ಬೆಂಗಳೂರು, ಸೆ.20: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದಿರುವುದು ಕರ್ನಾಟಕದ ಜನತೆಗೆ ಒಂದು ರೀತಿಯ ಶಾಪ ಎಂದು ಬಿಜಿಪಿ(BJP)ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದೆ. ‘ಅಭಿವೃದ್ಧಿ ಎಂಬುದನ್ನು ಸಂಪೂರ್ಣ ಕಡೆಗಣಿಸಿ, ವರ್ಗಾವಣೆ ದಂಧೆಯೊಂದನ್ನೇ ಚಾಚೂ ತಪ್ಪದಂತೆ ನಡೆಸುತ್ತಿರುವುದೇ ಇದಕ್ಕೆ ಉದಾಹರಣೆ ಎಂದು ಕೈ ಸರ್ಕಾರವನ್ನು ಉಲ್ಲೇಖಿಸಿದೆ. ಪರಸ್ಪರ ಕಾಲೆಳೆದುಕೊಳ್ಳುತ್ತಾ, ಸದಾ ಒಳಜಗಳದಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ನಾಲ್ಕು ತಿಂಗಳು ತುಂಬಿದೆ. ಆದರೆ, ಇದುವರೆಗೂ ನಾಲ್ಕು ಗುದ್ದಲಿ ಪೂಜೆ ಕೂಡ ನೆರವೇರಿಸಿಲ್ಲದಿರುವುದು ಅಭಿವೃದ್ಧಿ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿ ಎಂದಿದೆ.
ಜೊತೆಗೆ ಇವೆಲ್ಲದರ ನಡುವೆ ನಿಜಕ್ಕೂ ಸಿಎಂ ಸಿದ್ದರಾಮಯ್ಯರವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಿದ್ದರೆ, ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಬೇಕೆಂದಿದ್ದರೆ, ತಾವು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ಐವರು ಡಿಸಿಎಂ ಗಳಿಗೆ ಅವಕಾಶ ನೀಡಬೇಕಿತ್ತು. ಆದರೆ, ತಮ್ಮ ಕುರ್ಚಿಗೆ ಕಂಟಕ ಬಂದಾಗ ಮಾತ್ರ ಡಿಸಿಎಂ ಎಂಬ ಗುರಾಣಿ ಪ್ರಯೋಗಿಸುವುದು ಹಾಗೂ ಸಮುದಾಯಗಳ ಹೆಸರಿನಲ್ಲಿ ಮೂವರು ಡಿಸಿಎಂ ಎಂಬ ಹೆಸರು ತೇಲಿ ಬಿಡುವುದು ಆ ಸಮುದಾಯಗಳಿಗೆ ಮಾಡುವ ದ್ರೋಹ ಎಂದಿದೆ.
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕರ್ನಾಟಕದ ಜನತೆಗೆ ಒಂದು ರೀತಿಯ ಶಾಪ. ಅಭಿವೃದ್ಧಿ ಎಂಬುದನ್ನು ಸಂಪೂರ್ಣ ಕಡೆಗಣಿಸಿ, ವರ್ಗಾವಣೆ ದಂಧೆಯೊಂದನ್ನೇ ಚಾಚೂ ತಪ್ಪದಂತೆ ನಡೆಸುತ್ತಿರುವುದೇ ಇದಕ್ಕೆ ಸಾಕ್ಷಿ.
ಪರಸ್ಪರ ಕಾಲೆಳೆದುಕೊಳ್ಳುತ್ತಾ, ಸದಾ ಒಳಜಗಳದಲ್ಲಿ ನಿರತವಾಗಿರುವ “ಕೈ” ಸರ್ಕಾರಕ್ಕೆ ಈಗ ನಾಲ್ಕು ತಿಂಗಳು…
— BJP Karnataka (@BJP4Karnataka) September 20, 2023
ಇದನ್ನೂ ಓದಿ:Prajwal Revanna: ಲೋಕಸಭೆಯ ಮೂರನೇ ಕಿರಿಯ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ರಾಜಕೀಯ ಜೀವನ
ಇನ್ನು ಇದರ ಬೆನ್ನಲ್ಲೇ ‘ರಾಜ್ಯದ ಸಮುದಾಯಗಳ ಮೂಗಿಗೆ ಡಿಸಿಎಂ ಎಂಬ ತುಪ್ಪ ಸವರುವ ಬದಲು, ಕಷ್ಟದಲ್ಲಿರುವ ಜನತೆಯ ಕಂಬನಿಯನ್ನು ಒರೆಸುವ ಕೆಲಸವನ್ನು ಸರ್ಕಾರ ಅತ್ಯಂತ ಜರೂರತ್ತಿನಿಂದ ಮಾಡಬೇಕಿದೆ. ರಾಜ್ಯದ ಬೊಕ್ಕಸ ಸಂಪೂರ್ಣ ಖಾಲಿಯಾಗಿದ್ದು, ರಾಜ್ಯ ಬಹುತೇಕ ದಿವಾಳಿಯಾಗುವ ಮುನ್ನ, ಕೈ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸ್ಪಷ್ಟ ಬಹುಮತವನ್ನು ಪಡೆದಿರುವ ಸರ್ಕಾರ ಜನ ಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸಬೇಕಿತ್ತು. ಆದರೆ, ಸಿದ್ದರಾಮಯ್ಯ ಅವರ ನೇತೃತ್ವದ ಈ ಎಟಿಎಂ ಸರ್ಕಾರ (ಎಂದು ಉಲ್ಲೇಖಿಸುವ ಮೂಲಕ) ಜನ ಹಣೆ ಹಣೆ ಚಚ್ಚಿಕೊಳ್ಳುವಂತಹ ಆಡಳಿತ ನೀಡುತ್ತಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Wed, 20 September 23