ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅಮಾನತು ಕೋರಿ ಸಲ್ಲಿಸಿದ ಅರ್ಜಿ ವಜಾ ಮಾಡಿದ ದೆಹಲಿ ಹೈಕೋರ್ಟ್
ಜೈನ್ ಮೇಲೆ ಗಂಭೀರ ಆರೋಪವಿದ್ದು, ಅವರು ಕಠಿಣ ಶಿಕ್ಷೆಗೆ ಗುರಿಯಾಗಬೇಕಿದ್ದಾರೆ. ಇದೀಗ ಅವರು ಬಂಧನದಲ್ಲಿದ್ದರೂ ಸಚಿವರಿಗೆ ಇರುವ ಎಲ್ಲ ಅನುಕೂಲಗಳನ್ನು ಪಡೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಹಣ ಅವ್ಯವಹಾರ ಪ್ರಕರಣದಲ್ಲಿ (money laundering case) ಜಾರಿ ನಿರ್ದೇಶನಾಲಯದಿಂದ ತನಿಖೆಗೊಳಪಟ್ಟು ಈಗ ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ (Satyendra Jain) ಅವರನ್ನು ಅಮಾನತುಗೊಳಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ನಲ್ಲಿ (Delhi High Court) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಗುರುವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರ ವಿಭಾಗೀಯ ಪೀಠವ ಡಾ. ನಂದ್ ಕಿಶೋರ್ ಗಾರ್ಗ್ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದ್ದಾರೆ. ಗಾರ್ಗ್ ಅವರು ದೆಹಲಿ ತ್ರಿನಗರ್ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದರು. ಸೆಂಟ್ರಲ್ ಸಿವಿಲ್ ಸರ್ವೀಸಸ್ (ಕ್ಲಾಸಿಫಿಕೇಷನ್ , ಕಂಟ್ರೋಲ್ ಆಂಡ್ ಅಪೀಲ್) ನಿಯಮಗಳು 1965 ನಿಯಮ 10ರ ಅಡಿಯಲ್ಲಿ ಸಾರ್ವಜನಿಕ ಸೇವಕರನ್ನು ಬಂಧಿಸಿದರೆ ಅವರ ರಾಜೀನಾಮೆ ಅಥವಾ ಅಮಾನತಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಆದಾಗ್ಯೂ, ಅರ್ಜಿ ವಜಾಗೊಳಿಸಿದ ನ್ಯಾಯಾಧೀಶರು ನಮಗೆ ನಮ್ಮ ಮಿತಿಯ ಬಗ್ಗೆ ಅರಿವಿದೆ. ನಾವು ನಿಯಮ ಮತ್ತು ಅಧಿಸೂಚನೆಗಳನ್ನು ಪಾಲಿಸಬೇಕಿದೆ. ನಾವು ಅದನ್ನು ಮೀರಿ ಹೋಗುವಂತಿಲ್ಲ. ನಾವು ರಾಜಕಾರಣಿಗಳಲ್ಲ ಎಂದು ಹೇಳಿದ್ದಾರೆ.. ಜೈನ್ ಮೇಲೆ ಗಂಭೀರ ಆರೋಪವಿದ್ದು, ಅವರು ಕಠಿಣ ಶಿಕ್ಷೆಗೆ ಗುರಿಯಾಗಬೇಕಿದ್ದಾರೆ. ಇದೀಗ ಅವರು ಬಂಧನದಲ್ಲಿದ್ದರೂ ಸಚಿವರಿಗೆ ಇರುವ ಎಲ್ಲ ಅನುಕೂಲಗಳನ್ನು ಪಡೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
Published On - 1:34 pm, Thu, 7 July 22