ರಾಯಚೂರು: ದೇಶದಲ್ಲಿ ಕಾಂಗ್ರೆಸ್(Congress) ಬ್ರೇಕ್ ಫೇಲ್ ಆಗಿರುವ ಪಕ್ಷ. ಬ್ರೇಕ್ ಇಲ್ಲದ ಪಾರ್ಟಿ ಯಾವತ್ತಾದರೂ ಒಂದು ದಿನ ಅಪಘಾತ ಆಗುತ್ತೆ ಎಂದು ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಸಚಿವ ಬಿ.ಶ್ರೀರಾಮುಲು(B Sriramulu) ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಗುಜರಾತ್ ಮಾದರಿ ಗೊಂದಲ ಸೃಷ್ಟಿಸುವುದರಲ್ಲಿ ಕಾಂಗ್ರೆಸ್ಸಿಗರು ನಿಪುಣರು. ಕಾಂಗ್ರೆಸ್ಸಿಗರಿಗೆ ತಮ್ಮ ಪಕ್ಷದ ಗೊಂದಲ ಸರಿಪಡಿಕೊಳ್ಳಲು ಆಗ್ತಿಲ್ಲ ಎಂದರು.
ಕಾಂಗ್ರೆಸ್ನಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವರ ಗುಂಪುಗಳಿವೆ. ಡಿಕೆಶಿ ಅವರದ್ದು ಒಂದು ಗುಂಪು, ಸಿದ್ದರಾಮಯ್ಯರದ್ದು ಒಂದು ಗುಂಪು. ತುಮಕೂರು ಭಾಗದಲ್ಲಿ ಪರಮೇಶ್ವರ್ ಅವರದ್ದು ಒಂದು ಗುಂಪು ಇದೆ. ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಅವರದೊಂದು ಗುಂಪು ಇದೆ. ಈ ಗುಂಪುಗಳು ಸೃಷ್ಟಿಯಾಗಿ ಕಾಂಗ್ರೆಸ್ ಕೋಮಾ ಸ್ಥಿತಿಯಲ್ಲಿದೆ. ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕನಸು ಕಾಣ್ತಿದೆ. ಭಾರತೀಯ ಜನತಾ ಪಾರ್ಟಿ ಬಹಳ ಸ್ಪಷ್ಟವಾಗಿದೆ. 2023ರಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡ್ತಿವಿ. ಮುಂದಿನ ದಿನಗಳಲ್ಲಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೇವೆ ಎಂದ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಈಗ ಯಾರಿಗೂ ಬೇಕಾಗಿಲ್ಲ, ಎಲ್ಲವನ್ನೂ ಸಿಎಂ ಅವರೇ ಇಟ್ಟುಕೊಳ್ಳಲಿ: ಬೊಮ್ಮಾಯಿಗೆ ಯತ್ನಾಳ್ ಟಾಂಗ್
ರೆಡ್ಡಿ ನನ್ನ ಬಳಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರು
ಇನ್ನು ಇದೇ ವೇಳೆ ಬಿ.ಶ್ರೀರಾಮುಲು, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದರು. ಪ್ರಾದೇಶಿಕ ಪಕ್ಷ ಸ್ಥಾಪನೆ ಬಗ್ಗೆ ಕಳೆದ ಬಾರಿ ನನ್ನ ಗಮನಕ್ಕೆ ಬಂದಿದೆ. ರೆಡ್ಡಿ ನನ್ನ ಬಳಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರು. ಹಿರಿಯರಿಗೆ ನಾನು ಏನನ್ನು ತಿಳಿಸಬೇಕೋ ಅದನ್ನು ತಿಳಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಬೆಳವಣಿಗೆ ಆಗಿದೆ. ಸ್ವಲ್ಪ ಬ್ಯುಸಿ ಇದ್ದೆ, ಹಾಗಾಗಿ ಜನಾರ್ದನರೆಡ್ಡಿ ಭೇಟಿಯಾಗಲು ಆಗಿಲ್ಲ. ಖಂಡಿತವಾಗಿಯೂ ನಾನು ಜನಾರ್ದನ ರೆಡ್ಡಿ ಭೇಟಿಯಾಗುತ್ತೇನೆ. ಭೇಟಿಯಾದಾಗ ಯಾವ ರೀತಿ ನೋವಾಗಿದೆ ಎಂಬುದನ್ನ ಕೇಳ್ತೀನಿ. ಸ್ನೇಹ ಅಂತಾ ಬಂದಾಗ ಎಲ್ಲಾ ಪಕ್ಷದವರು ಒಂದೇ. ಪಾರ್ಟಿ ಅಂತಾ ಬಂದಾಗ ಭಿನ್ನಾಭಿಪ್ರಾಯಗಳು ಇರೋದು ಸಹಜ. ಜನಾರ್ದನ ರೆಡ್ಡಿ ನನಗೆ ಆತ್ಮೀಯ ಸ್ನೇಹಿತರು. ಸ್ನೇಹ, ಪಾರ್ಟಿ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:20 pm, Mon, 12 December 22