ಜೆಡಿಎಸ್ ವರಿಷ್ಠ ದೇವೇಗೌಡರದು ಮಂಗನ್ಯಾಯ; ವೀರಪ್ಪ ಮೊಯ್ಲಿ ಟೀಕೆ
ರಾಜ್ಯ ಬಿಜೆಪಿಗೆ ಈಗ ಜೆಡಿಎಸ್ನ ಹೆಚ್ಡಿ ಕುಮಾರಸ್ವಾಮಿ ವಕ್ತಾರರಾಗಿದ್ದಾರೆ ಎಂದು ವ್ಯಂಗ್ಯವಾಡಿದ ಮೊಯ್ಲಿ, ಬಿಜೆಪಿಗೆ ಇದುವರೆಗೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇರುವ ಬಿಜೆಪಿ ಅಧ್ಯಕ್ಷ ಅತಂತ್ರರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 7: ಕರ್ನಾಟಕದಲ್ಲಿ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರದು (HD Deve Gowda) ಮಂಗನ್ಯಾಯವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಟೀಕಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು (ಜೆಡಿಎಸ್ನವರು) ಗೆಲ್ಲಲಿಲ್ಲ. ನಮ್ಮನ್ನೂ ಗೆಲ್ಲುವುದಕ್ಕೆ ಬಿಡಲಿಲ್ಲ. ದೇವೇಗೌಡರು ಈಗ ಇಂಡಿಯಾ ಒಕ್ಕೂಟದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಜೆಡಿಎಸ್ ವರತು ಪಡಿಸಿ ದೇಶದಲ್ಲಿ ಎಲ್ಲಾ ಪಕ್ಷ, ವಿಪಕ್ಷಗಳು ಒಗ್ಗಟ್ಟಾಗಿವೆ ಎಂದು ಹೇಳಿದರು.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಮನಸ್ಸು ಪ್ರಧಾನಿ ನರೇಂದ್ರ ಮೋದಿ ಕಡೆಗೆ ಇದೆ. ರಾಜ್ಯದಲ್ಲಿ ಜೆಡಿಎಸ್ಗೆ ಬಹುಮತ ಸಿಗುವುದಿಲ್ಲ. ಹೀಗಾಗಿ ಬಿಜೆಪಿ ಕಡೆ ವಾಲಿದ್ದಾರೆ ಎಂದು ಮೊಯ್ಲಿ ಟೀಕಿಸಿದರು.
ರಾಜ್ಯ ಬಿಜೆಪಿಗೆ ಈಗ ಜೆಡಿಎಸ್ನ ಹೆಚ್ಡಿ ಕುಮಾರಸ್ವಾಮಿ ವಕ್ತಾರರಾಗಿದ್ದಾರೆ ಎಂದು ವ್ಯಂಗ್ಯವಾಡಿದ ಮೊಯ್ಲಿ, ಬಿಜೆಪಿಗೆ ಇದುವರೆಗೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇರುವ ಬಿಜೆಪಿ ಅಧ್ಯಕ್ಷ ಅತಂತ್ರರಾಗಿದ್ದಾರೆ. ಈಗ ಅಮೃತ ಉಂಡವನೇ ಬದುಕುವುದಿಲ್ಲ. ಇನ್ನು ವಿಷ ಉಂಡವನು ಬದುಕುತ್ತಾನೆಯೇ? ಬಿಜೆಪಿಯವರು ವಿಷ ಉಣ್ಣುತ್ತಿದ್ದಾರೆ. ದೇಶಶದಲ್ಲಿ ಜನರನ್ನು ಹಕ್ಕುಗಳನ್ನು ಕಸಿದು ಅಧಿಕಾರ ನಡೆಸುತ್ತಿದ್ದಾರೆ. ಎದುರಾಳಿಗಳ ಮೇಲೆ ನರೇಂದ್ರ ಮೋದಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಮತ್ತೊಂದು ವಿವಾದಿತ ಹೇಳಿಕೆ; ಪ್ರಧಾನಿ ಮೋದಿಯನ್ನು ಮೊಹಮ್ಮದ್ ಅಲಿ ಜಿನ್ನಾ ಜತೆ ಹೋಲಿಸಿದ ವೀರಪ್ಪ ಮೊಯ್ಲಿ
ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ಜಮ್ಮು ಕಾಶ್ಮಿರದಿಂದ ಕನ್ಯಾಕುಮಾರಿ ವರೆಗೂ ಅಘೋಷಿತ ಎಮರ್ಜೆನ್ಸಿ ಇದೆ. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಅದನ್ನು ಕಿತ್ತು ಹಾಕಬೇಕು ಎಂದು ಮೊಯ್ಲಿ ಕರೆ ನೀಡಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ