜನ ಬೆಂಬಲವಿಲ್ಲ, ಅದಕ್ಕೆ ಭಾರತ್ ಜೋಡೋ ಯಾತ್ರೆ ಸಂಪೂರ್ಣ ಫೇಲ್ ಆಗಿದೆ: ಅರುಣ್ ಸಿಂಗ್ ವಾಗ್ದಾಳಿ
ದೇಶವನ್ನು ಒಡೆಯುವ ಶಕ್ತಿಗಳನ್ನು ಬೆಳೆಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡಿದೆ ಅಂತಾ ಜನರಿಗೆ ಗೊತ್ತಿದೆ. ಜನ ಬೆಂಬಲ ಕಾಂಗ್ರೆಸ್ಗೆ ಸಿಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ಮಾಡಿದರು.
ಗದಗ: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ (Bharat Jodo Yatra) ಸಂಪೂರ್ಣವಾಗಿ ಫೇಲ್ ಆಗಿದೆ. ದೇಶವನ್ನು ಒಡೆಯುವ ಶಕ್ತಿಗಳನ್ನು ಬೆಳೆಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡಿದೆ ಅಂತಾ ಜನರಿಗೆ ಗೊತ್ತಿದೆ. ಜನ ಬೆಂಬಲ ಕಾಂಗ್ರೆಸ್ಗೆ ಸಿಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ಮಾಡಿದರು. ಜಿಲ್ಲೆಯಲ್ಲಿ ಮಾತನಾಡಿ, ನಕ್ಸಲ್ ಸಮಸ್ಯೆ, ಜಮ್ಮು ಕಾಶ್ಮೀರದ ಉಗ್ರಗಾಮಿಗಳ ಸಮಸ್ಯೆ, ಗಡಿ ಸಮಸ್ಯೆ ಇರಬಹುದು. ಈ ಸಮಸ್ಯೆಗಳನ್ನು ಬುಡದಿಂದ ಬೆಳೆಯೋ ಕಾರ್ಯ ಮಾಡಿದ್ದು ಕಾಂಗ್ರೆಸ್ ಸರಕಾರ. ಇಲ್ಲೊಬ್ಬ ಕಾಂಗ್ರೆಸ್ ನಾಯಕ ಹಿಂದೂ ಪದವನ್ನ ಅಶ್ಲೀಲ ಅಂತಾ ಕರೆದ ಬೈಯೋ ಕೆಲಸ ಮಾಡಿದ್ರು. ಸರ್ಜಿಕಲ್ ಸ್ಟ್ರೈಕ್ ನಡೆದಾಗ ಕಾಂಗ್ರೆಸ್ ಮುಖಂಡ ದಿಗ್ವಿಜಯಸಿಂಗ್ ಮತ್ತು ಕಂಪನಿ ಪ್ರೆಸ್ ಮೀಟ್ ಮಾಡಿ ಸಾಕ್ಷಿ ಕೇಳಿದ್ರು. ದೇಶದ ಸೈನಿಕರ ಪರಾಕ್ರಮ ಪ್ರಶ್ನೆ ಮಾಡೋದು ಕಾಂಗ್ರೆಸ್ನ ಚಾಳಿಯಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ನವರು ದೇಶವನ್ನು ಒಡೆಯೋ ಕೆಲಸ ಮಾಡುತ್ತಿದ್ದಾರೆ
ದೇಶದ ಏಕತೆ, ಅಖಂಡತೆಯೊಂದಿಗೆ ಕಾಂಗ್ರೆಸ್ ಎಂದೂ ಇಲ್ಲ. ನೆಹರೂ ಕಾಲದಲ್ಲೇ ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜದ ಅಗ್ರಿಮೆಂಟ್ ಮಾಡಿದ್ರು ಶೇಕ್ ಅಬ್ದುಲ್ಲಾ ಜೊತೆಗೂಡಿ. ಮೋದಿ ಆರ್ಟಿಕಲ್ 370 ಸಮಾಪ್ತಿ ಮಾಡಿದ್ರು. ಒಂದು ಕಡೆ ಕಾಂಗ್ರೆಸ್ನವರು ದೇಶವನ್ನು ಒಡೆಯೋ ಕಾರ್ಯ ಮಾಡಿದ್ದಾರೆ. ಆದ್ರೆ ಬಿಜೆಪಿ ದೇಶವನ್ನು ಜೋಡಿಸೋಕೆ, ದೇಶದ ಏಕತೆ, ಅಖಂಡತೆಗಾಗಿ ಕೆಲಸ ಮಾಡುತ್ತೆ. ಅದಕ್ಕಾಗಿಯೇ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಫೇಲ್ ಆಗಿದೆ ಎಂದು ಅರುಣ್ ಸಿಂಗ್ ತಿಳಿಸಿದರು.
ಇದನ್ನೂ ಓದಿ: ಮಂಡ್ಯ ಬದಲಾದರೆ ರಾಜ್ಯ ಬದಲಾಗುತ್ತದೆ, ಜಿಲ್ಲೆಯಲ್ಲಿ ಕನಿಷ್ಟ 5 ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗಳನ್ನು ಗೆಲ್ಲಿಸಿ: ಸಿದ್ದರಾಮಯ್ಯ
ಉಚಿತ ವಿದ್ಯುತ್ ಘೋಷಣೆಗೆ ಅರುಣ್ ಸಿಂಗ್ ಟಾಂಗ್
ಕಾಂಗ್ರೆಸ್ ಸರಕಾರ ಇದ್ದ ರಾಜ್ಯಗಳು ಅಂಧಕ್ಕಾರದಲ್ಲಿ ಮುಳುಗಿವೆ. ಮೊದಲು ರಾಜ್ಯಗಳಲ್ಲಿ ವಿದ್ಯುತ್ ಎಷ್ಟು ಗಂಟೆ ಕೊಡ್ತಾರೆ ಅಂತಾ ನೋಡಿ ಎಂದು ಕಾಂಗ್ರೆಸ್ 200 ಯುನಿಟ್ ಉಚಿತ ವಿದ್ಯುತ್ ಘೋಷಣೆಗೆ ಅರುಣ್ ಸಿಂಗ್ ಟಾಂಗ್ ಕೊಟ್ಟರು. ಕರ್ನಾಟಕದಲ್ಲಿ 3 ಫೇಸ್ ದಿನದಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಕಾಂಗ್ರೆಸ್ ಸರಕಾರ ಇರೋ ರಾಜಸ್ಥಾನದಲ್ಲಿ ರಾತ್ರಿ ಮಾತ್ರ ವಿದ್ಯುತ್ ಇರುತ್ತೆ. ದಿನದಲ್ಲಿ ಒಂದು ಗಂಟೆನೂ ಬರೋದಿಲ್ಲ. ಪರೀಕ್ಷೆ ಬರೆಯೋ ವಿದ್ಯಾರ್ಥಿಗಳು ಓದೋಕೆ ಸಂಜೆಯೂ ವಿದ್ಯುತ್ ಬರೋದಿಲ್ಲ.
150 ಸೀಟ್ ಗೆಲ್ತೇವೆ
ನೀವು ರಾಜಸ್ಥಾನ, ಛತ್ತಿಸಘಡದಲ್ಲಿ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿದ್ರೆ ನಿಮಗೆ ಹೆದರಿಕೆ ಅನ್ನಿಸ್ತದೆ. ತಪ್ಪಾಗಿಯೂ ಕನಸಿನಲ್ಲಿಯೂ ಕರ್ನಾಟಕದಲ್ಲಿ ಕಾಂಗ್ರೆಸ್ ಬರಬಾರದು ಅಂತಾರೆ. ಕರ್ನಾಟಕವನ್ನು ಅಂಧಕಾರಕ್ಕೆ ಒಯ್ತಾರೆ, 10 ವರ್ಷ ಹಿಂದೆ ತಗೊಂಡು ಹೋಗ್ತಾರೆ. ಮೋದಿಯವರ, ಬೊಮ್ಮಾಯಿ ನೇತೃತ್ವದಲ್ಲಿ, ಯಡಿಯೂರಪ್ಪನವರ ಆಶೀರ್ವಾದಿಂದ 150 ಸೀಟ್ ಗೆಲ್ತೇವೆ. ಗದಗನಲ್ಲಿ ನಾಲ್ಕೂ ಕ್ಷೇತ್ರ ಗೆಲ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿವಿಧ ಭ್ರಷ್ಟಾಚಾರ
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶಿಕ್ಷಕರ, ಪೊಲೀಸ್ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಜೊತೆಗೆ ಹಿಂದೂಗಳ ಹತ್ಯೆ, ಪಿಎಫ್ಐ ಜಾಲವನ್ನು ವಿಸ್ತರಿಸಿದರು. ಈ ಬಗ್ಗೆ ಸಿದ್ದರಾಮಯ್ಯ ಏಕೆ ತುಟಿ ಬಿಚ್ಚುತ್ತಿಲ್ಲ. ಕಾಂಗ್ರೆಸ್ ಸುಳ್ಳು ಆಶ್ವಾಸನೆಗಳ ವ್ಯಾಪಾರದ ಪಕ್ಷ. ಪ್ರಜಾಧ್ವನಿ ಸಮಾವೇಶದಲ್ಲಿ ಎಲ್ಲಾ ಕುರ್ಚಿಗಳು ಖಾಲಿಯಾಗಿ ಉಳಿತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿಗರು ಹೆಚ್ಚು ಬರ್ತಾರೋ, ಸಿದ್ದರಾಮಯ್ಯ ಬೆಂಬಲಿಗರು ಹೆಚ್ಚು ಬರ್ತಾರಾ ಅಂತಾ ಶಕ್ತಿ ಪ್ರದರ್ಶನ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಪರಸ್ಪರ ಒಬ್ಬರಿಗೊಬ್ಬರು ನನ್ನ ನೇತೃತ್ವದಲ್ಲಿ ಆಗಿದೆ ಅಂತಾ ಹೇಳ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿದೆ. ಇದರಿಂದಾಗಿ ರಾಜ್ಯದ ಜನರಿಗೆ ಕಾಂಗ್ರೆಸ್ ಮೇಲಿನ ವಿಶ್ವಾಸ ಹೋಗಿದೆ ಎಂದು ಅರುಣ್ ಸಿಂಗ್ ಹರಿಹಾಯ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.