AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಾಣೆಯಲ್ಲಿ ಶಿಂಧೆ ಬಣ ಸೇರಿದ 66 ಮಾಜಿ ಕೌನ್ಸಿಲರ್​​ಗಳು; ಠಾಕ್ರೆ ಬಣದಲ್ಲಿ ಉಳಿದಿರುವುದು ಒಬ್ಬರೇ

ಕೌನ್ಸಿಲರ್​​ಗಳ ಅಧಿಕಾರವಧಿ ಮುಗಿದಿದ್ದು, ಇನ್ನು ಚುನಾವಣೆ ಬಾಕಿ ಇದೆ. ಮುಂಬೈಯ ಬೃಹನ್ಮುಂಬೈ ಕಾರ್ಪೊರೇಷನ್ ನಂತರ ಥಾಣೆ ಮಹಾರಾಷ್ಟ್ರದಲ್ಲಿನ ಪ್ರತಿಷ್ಠಿತ ನಾಗರಿಕ ಸಂಸ್ಥೆಯಾಗಿದೆ

ಥಾಣೆಯಲ್ಲಿ ಶಿಂಧೆ ಬಣ ಸೇರಿದ 66 ಮಾಜಿ ಕೌನ್ಸಿಲರ್​​ಗಳು; ಠಾಕ್ರೆ ಬಣದಲ್ಲಿ ಉಳಿದಿರುವುದು ಒಬ್ಬರೇ
ಏಕನಾಥ್ ಶಿಂಧೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jul 07, 2022 | 8:25 PM

Share

ಮುಂಬೈ: ಶಿವಸೇನಾದಲ್ಲಿನ ಬಂಡಾಯ ಇದೀಗ ಉದ್ಧವ್ ಠಾಕ್ರೆಗೆ(Uddhav Thackeray) ಮತ್ತಷ್ಟು ಹೊಡೆತ ನೀಡಿದೆ. ಥಾಣೆಯಲ್ಲಿ (Thane) 67 ಮಾಜಿ ಕೌನ್ಸಿಲರ್​​ಗಳ ಪೈಕಿ 66 ಮಂದಿ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಬಣಕ್ಕೆ ಸೇರಿದ್ದಾರೆ. ನಿನ್ನೆ ಸಂಜೆ ಮಾಜಿ ಕೌನ್ಸಿಲರ್​​ಗಳು ಶಿಂಧೆ ಅವರನ್ನು ಭೇಟಿ ಮಾಡಿದ್ದರು. ಕೌನ್ಸಿಲರ್​​ಗಳ ಅಧಿಕಾರವಧಿ ಮುಗಿದಿದ್ದು, ಇನ್ನು ಚುನಾವಣೆ ಬಾಕಿ ಇದೆ. ಮುಂಬೈಯ ಬೃಹನ್ಮುಂಬೈ ಕಾರ್ಪೊರೇಷನ್ ನಂತರ ಥಾಣೆ ಮಹಾರಾಷ್ಟ್ರದಲ್ಲಿನ ಪ್ರತಿಷ್ಠಿತ ನಾಗರಿಕ ಸಂಸ್ಥೆಯಾಗಿದೆ. ಮುಂಬೈಯಲ್ಲಿ ಶಿವಸೇನಾ ಅಧಿಪತ್ಯ ಹೊಂದಿದ್ದು , ಥಾಣೆಯಲ್ಲಿ ಶಿಂಧೆ ಪ್ರಭಾವಿಯಾಗಿದ್ದಾರೆ.ಏಕನಾಥ್ ಶಿಂಧೆ ಬಂಡಾಯದಿಂದಾಗಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿರುವ ಉದ್ಧವ್ ಠಾಕ್ರೆ ಅವರಿಗೆ ಮಾಜಿ ಕೌನ್ಸಿಲರ್​​ಗಳ ಈ ನಡೆ ನಿರೀಕ್ಷಿತವೇ ಆಗಿದೆ. ಶಿಂಧೆ ಬಣ ಈಗ ಬಾಳಾಸಾಹೇಬ್ ಠಾಕ್ರೆ ಅವರು ಸ್ಥಾಪಿಸಿದ ಶಿವಸೇನಾ ಮೇಲೆ ಸಂಪೂರ್ಣ ಅಧಿಕಾರ ಪಡೆಯಲು ಹವಣಿಸುತ್ತಿದೆ. ತಾವು ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುನ್ನಡೆಸುತ್ತಿದ್ದೇವೆ ಎಂದು ಶಿಂಧೆ ಬಣ ಹೇಳುತ್ತಿದೆ. ಅದೇ ವೇಳೆ ಪಕ್ಷದ ಮೂರನೇ ಎರಡರಷ್ಟು ಶಾಸಕರನ್ನು ತಮ್ಮ ಬಣ ಹೊಂದಿರುವುದರಿಂದ ನಾವೇ ನಿಜವಾದ ಶಿವಸೇನಾ ಎಂದು ಶಿಂಧೆ ಬಣ ವಿಧಾನಸಭೆ ಮತ್ತು ಸುಪ್ರೀಂಕೋರ್ಟ್ ನಲ್ಲಿ ಹೇಳಿದೆ.

ಶಿವಸೇನಾದ 55ಶಾಸಕರ ಪೈಕಿ 44 ಮಂದಿ ಈಗ ಶಿಂಧೆ ಬಣದಲ್ಲಿದ್ದಾರೆ. ಇದೀಗ ಸ್ಥಳೀಯ ನಾಯಕರು, ಕಾರ್ಯಕರ್ತರು ಮತ್ತು ಕಾರ್ಪೊರೇಟರ್ ಗಳನ್ನು ತಮ್ಮ ಬಣಕ್ಕೆ ಸೇರಿಸಿ ಅದನ್ನು ಮತ್ತಷ್ಟು ಬಲಗೊಳಿಸಲು ಶಿಂಧೆ ಪ್ರಯತ್ನಿಸುತ್ತಿದ್ದಾರೆ.

Published On - 8:17 pm, Thu, 7 July 22