ರಾಷ್ಟ್ರ ಒಡೆಯುವುದರಲ್ಲಿ ಕಾಂಗ್ರೆಸ್​ನವರು ನಿಸ್ಸೀಮರು-ಸಿಟಿ ರವಿ

ಸಂಸದ ಡಿಕೆ ಸುರೇಶ್​ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ್ದು, ಇದು ಹೊಸ ವಿವಾದಕ್ಕೆ ಕಾರಣವಾಗಿದೆ. ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು ‘ದಕ್ಷಿಣ ಭಾರತ ಪತ್ಯೇಕ ರಾಷ್ಟ್ರದ ಕೂಗು ಎತ್ತಿದ್ದರು. ಇದಕ್ಕೆ ಹಲವಾರು ಜನರು ಕಿಡಿಕಾರಿದ್ದು, ರಾಷ್ಟ್ರ ಒಡೆಯುವುದರಲ್ಲಿ ಕಾಂಗ್ರೆಸ್​ನವರು ನಿಸ್ಸೀಮರು ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರ ಒಡೆಯುವುದರಲ್ಲಿ ಕಾಂಗ್ರೆಸ್​ನವರು ನಿಸ್ಸೀಮರು-ಸಿಟಿ ರವಿ
ಸಿಟಿ ರವಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 01, 2024 | 4:19 PM

ಬಳ್ಳಾರಿ, ಫೆ.01: ದಕ್ಷಿಣ ಭಾರತದ ಕೂಗು ಎತ್ತಬೇಕಾಗುತ್ತದೆ ಎಂಬ ಸಂಸದ ಡಿಕೆ ಸುರೇಶ್(DK Suresh)​ ಹೇಳಿಕೆಗೆ ಮಾಜಿ ಶಾಸಕ ಸಿಟಿ ರವಿ (CT Ravi) ಕಿಡಿ ಕಾರಿದ್ದಾರೆ. ಈ ಕುರಿತು ಬಳ್ಳಾರಿ (Ballari)ಯಲ್ಲಿ ಮಾತನಾಡಿದ ಅವರು ‘ರಾಷ್ಟ್ರ ಒಡೆಯುವುದರಲ್ಲಿ ಕಾಂಗ್ರೆಸ್​ನವರು ನಿಸ್ಸೀಮರು, ಒಡೆಯುವ ಮನಸ್ಥಿತಿಯ ರಾಜಕೀಯದಿಂದ ಅವರು ಹೊರಬರಲಿ. ಸಂಸದ ಡಿಕೆ ಸುರೇಶ್ ವಾದಕ್ಕೆ ರಾಹುಲ್ ಗಾಂಧಿ ಉತ್ತರ ಕೊಡಲಿ. ಜೊತೆಗೆ ಉತ್ತರ ಭಾರತದ ಮತಗಳು ಬೇಡವೆಂದು ಕಾಂಗ್ರೆಸ್ ಹೇಳಿಕೆ ನೀಡಲಿ ಎಂದರು.

1947ರಲ್ಲಿ ದೇಶ ವಿಭಜನೆ ಮಾಡಲು ಸಹಿ ಮಾಡಿದ್ದೇ ಕಾಂಗ್ರೆಸ್ ಪಕ್ಷ

ಕಾಂಗ್ರೆಸ್​ನವರು ಸುಳ್ಳನ್ನು ಸತ್ಯ ಮಾಡಲು ಹೊರಟ್ಟಿದ್ದಾರೆ. 1947ರಲ್ಲಿ ದೇಶ ವಿಭಜನೆ ಮಾಡಲು ಸಹಿ ಮಾಡಿದ್ದೇ ಕಾಂಗ್ರೆಸ್ ಪಕ್ಷ. ನೀತಿ ಆಯೋಗ ಬಂದ ಮೇಲೆ ಜನಸಂಖ್ಯೆ ಅನುಗುಣವಾಗಿ ಅನುದಾನ ನೀಡಲಾಗುತ್ತಿದೆ. ಉತ್ತರ ಭಾರತ, ಭಾರತದ ಭಾಗವಲ್ಲವೇ?, ಬೆಂಗಳೂರಿನ ಆದಾಯ ಇಡೀ ರಾಜ್ಯಕ್ಕೆ ಹಂಚುವುದಿಲ್ಲವೇ? ಅವರ ಪ್ರಕಾರ ಬೆಂಗಳೂರನ್ನು ಪ್ರತ್ಯೇಕ ರಾಜ್ಯ ಮಾಡಬೇಕೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ರಾಷ್ಟ್ರ ಧ್ವಜಕ್ಕೆ ಅಪಮಾನ: ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ಎಸ್ಪಿಗೆ ದೂರು

ಇದೇ ವೇಳೆ ಬಜೆಟ್​ ವಿಚಾರ ‘ದೂರದೃಷ್ಟಿ ಇರುವ ಜನಸಾಮಾನ್ಯರ ಬಜೆಟ್ ಇದಾಗಿದೆ. ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲವೆಂದು ಮೊದಲೇ ಹೇಳಲಾಗಿತ್ತು. ತಾತ್ಕಾಲಿಕ ಅನುಕೂಲ ಮಾಡಿ ವೋಟ್ ಗಿಟ್ಟಿಸುವ ಬಜೆಟ್ ಅಲ್ಲ, ಬಡವರ ಪರ ಇರುವ ಬಜೆಟ್ ಆಗಿದೆ. ಅದರಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.

ರಾಜ್ಯದ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ