ಜೆಡಿಎಸ್-ಬಿಜೆಪಿ ಮೈತ್ರಿ: ನಮ್ಮ ಪಕ್ಷದ ನಿಲುವುಗಳೇ ಬೇರೆ ಎಂದ ಹೆಚ್​ಡಿ ಕುಮಾರಸ್ವಾಮಿ

ಮೈತ್ರಿ ಬಗ್ಗೆ ಚರ್ಚೆ ಆಗಿದ್ದರೂ ಮೈತ್ರಿಯ ವಿಷಯವೇ ಬೇರೆ, ನಮ್ಮ ಪಕ್ಷದ ನಿಲುವುಗಳೇ ಬೇರೆ. ಪಕ್ಷದ ನಿಲುವಿನಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಮುಸ್ಲಿಂ ಸಮಾಜಕ್ಕೆ ನಮ್ಮಷ್ಟು ಕೊಡುಗೆ ಬೇರೆ ಯಾರೂ ಕೊಟ್ಟಿಲ್ಲ. ಜೆಡಿಎಸ್ ಪಕ್ಷ​ ನೀಡಿರುವಷ್ಟು ಕೊಡುಗೆ ಬೇರೆ ಪಕ್ಷಗಳು ನೀಡಿಲ್ಲ.

ಜೆಡಿಎಸ್-ಬಿಜೆಪಿ ಮೈತ್ರಿ: ನಮ್ಮ ಪಕ್ಷದ ನಿಲುವುಗಳೇ ಬೇರೆ ಎಂದ ಹೆಚ್​ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 20, 2023 | 5:22 PM

ರಾಮನಗರ, ಸೆ.20: ರಾಜ್ಯದ ರಾಜಕೀಯ ವಲಯದಲ್ಲಿ ಇದೀಗ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ ಮುನ್ನೆಲೆಯಲ್ಲಿದೆ. ಈ ಕುರಿತು ‘ಮೈತ್ರಿ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ರಾಮನಗರ(Ramanagara) ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು ‘ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಸಂಬಂಧಿಸಿದಂತೆ ಸಭೆ ಇದೆ. ಸಭೆಯಲ್ಲಿ ಚರ್ಚಿಸಿದ ನಂತರ ಇದರ ವಾಸ್ತವಾಂಶ ಹೊರಗೆ ಬರುತ್ತದೆ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಬಲಾಢ್ಯ ಆಗಿರಬೇಕು

ಇನ್ನು ಸೀಟು ಹೊಂದಾಣಿಕೆ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ಕಳೆದ‌ 2 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಕೆಟ್ಟದಾಗಿ ನಡೆದುಕೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಬಲಾಢ್ಯ ಆಗಿರಬೇಕು. ಆ ನಿಟ್ಟಿನಲ್ಲಿ ನಾಳೆ(ಸೆ.21) ಚರ್ಚೆ ನಡೆಯಲಿದೆ ಎಂದಿದ್ದಾರೆ. ಇದೇ ವೇಳೆ ಮೈತ್ರಿ ಆದರೆ ಜಾತ್ಯಾತೀತ ಪದಕ್ಕೆ ಅರ್ಥ ಏನು ಎನ್ನುವ ವಿಚಾರ ‘ನನ್ನ ಪಕ್ಷದ ಬಗ್ಗೆ ಮಾತ್ರ ಕೇಳಿ, ಬೇರೆ ಪಕ್ಷಗಳ ಬಗ್ಗೆ ಕೇಳಬೇಡಿ. ನಮ್ಮ ಪಕ್ಷ ಎಲ್ಲಾ ಸಮಾಜಗಳನ್ನು ಗೌರವಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿಯೊಂದಿಗೆ ಮೈತ್ರಿ ಆಗೋದು ನಿಶ್ಚಿತ, ದೆಹಲಿಗೆ ಹೋಗಿ ಆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಿದ್ದೇನೆ: ಹೆಚ್ ಡಿ ಕುಮಾರಸ್ವಾಮಿ

ಪಕ್ಷದ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ

‘ಮೈತ್ರಿ ಬಗ್ಗೆ ಚರ್ಚೆ ಆಗಿದ್ದರೂ ಮೈತ್ರಿಯ ವಿಷಯವೇ ಬೇರೆ, ನಮ್ಮ ಪಕ್ಷದ ನಿಲುವುಗಳೇ ಬೇರೆ. ಪಕ್ಷದ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ. ಮುಸ್ಲಿಂ ಸಮಾಜಕ್ಕೆ ನಮ್ಮಷ್ಟು ಕೊಡುಗೆ ಬೇರೆ ಯಾರೂ ಕೊಟ್ಟಿಲ್ಲ. ಜೆಡಿಎಸ್ ಪಕ್ಷ​ ನೀಡಿರುವಷ್ಟು ಕೊಡುಗೆ ಬೇರೆ ಪಕ್ಷಗಳು ನೀಡಿಲ್ಲ. ಆದರೆ, ಅವರು ನಮಗೆ ಯಾವ ರೀತಿಯಾಗಿ ಟ್ರೀಟ್ ಮಾಡಿದ್ದಾರೆ ಅದನ್ನು ನಾನು ಪ್ರಶ್ನೆ ಮಾಡಬಹುದಲ್ವಾ ಎಂದರು. ನಾಡಿನ ನೆಮ್ಮದಿಗಾಗಿ ರಾಜಿಯಾಗದೇ, ಹಿತಕಾಯಬೇಕಾಗಿದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಕೂಡ ನನಗೆ ಗೊತ್ತಿದೆ. ಬಿಜೆಪಿಗೆ ಹೋದವರ ಜೊತೆ ತಮ್ಮ ಸಂಬಂಧ ಬೆಳೆಸಿಕೊಂಡಿದ್ದಾರೆ. ಹೀಗೆ ಸುಮಾರು 50 ವರ್ಷದ ರಾಜಕಾರಣ ನಡೆದಿದೆ ಎಂದು ಹೆಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ