ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ, ಯತ್ನಾಳ್ ವಿಪಕ್ಷ ನಾಯಕರಾಗುವುದು ಬಹುತೇಕ ತೀರ್ಮಾನವಾಗಿದೆ: ಹೆಚ್.ಡಿ.ದೇವೇಗೌಡ
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಯಾರು? ಹಾಗೂ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಯಾರಾಗಲಿದ್ದಾರೆ ಎಂದು ಹೆಚ್ಡಿ ದೇವೇಗೌಡ ಸುಳಿವು ನೀಡಿದ್ದಾರೆ.
ಬೆಂಗಳೂರು, (ಜುಲೈ 25): ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆಯಿತು. ಆದ್ರೆ, ಇದುವರೆಗೂ ಬಿಜೆಪಿಯಲ್ಲಿ (BJP) ಯಾರು ವಿಪಕ್ಷ ನಾಯಕರಾಗುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಲ್ಲೇ ಇವೆ. ವಿರೋಧ ಪಕ್ಷದ ನಾಯಕ ಅವರು ಆಗುತ್ತಾರೆ. ಇವರು ಆಗುತ್ತಾರೆ ಎನ್ನುವ ಸುದ್ದಿ ಅಷ್ಟೇ ಹರಿದಾಡುತ್ತಿದೆ. ಇದರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆಯಾಗಲಿದೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇವೆಲ್ಲದರ ಮಧ್ಯೆ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (DS supremo HD Devegowda) ಅವರು ವಿರೋಧ ಪಕ್ಷದ ನಾಯಕ ಹಾಗೂ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗುವ ಹೆಸರುಗಳು ಘೋಷಣೆ ಮಾಡಿದ್ದಾರೆ. ಇಂದು (ಜುಲೈ 25) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಸಿ.ಟಿ.ರವಿ (CT Ravi) ಬಿಜೆಪಿ ರಾಜ್ಯ ಘಟಕ ಅಧ್ಯಕ್ಷರಾಗಲಿದ್ದಾರೆ. ಇನ್ನು ವಿಪಕ್ಷ ನಾಯಕರಾಗಿ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಎಂದು ಬಹುತೇಕ ತೀರ್ಮಾನವಾಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಇದನ್ನೂ ಓದಿ: ಸಚಿವರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಶಾಸಕರು: ಶಾಸಕಾಂಗ ಸಭೆ ಬಗ್ಗೆ ಸಿಎಂ, ಡಿಸಿಎಂ ಹೇಳಿದ್ದಿಷ್ಟು
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ ಟಿ ರವಿ ಆಗಲಿದ್ದಾರೆ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ಪಕ್ಷದ ನಾಯಕರಾಗುವುದು ಬಹುತೇಕ ತೀರ್ಮಾನವಾಗಿದೆ ಎಂದು ಹೇಳಿರುವ ದೇವೇಗೌಡ, ನಾವು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಅದರಲ್ಲಿ ಬಿಜೆಪಿ ಜೊತೆ ನಮ್ಮ ಜಂಟಿ ಹೋರಾಟ ಹೇಗೆ ಆಗುತ್ತದೆ ಎಂದು ಹೇಳಿದರು. ಈ ಮೂಲಕ ಬಿಜೆಪಿಯೊಂದಿಗೆ ಮೈತ್ರಿ ಎಲ್ಲ ಎಂದು ಸ್ಪಷ್ಟಪಡಿಸಿದರು.
ಇದರೊಂದಿಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದ್ದ ಅಂತೆ-ಕಂತೆಗಳ ಚರ್ಚೆಗಳಿಗೆ ದೇವೇಗೌಡ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಿಗೆ ತೆರೆ ಎಳೆದಿದ್ದು, ಮುಂದಿನ ಲೋಕಸಭೆ ಚುನಾವಣೆ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗೊ ಸ್ಪರ್ಧೆ ಮಾಡಲಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:25 pm, Tue, 25 July 23