ನಮ್ಮ ತಲೆಯಲ್ಲಿ ಜೈ ಶ್ರೀರಾಮ್ ಘೋಷಣೆ ಹೇರಲಾಗುತ್ತಿದೆ: ಮಹೇಂದ್ರ ತಮ್ಮಣ್ಣವರ್, ಕಾಂಗ್ರೆಸ್ ಶಾಸಕ

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ನಂತರ ಜೈ ಶ್ರೀರಾಮ್ ಘೋಷಣೆಗಳು ಕೇಳಿಬರುತ್ತಿವೆ. ಜೈ ಶ್ರೀರಾಮ್ ನಾವು ಕೂಡ ಹೇಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಘೋಷಣೆಗಳನ್ನು ಕೂಗಿಸಿದ್ದರು. ಇದೀಗ, ಜೈ ಶ್ರೀರಾಮ್ ಘೋಷಣೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್, ಜೈ ಶ್ರೀರಾಮ್ ಪದಕ್ಕೆ ಇತಿಹಾಸವಿಲ್ಲ. ಜೈ ಶ್ರೀರಾಮ್ ಘೋಷಣೆಯನ್ನು ನಮ್ಮ ತಲೆಗೆ ತೂರಲಾಗುತ್ತಿದೆ ಎಂದಿದ್ದಾರೆ.

ನಮ್ಮ ತಲೆಯಲ್ಲಿ ಜೈ ಶ್ರೀರಾಮ್ ಘೋಷಣೆ ಹೇರಲಾಗುತ್ತಿದೆ: ಮಹೇಂದ್ರ ತಮ್ಮಣ್ಣವರ್, ಕಾಂಗ್ರೆಸ್ ಶಾಸಕ
ನಮ್ಮ ತಲೆಯಲ್ಲಿ ಇಂದು ಜೈ ಶ್ರೀರಾಮ್ ಘೋಷಣೆ ತುರುಕುತ್ತಿದ್ದಾರೆ ಎಂದ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್
Follow us
Sahadev Mane
| Updated By: Rakesh Nayak Manchi

Updated on:Jan 27, 2024 | 9:21 PM

ಬೆಳಗಾವಿ, ಜ.27: ಜೈ ಶ್ರೀರಾಮ್ ಪದಕ್ಕೆ ಇತಿಹಾಸವಿಲ್ಲ. ಜೈ ಶ್ರೀರಾಮ್ ಘೋಷಣೆಯನ್ನು ನಮ್ಮ ತಲೆಗೆ ಹೇರಲಾಗುತ್ತಿದೆ ಎಂದು ಕುಡಚಿ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್ (Mahendra Tammannavar) ಹೇಳಿದರು. ಬೆಳಗಾವಿ (Belagavi) ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮೊದಲು ಹರ ಹರ ಮಹದೇವ ಎಂದು ಹೇಳುತ್ತಿದ್ದರು. ರಾಯಣ್ಣ ಕೂಡ ಹರ ಹರ ಮಹದೇವ ಎಂದು ಹೇಳಿ ಗಲ್ಲಿಗೇರಿದ್ದರು ಎಂದರು.

ನಾವು ಇಂದು ಯಾವ ಸಂಸ್ಕೃತಿಯಲ್ಲಿ ಬದುಕುತ್ತಿದ್ದೇವೆ ಅಂದರೆ ಹರ ಹರ ಮಹದೇವ ಎಂಬ ಘೋಷಣೆ ನಮ್ಮ ತಲೆಯಲ್ಲಿ ಇಲ್ಲ. ನಮ್ಮ ತಲೆಯಲ್ಲಿ ಇಂದು ಜೈ ಶ್ರೀರಾಮ್ ಘೋಷಣೆ ಹೇರುತ್ತಿದ್ದಾರೆ. ಹರ ಹರ ಮಹದೇವ ಘೋಷಣೆಗೆ ಇತಿಹಾಸವಿದೆ. ಜೈ ಶ್ರೀರಾಮ್ ಘೋಷಣೆಗೆ ಇತಿಹಾಸವಿದೆಯೇ ಹೇಳಿ ನೋಡೋಣ ಎಂದರು.

ಇದನ್ನೂ ಓದಿ: ಹೃದಯದಲ್ಲಿ ಟಿಪ್ಪು ಇಟ್ಟುಕೊಂಡು ಜೈ ಶ್ರೀರಾಮ್​ ಅಂತಾರೆ: ವರ್ಕೌಟ್ ಆಗಲ್ಲ ಎಂದ ಆರ್​​ ಅಶೋಕ್

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ನಂತರ ಜೈ ಶ್ರೀರಾಮ್ ಘೋಷಣೆಗಳನ್ನು ಹಿಂದೂ ಕಾರ್ಯಕರ್ತರು, ಬಿಜೆಪಿಗರಲ್ಲಿ ಮಾತ್ರವಲ್ಲದೆ, ಕಾಂಗ್ರೆಸ್​ನಲ್ಲೂ ಮೊಳಗಲು ಆರಂಭವಾಗಿದೆ. ಜೈ ಶ್ರೀರಾಮ್ ನಾವು ಕೂಡ ಹೇಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಘೋಷಣೆಗಳನ್ನು ಕೂಗಿಸಿದ್ದರು.

ಜೈ ಶ್ರೀರಾಮ್ ಅಂತ ನಾವೂ ಹೇಳೋಲ್ವಾ? ಜೈ ಶ್ರೀರಾಮ್ ಎಂಬುದು ಒಬ್ಬರ ಸ್ಲೋಗನ್ ಅಲ್ಲ, ನಾನೂ ಹೇಳುತ್ತೇನೆ. ಕೆಲವರು ಜೈ ಶ್ರೀರಾಮ್ ಸ್ಲೋಗನ್ ತಮ್ಮ‌ ಸ್ವತ್ತು ಅಂದುಕೊಂಡಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ಹೇಳುತ್ತಾ ತಾವು ಸಹ ಜೈ ಶ್ರೀರಾಮ್​ ಎಂದು ಕೂಗಿದ್ದರು. ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ರಾಮ ಸೀತ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಘೋಷಣೆ ಕೂಗಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 pm, Sat, 27 January 24

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು