Karnataka Congress: ಶಾಸಕರು ಸೇರಿದಂತೆ ರಾಜ್ಯದ 25 ನಾಯಕರಿಗೆ ದೆಹಲಿ ಬರುವಂತೆ ಕಾಂಗ್ರೆಸ್​ ಹೈಕಮಾಂಡ್ ಸೂಚನೆ

|

Updated on: Jul 29, 2023 | 10:29 AM

Congress: ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್​ ಶಾಸಕರು ಮತ್ತು ಸಚಿವರ ನಡುವೆ ನಡೆಯುತ್ತಿರುವ ಕಿತ್ತಾಟಕ್ಕೆ ಕಾಂಗ್ರೆಸ್​ ಹೈಕಮಾಂಡ್ ಎಂಟ್ರಿ ನೀಡಿದ್ದು, ಆಗಸ್ಟ್​ 2ಕ್ಕೆ ರಾಜ್ಯದ 25 ನಾಯಕರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದೆ.

Karnataka Congress: ಶಾಸಕರು ಸೇರಿದಂತೆ ರಾಜ್ಯದ 25 ನಾಯಕರಿಗೆ ದೆಹಲಿ ಬರುವಂತೆ ಕಾಂಗ್ರೆಸ್​ ಹೈಕಮಾಂಡ್ ಸೂಚನೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ, ಜು 29: ರಾಜ್ಯ ಕಾಂಗ್ರೆಸ್​​ ಶಾಸಕರ (Congress MLAs) ಪತ್ರ ವ್ಯವಹಾರ ದೆಹಲಿ ಕಾಂಗ್ರೆಸ್​​ ನಾಯಕರಿಗೆ ದೊಡ್ಡ ತಲೆನೋವುವಾಗಿದೆ, ಸಿಎಂ ಸಿದ್ಧರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಶಾಸಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಈ ಸಭೆಯಲ್ಲಿ ರಾಜೀನಾಮೆ ಬೆದರಿಕೆಗಳು ಕೂಡ ಮಾಡಲಾಗಿತ್ತು ಎಂದು ಹೇಳಲಾಗಿದೆ. ಇದೀಗ ಸಚಿವರ ವಿರುದ್ಧ ಅಸಹಕಾರ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ ನೀಡಿದೆ. ಶಾಸಕಾಂಗ ಪಕ್ಷದ ಸಭೆಯ ನಂತರ ಈ ಬೆಳವಣಿಗೆ ನಡೆದಿದೆ. ಇದೀಗ ಸಚಿವರು ಮತ್ತು ಪ್ರಮುಖ ನಾಯಕರು ಆಗಸ್ಟ್​ 2ಕ್ಕೆ ದೆಹಲಿಗೆ ಬರುವಂತೆ ಹೈಕಮಾಂಡ್ ತಿಳಿಸಿದೆ. ಸಚಿವರ ವಿರುದ್ಧ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿರುವ ಕೆಲ ಶಾಸಕರು, ಸಚಿವರಿಗೆ ಹಾಗೂ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ ಬಿ.ಕೆ.ಹರಿಪ್ರಸಾದ್, ಬಿ.ಎಲ್.ಶಂಕರ್ ಅವರಿಗೆ ದೆಹಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಹೈಕಮಾಂಡ್ ಈ  ಶಾಸಕರು , ಸಚಿವರು, ಹಿರಿಯರ ನಾಯಕರ ಜತೆಗೆ ಕಾಂಗ್ರೆಸ್​ ಶಾಸಕರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ  ಚರ್ಚೆ ನಡೆಸಲಿದೆ ಎಂದು ನ್ಯೂಸ್​​9 ವರದಿ ಮಾಡಿದೆ.

ಇನ್ನೂ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಶಾಸಕ ಹರಿಪ್ರಸಾದ್ ನನಗೆ ಸಿಎಂ ಮಾಡಲು ಗೊತ್ತು, ಸ್ಥಾನದಿಂದ ಇಳಿಸಲು ಗೊತ್ತು ಎಂಬ ಹೇಳಿಕೆಯ ಬಗ್ಗೆಯು ಹೈಕಮಾಂಡ್ ಈ ಸಭೆಯಲ್ಲಿ ಚರ್ಚೆ ನಡೆಸಬಹುದು ಎಂದು ವರದಿ ಹೇಳಿದೆ. ವರದಿಗಳ ಪ್ರಕಾರ ಶಾಸಕರ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಸಮನ್ವಯ ಸಮಿತಿಯನ್ನು ರಚಿಸಬಹುದು. ಸರ್ಕಾರ ಮತ್ತು ಪಕ್ಷದ ನಾಯಕರ ನಡುವೆ ಸೇತುವೆಯಾಗಿ ಕೆಲಸ ಮಾಡಲು ಗೃಹ ಸಚಿವ ಡಾ ಜಿ ಪರಮೇಶ್ವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಹಂಕಾರಿ ಸಚಿವರಿಂದ ಸ್ವಾಭಿಮಾನಕ್ಕೆ ಧಕ್ಕೆ; ಸಿದ್ದರಾಮಯ್ಯ ಬಳಿ ರಾಜೀನಾಮೆ ಬೆದರಿಕೆ ಹಾಕಿದ ಬಿಆರ್ ಪಾಟೀಲ್

ಈ ಸಭೆಯಲ್ಲಿ ಮಂಡಳಿ ಮತ್ತು ನಿಗಮಗಳ ಮುಖ್ಯಸ್ಥರನ್ನು ನೇಮಕಾ ಮಾಡುವ ಬಗ್ಗೆ ಸಭೆಯಲ್ಲಿ ಕಾಂಗ್ರೆಸ್​​ ನಾಯಕರು ಚರ್ಚೆ ಮಾಡಬಹುದು ಎಂದು ಹೇಳಲಾಗಿದೆ. ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಸಭೆ ನಡೆಸಲಾಗುವುದು ಮತ್ತು ಸಭೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​​ ಗಾಂಧಿ ಕೂಡ ಭಾಗವಹಿಸುವ ಸಾಧ್ಯತೆ ಇದೆ. ಇದರ ಜತೆಗೆ 2024ರ ಲೋಕಸಭೆ ಚುನಾವಣೆ ಕಾರ್ಯತಂತ್ರದ ಬಗ್ಗೆಯು ಚರ್ಚೆ ನಡೆಯಬಹುದು ಎಂದು ಹೇಳಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Sat, 29 July 23