ಬೆಂಗಳೂರು, ಅ.21: 2023ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದರೂ ಜೆಡಿಎಸ್ (JDS) ಕಚೇರಿಗೆ ಡಿಪಿಐಆರ್‌ನಿಂದ ಸಿಬ್ಬಂದಿ ಪಡೆಯಲಾಗಿದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ. ಹೀಗಾಗಿ ವಿಧಾನಸೌಧದಲ್ಲಿ ಜೆಡಿಎಸ್ ಕಚೇರಿ ಖಾಲಿ ಮಾಡಿಸುವಂತೆ ಕಾಂಗ್ರೆಸ್, ಸ್ಪೀಕರ್ ಯುಟಿ ಖಾದರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿಯಾ ಶರ್ಮಾ ಅವರನ್ನು ಒತ್ತಾಯಿಸಿದೆ.
ಜೆಡಿಎಸ್ ಪಕ್ಷ ವಿಧಾನಸೌಧದಲ್ಲಿ ಕಚೇರಿ ಪಡೆಯಲು ಅನರ್ಹವಾಗಿದೆ. ವಿಧಾನಸೌಧದಲ್ಲಿ ಜೆಡಿಎಸ್‌ಗೆ ನೀಡಿರುವ 140, 141 ಸಂಖ್ಯೆಯ ಕೊಠಡಿಗಳನ್ನು ಹಿಂಪಡೆಯಿರಿ ಎಂದು ಕಾಂಗ್ರೆಸ್ ವಕ್ತಾರ ಸಿ.ಎಸ್.ಸಿದ್ದರಾಜು ಅವರು ವಿಧಾನಸಭೆ ಸಭಾಪತಿ ಹಾಗೂ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಮೇ 10 ರಂದು ನಡೆಸಲಾಗಿತ್ತು. ಮೇ 13 ರಂದು ಫಲಿಯತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 135 ಸ್ಥಾನಗಳನ್ನು ಪಡೆದು ಸರ್ಕಾರ ರಚನೆ ಮಾಡಿತು. ಇತ್ತ ನಾಲ್ಕು ವರ್ಷ ಅಧಿಕಾರ ನಡೆಸಿದ್ದ ಬಿಜೆಪಿ 65 ಹಾಗೂ ಜೆಡಿಎಸ್ 19 ಸ್ಥಾನಗಳಿಗೆ ಕುಸಿಯಿತು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ