AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವೂ ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್​ ಬಿಜೆಪಿ ಆಸ್ತಿಯಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾತನಾಡಿದ್ದು, ನಾವೂ ಶ್ರೀರಾಮನ ಭಕ್ತರೆ. ನಾವು ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್​ ಬಿಜೆಪಿ ಆಸ್ತಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ಎಂಟು ತಿಂಗಳಿನಲ್ಲೇ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಈ ಬಗ್ಗೆ ಚರ್ಚೆ ಮಾಡಲು ಬಿಜೆಪಿ ಒಂದೇ ವೇದಿಕೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ. 

ನಾವೂ ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್​ ಬಿಜೆಪಿ ಆಸ್ತಿಯಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಸಿಎಂ ಸಿದ್ದರಾಮಯ್ಯ
Gopal AS
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 24, 2024 | 4:12 PM

Share

ಮೈಸೂರು, ಜನವರಿ 24: ನಾವೂ ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್​ ಬಿಜೆಪಿ ಆಸ್ತಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ನಾವೂ ಶ್ರೀರಾಮನ ಘೋಷಣೆ ಕೂಗುತ್ತೇವೆ. ನನ್ನ ಹೆಸರಲ್ಲೇ ರಾಮ ಇದ್ದಾನೆ, ತಂದೆ ಹೆಸರಲ್ಲೂ ರಾಮ ಇದ್ದಾನೆ. ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಹೇಳುವಂತೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ ಮನವಿ ಮಾಡಿದ್ದೆ. ಜಾತ್ಯತೀತ ಪಕ್ಷವು ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿದೆ. ಅಧಿಕಾರಕ್ಕೆ ಬಂದು ಎಂಟು ತಿಂಗಳಿನಲ್ಲೇ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಈ ಬಗ್ಗೆ ಚರ್ಚೆ ಮಾಡಲು ಬಿಜೆಪಿ ಒಂದೇ ವೇದಿಕೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ನಾನು ರೈತನ ಮಗನಲ್ವಾ: ಸಿದ್ದರಾಮಯ್ಯ ಪ್ರಶ್ನೆ

ಡಿ. 23ಕ್ಕೆ ಬರ ಪರಿಹಾರ ಸಭೆ ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಜ. 24 ಆದರೂ ಮೀಟಿಂಗ್ ಮಾಡಿಲ್ಲ. ಬಿಜೆಪಿಗೆ ರೈತರ ಪರ ಕಾಳಜಿ ಇಲ್ಲ. ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದೇ ಮಾತನಾಡಿದ್ದು.

ಇದನ್ನೂ ಓದಿ: ಬಿಜೆಪಿಗೆ ವಾಪಸ್ ಆಗುವಂತೆ ಜಗದೀಶ್ ಶೆಟ್ಟರ್​ಗೆ ಬಂಪರ್ ಆಫರ್: ಏನದು ಆಫರ್? ಇದಕ್ಕೆ ಮಾಜಿ ಸಿಎಂ ಓಕೆ ಅಂತಾರಾ?

ಕೇಂದ್ರಕ್ಕೆ ಬರ ಪರಿಹಾರಕ್ಕೆ ಮನವಿ‌ ನೀಡಿ ಮೂರ್ನಾಲ್ಕು ತಿಂಗಳಾಯಿತು. ಪ್ರತಾಪ್ ಸಿಂಹ ನಾಚಿಗೆ ಮಾನ ಮರ್ಯಾದೆ ಇಲ್ಲ. ಪ್ರಧಾನಿಯನ್ನು ಭೇಟಿ ಮಾಡಿದ್ದಾಗಲೂ ನೆನಪಿಸಿದ್ದೆ. ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ರೈತರ ಮಗನಂತೆ. ಹಾಗಾದರೆ ನಾನು ಯಾರ ಮಗ? ರೈತನ ಮಗನಲ್ವಾ ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲ್, ಗೊಬ್ಬರ ಬೆಲೆ ಜಾಸ್ತಿ: ಇದು ಬಿಜೆಪಿ ಕೊಡುಗೆ

ಮಹಾತ್ಮ ಗಾಂಧಿ ಹೇಳುವ ರಾಮನನ್ನು ನಾವು ಪೂಜಿಸುವುದು. ಪಿತೃ ವಾಕ್ಯ ಪರಿಪಾಲನೆ ಮಾಡಿದ ರಾಮನನ್ನು ಪೂಜಿಸುತ್ತೇವೆ. ರಾಮನ ಬಗ್ಗೆ ಮಾತನಾಡದಿದ್ದರೆ ಹಿಂದೂ ವಿರೋಧಿ ಅಂತಾರೆ. ರಾಮನ ಬಗ್ಗೆ ಮಾತನಾಡಿದರೆ ಈಗ ಬುದ್ಧಿ ಬಂತಲ್ಲಾ ಅಂತಾರೆ. ಮಿಸ್ಟರ್​​ ನರೇಂದ್ರ ಮೋದಿ ನಮ್ಮ ಜನ ದಡ್ಡರಲ್ಲ. ಗ್ಯಾಸ್ ಬೆಲೆ‌, ಪೆಟ್ರೋಲ್ ಬೆಲೆ, ಗೊಬ್ಬರ ಬೆಲೆ ಜಾಸ್ತಿಯಾಗಿದೆ. ಇದು ದೇಶಕ್ಕೆ ಬಿಜೆಪಿ ಕೊಡುಗೆಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.