ಕಾಂಗ್ರೆಸ್ ಅತ್ಯಂತ ಕೆಳಮಟ್ಟದ ರಾಜಕೀಯ ಮಾಡುತ್ತಿದೆ: ಜೈರಾಮ್ ರಮೇಶ್ಗೆ ತಿರುಗೇಟು ನೀಡಿದ ಜೆ.ಪಿ. ನಡ್ಡಾ, ಧರ್ಮೇಂದ್ರ ಪ್ರಧಾನ್
ಸಂಸತ್ತಿನ ವಿಶೇಷ ಅಧಿವೇಶನ ಕೊನೆಗೊಂಡಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಇನ್ನು ಸಂಸತ್ತಿನ ವಿನ್ಯಾಸದ ಬಗ್ಗೆ Xನಲ್ಲಿ (ಹಿಂದಿನ ಟ್ವಿಟರ್) ವಿವರಿಸುವ ಭರದಲ್ಲಿ ‘ಮೋದಿ ಮಲ್ಪಿಪ್ಲೆಕ್ಸ್’ ಎಂದು ಜೈರಾಮ್ ರಮೇಶ್ ಅವರು ಟೀಕಿಸಿದ್ದಾರೆ. ಜೈರಾಮ್ ಅವರ ಈ ಟೀಕೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು ನೀಡಿದ್ದಾರೆ.
ದೆಹಲಿ. ಸೆ.23: ನೂತನ ಸಂಸತ್ ಭವನವನ್ನು ‘ಮೋದಿ ಮಲ್ಪಿಪ್ಲೆಕ್ಸ್’ ಎಂದು Xನಲ್ಲಿ (ಈ ಹಿಂದಿನ ಟ್ವಿಟರ್) ಟ್ವೀಟ್ ಮಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್(Jairam Ramesh) ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ(JP Nadda) ಮತ್ತು ಧರ್ಮೇಂದ್ರ ಪ್ರಧಾನ್ ( Dharmendra Pradhan) ಅವರು ಟ್ವೀಟ್ನಲ್ಲೇ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಅತ್ಯಂತ ಕೆಳಮಟ್ಟದ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ನ ಮನಸ್ಥಿತಿ ಕರುಣಾಜನಕವಾಗಿದೆ ಎಂದು ಹೇಳಿದರು. ಕಾಂಗ್ರೆಸ್ನ ಈ ಹೇಳಿಕೆ 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನವಲ್ಲದೆ ಬೇರೇನೂ ಅಲ್ಲ. ಅದೇನೇ ಇರಲಿ, ಕಾಂಗ್ರೆಸ್ ನೂತನ ಸಂಸತ್ತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಅವರು 1975ರಲ್ಲಿ ಈ ಪ್ರಯತ್ನವನ್ನು ನಡೆಸುತ್ತ ಬಂದಿದ್ದಾರೆ, ಆದರೆ ಅದೆಲ್ಲವೂ ವಿಫಲವಾಗಿದೆ ಎಂದು ಜೆ.ಪಿ ನಡ್ಡಾ ಹೇಳಿದ್ದಾರೆ.
ಜೈರಾಮ್ ರಮೇಶ್ ಹೇಳಿಕೆಗೆ ಟಕ್ಕರ್ ನೀಡಿದ ಧರ್ಮೇಂದ್ರ ಪ್ರಧಾನ್
ಇನ್ನು ಜೈರಾಮ್ ರಮೇಶ್ ಅವರು ಈ ಟೀಕೆಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡ ತಿರುಗೇಟು ನೀಡಿದ್ದಾರೆ. ಇದು ಜೈರಾಮ್ ರಮೇಶ್ ಅವರ ಮಾತಲ್ಲ, ರಾಜವಂಶಸ್ಥರಂತೆ ಆಳ್ವಿಕೆ ಮಾಡಿಕೊಂಡು ಬಂದಿರುವ ಕುಟುಂಬದ ಗಣ್ಯರ ಹತಾಶೆಯ ಹೇಳಿಕೆಯಾಗಿದೆ ಎಂದು Xನಲ್ಲಿ ಟ್ವೀಟ್ ಮಾಡಿದ್ದಾರೆ. ಸಂಸತ್ತಿನ ಹಳೆಯ ಕಟ್ಟಡವು ಅಸಮರ್ಪಕವಾಗಿದ್ದು, ಉಭಯ ಸದನಗಳ ಅಗತ್ಯಗಳನ್ನು ಪೂರೈಸುವ ಸರಿಯಾದ ಸ್ಥಳವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
Jairam Ramesh ji’s agony is an expression of the despair of a dynasty and its nobles over the loss of what they considered to be a fief. It was only the other day that his leader in the Lok Sabha had said former Speaker Meira Kumar had emphasised that the old building of… https://t.co/CIntLztESE
— Dharmendra Pradhan (@dpradhanbjp) September 23, 2023
ಈ ಹಿಂದೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಕೂಡ ಈ ಮಾತನ್ನು ಹೇಳಿದ್ದರು. ಹೀಗಿರುವಾಗ ಅವರ ನಾಯಕರೇ ಹಳೆಕಟ್ಟಡದ ವ್ಯವಸ್ಥೆಯ ಬಗ್ಗೆ ಹೇಳಿದ್ದಾರೆ ಎಂದು ಮೀರಾ ಕುಮಾರ್ ಅವರ ಮಾತನ್ನು ಉಲ್ಲೇಖಿಸಿದರು. ಜೈರಾಮ್ ರಮೇಶ್ ಅವರು ತಮ್ಮ ವರಿಷ್ಠರು ಹೇಳಿದಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಭವ್ಯವಾದ ಹೊಸ ಸಂಸತ್ತಿನ ಕಟ್ಟಡವು ಭಾರತ ಪುನರುತ್ಥಾನದ ಸಂಕೇತವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.
ಇದನ್ನೂ ಓದಿ: ಹೊಸ ಸಂಸತ್ತನ್ನು ‘ಮೋದಿ ಮಲ್ಪಿಪ್ಲೆಕ್ಸ್’ ಎಂದು ಕರೆದ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್
ಈಗಾಗಲೇ ಸಂಸತ್ತಿನ ವಿಶೇಷ ಅಧಿವೇಶನ ಕೊನೆಗೊಂಡಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಇನ್ನು ಸಂಸತ್ತಿನ ವಿನ್ಯಾಸ ಬಗ್ಗೆ Xನಲ್ಲಿ ವಿವರಿಸುವ ಭರದಲ್ಲಿ ಜೈರಾಮ್ ರಮೇಶ್ ಅವರು ಇದು ‘ಮೋದಿ ಮಲ್ಪಿಪ್ಲೆಕ್ಸ್’ ಎಂದು ಹೇಳಿದ್ದಾರೆ. ಹಳೆಯ ಸಂಸತ್ತಿಗೆ ಹೋಲಿಸಿದರೆ ಹೊಸ ಸಂಸತ್ತಿನ ವಿನ್ಯಾಸದಲ್ಲಿರುವ ಹಲವು ನ್ಯೂನತೆಗಳ ಬಗ್ಗೆ ಹೇಳಿದ್ದಾರೆ. ಹಳೆಯ ಸಂಸತ್ತಿನಂತೆ ಹೊಸ ಸಂಸತ್ತಿನಲ್ಲಿ ಸದಸ್ಯರ ನಡುವೆ ಸಂವಾದಕ್ಕೆ ಸ್ಥಳವಿಲ್ಲ, ನೌಕರರಿಗೆ ಕೆಲಸ ಮಾಡಲು ಸೌಲಭ್ಯಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಜೆಪಿ ನಡ್ಡಾ ಟ್ವೀಟ್ ಇಲ್ಲಿದೆ:
Even by the lowest standards of the Congress Party, this is a pathetic mindset. This is nothing but an insult to the aspirations of 140 crore Indians.
In any case, this isn’t the first time Congress is anti-Parliament. They tried in 1975 and it failed miserably.😀 https://t.co/QTVQxs4CIN
— Jagat Prakash Nadda (@JPNadda) September 23, 2023
2024ರಲ್ಲಿ ಅಧಿಕಾರ ಬದಲಾವಣೆಯಾದ ನಂತರ ಅಂದರೆ ಇಂಡಿಯಾ ಮೈತ್ರಿಕೂಟಗಳ ಸರ್ಕಾರ ಬಂದ ನಂತರ ಅಲ್ಲಿರುವ ಕೆಲವೊಂದು ವಿಚಾರಗಳನ್ನು ಬದಲಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಪ್ರಚಾರ ಪಡೆಯಲು ಸಂಸತ್ತಿನ ನಿಯಮಗಳನ್ನು ಗಾಳಿಗೆ ತೋರಿ ನೂತನ ಸಂಸತ್ನ್ನು ಉದ್ಟಾಟಿಸಿದ್ದಾರೆ. ಇದೀಗ ಅವರ ಉದ್ದೇಶ ಸಾಕಾರಗೊಂಡಿದೆ ಎಂದು ಹೇಳಿದ್ದಾರೆ.
ಇನ್ನು ಸಂಸತ್ತಿನ ವಾಸ್ತುಶಿಲ್ಪಗಳು ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ. ಹೊಸ ಸಂಸತ್ತಿನಲ್ಲಿ ಸದಸ್ಯರ ನಡುವಿನ ಅಂತರದ ಬಗ್ಗೆ ವಿವರಿಸಿದ ಜೈರಾಮ್ ರಮೇಶ್ ಸಭಾಂಗಣವು ಆರಾಮದಾಯಕವಾಗಿದೆ. ಆದರೆ ಇಲ್ಲಿ ಕುಳಿತಿರುವ ಸದಸ್ಯರು ಪರಸ್ಪರ ನೋಡಲು ಬೈನಾಕ್ಯುಲರ್ ಅಗತ್ಯವಿದೆ ಎಂದು ಹೇಳಿದರು. ಜೈರಾಮ್ ರಮೇಶ್ ಅವರ ಈ ಟೀಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಿರುಗೇಟು ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Sat, 23 September 23