ಕಾಂಗ್ರೆಸ್​ನವರು ಒಂದು ಕುಟುಂಬಕ್ಕೆ ಒಂದು ಟಿಕೆಟ್ ಅಂತಿದ್ದಾರೆ, ಅದಕ್ಕೆ ಬೈಪಾಸ್ ದಾರಿಯನ್ನೂ ಹುಡುಕಿಕೊಂಡಿದ್ದಾರೆ: ಸಿ.ಟಿ.ರವಿ ಹೇಳಿಕೆ

| Updated By: Rakesh Nayak Manchi

Updated on: May 16, 2022 | 5:12 PM

ರಾಜಕೀಯ ಧ್ರುವೀಕರಣ ನಿಂತ ನೀರಲ್ಲ. ಬಿಜೆಪಿಗೆ ಪಕ್ಷಕ್ಕೆ ಸೇರಲು ಇಚ್ಚಿಸುವ ಸಾಕಷ್ಟು ಮಂದಿ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಕಲಬುರಗಿಯಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು.

ಕಾಂಗ್ರೆಸ್​ನವರು ಒಂದು ಕುಟುಂಬಕ್ಕೆ ಒಂದು ಟಿಕೆಟ್ ಅಂತಿದ್ದಾರೆ, ಅದಕ್ಕೆ ಬೈಪಾಸ್ ದಾರಿಯನ್ನೂ ಹುಡುಕಿಕೊಂಡಿದ್ದಾರೆ: ಸಿ.ಟಿ.ರವಿ ಹೇಳಿಕೆ
ಸಾಂದರ್ಭೀಕ ಚಿತ್ರ
Follow us on

ಕಲಬುರಗಿ: ಕಾಂಗ್ರೆಸ್​ನಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಅಂತಿದ್ದಾರೆ, ಅದಕ್ಕೆ ಬೈಪಾಸ್ ದಾರಿಯನ್ನು ಕೂಡಾ ಹುಡುಕಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(C.T.Ravi) ಹೇಳಿದ್ದಾರೆ. ನಿನ್ನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ವಿಚಾರ ಪ್ರಸ್ತಾಪವಾಗಿತ್ತು. ಈ ಬಗ್ಗೆ ಕಲಬುರಗಿ(Kalaburagi) ನಗರದಲ್ಲಿ ವ್ಯಂಗ್ಯವಾಡಿ ಮಾತನಾಡಿದ ಸಿ.ಟಿ.ರವಿ, ಇಂದಿನ ಕಾಂಗ್ರೆಸ್​ನಿಂದ ದೇಶಭಕ್ತಿ, ಪ್ರಾಮಾಣಿಕತೆ ನಿರೀಕ್ಷಿಸಲು ಸಾಧ್ಯವಿಲ್ಲ. ನಮಗೆ ಭಾರತರತ್ನ ಅಂಬೇಡ್ಕರ್ ಸಂವಿಧಾನ ಗೊತ್ತು. ಖರ್ಗೆ ಅವರ ಅಂಬೇಡ್ಕರ್ ಗೊತ್ತಿಲ್ಲ ಎಂದು ಟಾಂಗ್ ಖರ್ಗೆ ಅವರಿಗೆ ಟಾಂಗ್ ಕೊಟ್ಟರು.

ಚುನಾವಣೆ ಹೊಸ್ತಿಲಲ್ಲಿ ಪಕ್ಷಾಂತರಪರ್ವ ಸರ್ವೆಸಾಮಾನ್ಯ. ಅದರಂತೆ, ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಿ.ಟಿ.ರವಿ, ರಾಜಕೀಯ ಧ್ರುವೀಕರಣ ನಿಂತ ನೀರಲ್ಲ. ಬಿಜೆಪಿಗೆ ಪಕ್ಷಕ್ಕೆ ಸೇರಲು ಇಚ್ಚಿಸುವ ಸಾಕಷ್ಟು ಮಂದಿ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಪಕ್ಷದ ಸೇರ್ಪಡೆಗೆ ಸೂಕ್ತ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

ರಾಷ್ಟ್ರಗೀತೆ ಹಾಡುವ ವಿಚಾರ ಚರ್ಚೆ ಆಗಬೇಕಾ?

ಸದ್ಯ ರಾಜ್ಯದ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವ ವಿಚಾರ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಯಾವ ವಿಚಾರದಲ್ಲಿ ಚರ್ಚೆ ನಡೆಯಬಾರದಿತ್ತೋ ಆ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರಗೀತೆ ಹಾಡುವ ವಿಚಾರ ಚರ್ಚೆ ಆಗಬೇಕಾ? ವಿವಾದ ಹುಟ್ಟುಹಾಕುವವರನ್ನು ದೇಶ ಭಕ್ತರೆಂದು ಕರೆಯಬೇಕಾ? ಎಂದು ಪ್ರಶ್ನಿಸಿದರು.

ಕೊಡಗಿನ ಶಾಲಾ ಆವರಣದಲ್ಲಿ ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪ್ರತಿ ವರ್ಷ ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ಕಾರ್ಯಕ್ರಮ ನಡೆಸುತ್ತದೆ. ಪೊಲೀಸ್ ಇಲಾಖೆ ಕೂಡ ತರಬೇತಿ ನೀಡುತ್ತದೆ. ನಾವೇನೂ ಬಾಂಬ್ ಹಾಕುವ ತರಬೇತಿ ಕೊಟ್ಟಿಲ್ಲ. ವಿದ್ಯಾರ್ಥಿಗಳಿಗೆ ಏರ್ ಗನ್ ತರಬೇತಿ ನೀಡುವುದರಲ್ಲಿ ತಪ್ಪೇನಿಲ್ಲ ಎಂದರು.

ಕೊಡಗಿನ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ನಡೆದ ಶೌರ್ಯ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಬಜರಂಗದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ಮತ್ತು ತ್ರಿಶೂಲ ದೀಕ್ಷೆ ನೀಡಲಾಗಿತ್ತು. ಈ ಶೀಬಿರವು ಸುಮಾರು 10 ದಿನಗಳ ಕಾಲ ನಡೆದಿದ್ದು, 119 ಶಿಕ್ಷಣಾರ್ಥಿಗಳು ಸೇರಿದಂತೆ ಒಟ್ಟು 140 ಮಂದಿ ಭಾಗಿಯಾಗಿದ್ದರು.