ಆಪರೇಷನ್ ಹಸ್ತ ಅಲ್ಲ ಬಿಜೆಪಿ ಅವ್ಯವಸ್ಥೆಗೆ ಪಕ್ಷ ಬಿಡುತ್ತಿದ್ದಾರೆ ಎನ್ನುತ್ತಿರುವ ಕಾಂಗ್ರೆಸ್ ನಾಯಕರು; ಕಮಲ ಪಡೆ ಹೇಳುವುದೇನು?

Karnataka Politics; ಆಪರೇಷನ್ ಹಸ್ತ ಕುರಿತ ಚರ್ಚೆ ಕರ್ನಾಟಕ ರಾಜಕಾರಣದಲ್ಲಿ ಸೋಮವಾರವೂ ಮುಂದುವರಿದಿದೆ. ಹಲವು ಜಿಲ್ಲೆಗಳಲ್ಲಿ ಅನೇಕ ಬೆಳವಣಿಗೆಗಳಾಗಿವೆ. ಒಟ್ಟಾರೆಯಾಗಿ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತಕ್ಕೆ ಸಂಬಂಧಿಸಿ ಏನೇನೂ ಬೆಳವಣಿಗೆಗಳಾದವು? ಯಾರು ಏನು ಹೇಳಿದರು ಎಂಬ ಸಮಗ್ರ ಮಾಹಿತಿ ಇಲ್ಲಿದೆ.

ಆಪರೇಷನ್ ಹಸ್ತ ಅಲ್ಲ ಬಿಜೆಪಿ ಅವ್ಯವಸ್ಥೆಗೆ ಪಕ್ಷ ಬಿಡುತ್ತಿದ್ದಾರೆ ಎನ್ನುತ್ತಿರುವ ಕಾಂಗ್ರೆಸ್ ನಾಯಕರು; ಕಮಲ ಪಡೆ ಹೇಳುವುದೇನು?
ಸಾಂದರ್ಭಿಕ ಚಿತ್ರ
Follow us
| Updated By: ಡಾ. ಭಾಸ್ಕರ ಹೆಗಡೆ

Updated on:Aug 28, 2023 | 11:38 AM

ಬೆಂಗಳೂರು, ಆಗಸ್ಟ್ 28: ರಾಜ್ಯ ರಾಜಕಾರಣದಲ್ಲಿ ಎದ್ದಿರುವ ‘ಆಪರೇನ್ ಹಸ್ತ (Operation Hasta)’ದ ಕೂಗು ದಿನೇ ದಿನೇ ತೀವ್ರಗೊಳ್ಳುತ್ತಿದೆ. ಒಂದೆಡೆ, ಬಾಂಬೆ ಬಾಯ್ಸ್​ ಎಂದೇ ಗುರುತಿಸಿಕೊಂಡಿರುವ ಬಿಜೆಪಿ (BJP) ನಾಯಕರ ಪೈಕಿ ಎಸ್​ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಸೇರಿದಂತೆ ಕೆಲವು ನಾಯಕರು ಬಹಿರಂಗವಾಗಿಯೇ ಕಾಂಗ್ರೆಸ್​ಗೆ (Congress) ಮರಳಿ ಸೇರುವ ಬಗ್ಗೆ ಯತ್ನ ನಡೆಸಿದ್ದರೆ ಇನ್ನು ಹಲವು ಕಡೆ ತೆರೆಯ ಮರೆಯಲ್ಲಿ ಪ್ರಯತ್ನಗಳು ಮುಂದುವರಿದಿವೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​​ (JDS)  ನಾಯಕರ ಸೆಳೆಯಲು ಹೆಚ್​ಡಿ ಕುಮಾರಸ್ವಾಮಿ ಅವರ ಹಿಂದಿನ ಆಪ್ತ, ಈಗ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಚಲುವರಾಯಸ್ವಾಮಿ ಅವರನ್ನು ಮುಂದೆ ಬಿಡಲಾಗಿದೆ. ಈ ಮಧ್ಯೆ, ಒಟ್ಟಾರೆಯಾಗಿ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತಕ್ಕೆ ಸಂಬಂಧಿಸಿ ಏನೇನೂ ಬೆಳವಣಿಗೆಗಳಾದವು? ಯಾರು ಏನು ಹೇಳಿದರು ಎಂಬ ಸಮಗ್ರ ಮಾಹಿತಿ ಇಲ್ಲಿದೆ.

ನಮಗೆ ಆಪರೇಷನ್ ಅವಶ್ಯಕತೆ ಇಲ್ಲ, ಬಹುಮತವಿದೆ; ಸಚಿವ ತಂಗಡಗಿ

ನಮಗೆ ಆಪರೇಷನ್ ಅವಶ್ಯಕತೆ ಇಲ್ಲ, ಬಹುಮತವಿದೆ ಎಂದು ಕಲಬುರಗಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್​​ ತಂಗಡಗಿ ಹೇಳಿದ್ದಾರೆ. ಕಾಂಗ್ರೆಸ್​ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಬರುವವರು ಬರಲಿ. ನಾವು ಗೇಟ್​ ಓಪನ್​ ಮಾಡಿದ್ರೆ ಬಿಜೆಪಿ ಶಾಸಕರೆಲ್ಲ ಬರುತ್ತಾರೆ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ವರಿಷ್ಠರು ನಿರ್ಧರಿಸ್ತಾರೆ. ಬಿಜೆಪಿಯವರು ಒಂದು ವರ್ಷ ಸಮಾಧಾನದಿಂದ ಕೂರಲಿ. ಹೇಗೆ ಅಭಿವೃದ್ಧಿ ಮಾಡ್ತೇವೆ ಅಂತಾ ತೋರಿಸುತ್ತೇವೆ ಎಂದು ತಂಗಡಗಿ ಹೇಳಿದ್ದಾರೆ.

ಕಾಂಗ್ರೆಸ್​ಗೆ 10 ಜನ ಬರಬಹುದು, ಇಲ್ಲ 30 ಜನರೂ ಬರಬಹುದು; ಶೆಟ್ಟರ್

ಈ ಮಧ್ಯೆ, ಬಿಜೆಪಿಯಲ್ಲಿನ ಆಂತರಿಕ ವ್ಯವಸ್ಥೆಯಿಂದ ನೊಂದು ಬಹಳಷ್ಟು ಜನ ಕಾಂಗ್ರೆಸ್ ಸೇರ್ತಿದ್ದಾರೆ. ಬಿಜೆಪಿಯವರು ಆಪರೇಷನ್ ಹಸ್ತ ಎಂದು ಅಪಹಾಸ್ಯ ಮಾಡ್ತಿದ್ದಾರೆ. ಬಿಜೆಪಿ ಲೀಡರ್​​​ಲೆಸ್ ಪಾರ್ಟಿಯಾಗಿದೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್​ ಹೇಳಿದ್ದಾರೆ. ಕಾರ್ಯಕರ್ತರಿಂದ ದೊಡ್ಡವರವರೆಗೂ ಕಾಂಗ್ರೆಸ್​ಗೆ ಬರುತ್ತಿದ್ದಾರೆ. ಇದು ಆಪರೇಶನ್ ಹಸ್ತ ಅಲ್ಲ, ರಾಜಕೀಯ ಧ್ರುವೀಕರಣ ಎಂದು ಶೆಟ್ಟರ್​ ಹೇಳಿದ್ದಾರೆ.

ಕಾಂಗ್ರೆಸ್​ಗೆ 10 ಜನ ಬರಬಹುದು, ಇಲ್ಲ 30 ಜನರೂ ಬರಬಹುದು. ಆದರೆ ಪಕ್ಷಕ್ಕೆ ಬರುವವರ ಹೆಸರನ್ನು ಈಗಲೇ ಹೇಳುವುದಕ್ಕೆ ಆಗಲ್ಲ. ಬಿಜೆಪಿಯ ಹಲವು ನಾಯಕರು ನನಗೆ ಕರೆ ಮಾಡುತ್ತಿದ್ದಾರೆ. ತಳ ಮಟ್ಟದ ಕಾರ್ಯಕರ್ತರು ಕೂಡ ನನಗೆ ಕರೆ ಮಾಡುತ್ತಿದ್ದಾರೆ. ನನ್ನ ಮುಂದೆ ಬಹಳ ಜನ‌ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಬರೋರ ಹೆಸರು ನಾನು ಹೇಳಿದ್ರೆ ಅವರಿಗೆ ತೊಂದರೆ ಆಗುತ್ತೆ. ಸಮಯ ಬಂದಾಗ ಪಕ್ಷಕ್ಕೆ ಬರುವವರ ಹೆಸರು ಹೇಳ್ತೀನಿ ಎಂದು ಶೆಟ್ಟರ್ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ, ಪರೋಕ್ಷವಾಗಿ ಆಹ್ವಾನ ಕೊಟ್ಟ ಸಿಎಂ ಸಿದ್ದರಾಮಯ್ಯ

ತುಮಕೂರಿನಲ್ಲಿ ಆಪರೇಷನ್ ಹಸ್ತಕ್ಕೆ ಜೀವ?

ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಡಿಕೆ ಸಹೋದರರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಜೆಡಿಎಸ್‌ನ ಹಾಲಿ- ಮಾಜಿ ಶಾಸಕರಿಬ್ಬರನ್ನು ಕಾಂಗ್ರೆಸ್ ಕಡೆ ಸೆಳೆಯುವ ಪ್ರಯತ್ನವೂ ಮುಂದುವರಿದಿದೆ ಎನ್ನಲಾಗಿದೆ.

ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿಸಲು ಡಿಕೆ ಶಿವಕುಮಾರ್ ತಂತ್ರ; ಮಂಡ್ಯದಲ್ಲಿ ತೀವ್ರಗೊಂಡ ಆಪರೇಷನ್ ಕಸರತ್ತು

ಹಳೆ ಮೈಸೂರಲ್ಲಿ ಜೆಡಿಎಸ್​ ದುರ್ಬಲಗೊಳಿಸಲು ಕಾಂಗ್ರೆಸ್ ಮುಂದಾಗಿದ್ದು, ಮಾಜಿ ಶಾಸಕ ಪುಟ್ಟರಾಜ್ ಸೇರಿ‌‌‌ದಂತೆ ಹಲವರನ್ನು ಸಂಪರ್ಕಿಸಲು ಚೆಲುವರಾಯಸ್ವಾಮಿ ಯತ್ನಿಸುತ್ತಿದ್ದಾರೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಸಂಪೂರ್ಣ ಕುಗ್ಗಿಸಲು ಕಾಂಗ್ರೆಸ್ ತಂತ್ರ ಹೂಡುತ್ತಿದೆ.

ಬಿಜೆಪಿಯ ಯಾವ ಶಾಸಕರೂ ಕಾಂಗ್ರೆಸ್​ಗೆ ಹೋಗಲ್ಲ; ರಾಘವೇಂದ್ರ

ಬಿಜೆಪಿಯ ಯಾವ ಶಾಸಕರೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ. ಅಪಪ್ರಚಾರ ಮೂಲಕ ವಿಪಕ್ಷವನ್ನು ದುರ್ಬಲಗೊಳಿಸುವ ಸಂಚು ಹೂಡಲಾಗುತ್ತಿದೆ. ಅವರ (ಕಾಂಗ್ರೆಸ್) ದೌರ್ಬಲ್ಯ ಮುಚ್ಚಿಕೊಳ್ಳಲು ಅಪಪ್ರಚಾರ ಮಾಡ್ತಿದ್ದಾರೆ. ಕುಮಾರ್​ ಬಂಗಾರಪ್ಪ ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಎಂದು ರಾಘವೇಂದ್ರ ಹೇಳಿದ್ದಾರೆ.

ರಾಜಕೀಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Mon, 28 August 23

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್