ಕಾಂಗ್ರೆಸ್​ನಿಂದ ಜಿಲ್ಲಾ ಮಟ್ಟದ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ; ಕಾಂಗ್ರೆಸ್ ವಕ್ತಾರರಾಗಲು ಇಲ್ಲಿದೆ ಅವಕಾಶ

| Updated By: guruganesh bhat

Updated on: Sep 18, 2021 | 2:57 PM

ರಾಷ್ಟ್ರದ ಗಂಭೀರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಭಾಷಣ ಸ್ಪರ್ಧೆಯ ಮೂಲಕ ಆಯ್ಕೆ ನಡೆಯಲಿದೆ. ಆನ್‌ಲೈನ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರ ಹುಟ್ಟುಹಬ್ಬ ನವೆಂಬರ್ 14 ರಂದು ಈಕಾರ್ಯಕ್ರಮ ಮುಕ್ತಾಯವಾಗಲಿದೆ.

ಕಾಂಗ್ರೆಸ್​ನಿಂದ ಜಿಲ್ಲಾ ಮಟ್ಟದ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ; ಕಾಂಗ್ರೆಸ್ ವಕ್ತಾರರಾಗಲು ಇಲ್ಲಿದೆ ಅವಕಾಶ
ಕಾಂಗ್ರೆಸ್ ಬಾವುಟ
Follow us on

ಬೆಂಗಳೂರು: ಭಾರತದಲ್ಲಿ ಯುವ ನಾಯಕತ್ವವನ್ನು ಹುಟ್ಟುಹಾಕಬೇಕಿದೆ. ಹೀಗಾಗಿ ಕಾಂಗ್ರೆಸ್ ಯಾವುದೇ ಶಿಫಾರಸು, ಹಿನ್ನೆಲೆ ಇಲ್ಲದ ಯುವ ಪ್ರತಿಭೆಗಳನ್ನು ಹುಡುಕುತ್ತಿದೆ. ಪ್ರತಿಭಾವಂತರನ್ನು ಹುಡುಕುವುದಕ್ಕಾಗಿ ಯುವ ಭಾರತದ ಧ್ವನಿ ಎಂಬ ಅಭಿಯಾನ ಆರಂಭಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರಿಗೆ ಪಕ್ಷದಲ್ಲಿ ವಕ್ತಾರರ ಸ್ಥಾನಮಾನ ನೀಡಲಾಗುವುದು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಬಿ.ಎಲ್. ಶಂಕರ್ ಮಾಹಿತಿ ನೀಡಿದರು.

ಪ್ರತಿ ಜಿಲ್ಲೆಯಲ್ಲಿ ಐವರನ್ನು ಆಯ್ಕೆ ಮಾಡಲಿದ್ದೇವೆ. ರಾಷ್ಟ್ರದ ಗಂಭೀರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಭಾಷಣ ಮಾಡಿ ಆನ್‌ಲೈನ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹುಟ್ಟುಹಬ್ಬ ನವೆಂಬರ್ 14 ರಂದು ಈಕಾರ್ಯಕ್ರಮ ಮುಕ್ತಾಯವಾಗಲಿದೆ. ಎಂದು ಸಹ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸುರಭಿ‌ ದ್ವಿವೇದಿ, ಮೋದಿ ಸರ್ಕಾರ ಧ್ವನಿಯನ್ನು ಅಡಗಿಸುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರು, ಯುವ ಜನತೆಯ ಧ್ವನಿಯನ್ನು ಅಡಗಿಸಿದೆ. ಹೀಗಾಗಿ ಟ್ಯಾಲೆಂಟ್ ಇರುವವರಿಗಾಗಿ ಹುಡುಕಾಟ ನಡೆಯುತ್ತಿದೆ. ಪ್ರತಿಭಾವಂತರನ್ನು ಕಾಂಗ್ರೆಸ್ ವಕ್ತಾರರನ್ನಾಗಿ ಮಾಡುತ್ತೇವೆ. ಯೂತ್ ಕಾಂಗ್ರೆಸ್‌ಗೆ ಬರುವ ಉತ್ಸಾಹ ಯಾರಿಗಿದೆ ಅಂತಹ ಯಾರೂ ಸಹ ಸ್ಪರ್ಧೆ ಮಾಡಬಹುದು. ಆಯ್ಕೆಯಾದವರಿಗೆ ಪಕ್ಷದಲ್ಲಿ ಅವಕಾಶ ನೀಡಲಾಗುತ್ತದೆ. ಇದೊಂದು ಟ್ಯಾಲೆಂಟ್ ಹಂಟರ್ ಪ್ರೋಗ್ರಾಂ ಎಂದು ತಿಳಿಸಿದರು.

ಇದನ್ನೂ ಓದಿ: 

2014ರಿಂದ 2021ರವರೆಗೆ ಯಾವ ಪಕ್ಷದಿಂದ ಎಷ್ಟು ಜನಪ್ರತಿನಿಧಿಗಳು ಪಕ್ಷಾಂತರ ಮಾಡಿದ್ದಾರೆ?

ಪಂಜಾಬ್​​ ಸಿಎಂ ಅಮರಿಂದರ್​ ಸಿಂಗ್​ ಬಳಿ ರಾಜೀನಾಮೆ?-ಬಿಜೆಪಿ ಹಾದಿಯನ್ನೇ ತುಳಿಯಿತಾ ಕಾಂಗ್ರೆಸ್​ !

(Congress Youth Leader District Level Talent Hunt Program Here is a chance to become a spokesman for Congress)

Published On - 2:55 pm, Sat, 18 September 21