ನಾನೇನು ಸನ್ಯಾಸಿಯಲ್ಲ: ಪರೋಕ್ಷವಾಗಿ ಅಧಿಕಾರದ ಆಕಾಂಕ್ಷೆ ಹೊರಹಾಕಿದ ಸಿಟಿ ರವಿ

| Updated By: Rakesh Nayak Manchi

Updated on: Nov 11, 2023 | 2:56 PM

ಬೆಂಗಳೂರು ನಗರದ ಖಾಸಗಿ ಹೊಟೇಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ, ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದರು. ಅಲ್ಲದೆ, ತಾನು ಯಾವುದೇ ಹುದ್ದೆಯನ್ನು ಕೇಳಿಲ್ಲ. ಹೀಗಾಗಿ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ನಾನೇನು ಸನ್ಯಾಸಿಯಲ್ಲ: ಪರೋಕ್ಷವಾಗಿ ಅಧಿಕಾರದ ಆಕಾಂಕ್ಷೆ ಹೊರಹಾಕಿದ ಸಿಟಿ ರವಿ
ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ
Follow us on

ಬೆಂಗಳೂರು, ನ.11: ನಾನೇನು ಸನ್ಯಾಸಿಯಲ್ಲ ಎಂದು ಹೇಳುವ ಮೂಲಕ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ (C.T.Ravi) ಅವರು ಪರೋಕ್ಷವಾಗಿ ಅಧಿಕಾರದ ಆಕಾಂಕ್ಷೆ ಹೊರಹಾಕಿದ್ದಾರೆ. ನಗರದ ಖಾಸಗಿ ಹೊಟೇಲ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2024ರ ನಂತರ ವಯ್ಯಕ್ತಿಕ ರಾಜಕೀಯದ ಬಗ್ಗೆ ನೊಡೋಣ ಎಂದು ಸಿಟಿ ರವಿ ಹೇಳಿದರು.

ನಾನು ಸಂಭ್ರಮದಲ್ಲಿದ್ದಾಗ ಯಾರನ್ನ ಮನಸ್ಸು ನೋಯಿಸುವುದಿಲ್ಲ. ನಾನು ಒಂದೇ ರೀತಿ ಯೋಚನೆ ಮಾಡುತ್ತೇನೆ. ಚೆಸ್ ಇಬ್ಬರು ಪ್ರತಿಸ್ಪರ್ಧಿಗಳ ನಡುವೆ ನಡೆಯುವುದು. ರಾಜಕಾರಣ ಫುಟ್ ಬಾಲ್ ರೀತಿ, ಎಲ್ಲರೂ ಟೀಮ್ ವರ್ಕ್ ಮಾಡಬೇಕು ಎಂದರು.

ಸಾಮಾನ್ಯ ಕಾರ್ಯಕರ್ತನಿಂದ ರಾಷ್ಟ್ರೀಯ ಅಧ್ಯಕ್ಷನವರೆಗೆ ಕೆಲಸ ಮಾಡಿದರೆ ಗೆಲ್ಲುವುದು ತಂಡ. ನಾಯಕರು ಯೋಗ್ಯ ಮಾರ್ಗದರ್ಶನ ಮಾಡುವುದು ಸಮನ್ವಯ ಮಾಡುವುದು ನಾಯಕರ ಕೆಲಸ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ವಿಪಕ್ಷನಾಯಕರಾಗಿ ಕೆಲಸ ಮಾಡಿದ್ದಾರೆ. ತಂಡದ ಕೆಲಸವನ್ನ ನಿರ್ವಹಿಸುತ್ತಾರೆ ಅನ್ನೊ ವಿಶ್ವಾಸವಿದೆ ಎಂದು ಹೇಳಿದ ಅವರು, ನನ್ನಂತಹ ಕಾರ್ಯಕರ್ತರ ಪ್ರಶ್ನೆಗಳನ್ನ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸೂಕ್ತ ಅಲ್ಲ ಎಂದರು.

ಇದನ್ನೂ ಓದಿ: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟದ ಹಿಂದೆ ನೂರೆಂಟು ಲೆಕ್ಕಾಚಾರ: ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಹೈಕಮಾಂಡ್ ಸ್ಕೆಚ್!

ತಾನು ಯಾವುದೇ ಹುದ್ದೆಯನ್ನು ಕೇಳಿಲ್ಲ. ಹೀಗಾಗಿ ಯಾವುದೇ ಅಸಮಾಧಾನ ಇಲ್ಲ. ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಅವರಿಗೆ ಈಗಾಗಲೇ ಅಭಿನಂದನೆ ಸಲ್ಲಿಸಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅದು ಅಧಿಕಾರ ಅಲ್ಲ, ಅದು ಜವಾಬ್ದಾರಿ. ನಾನು ಯಾವುದೇ ಹುದ್ದೆ ಆಕಾಂಕ್ಷೆ ಅಲ್ಲ ಅಂತಾ ಮೊದಲೇ ಹೇಳಿದ್ದೆ. ಪಕ್ಷದಲ್ಲಿ ನಾನು ಮೊದಲು ಬೂತ್ ಕಾರ್ಯಕರ್ತನಾಗಿದ್ದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಜವಾಬ್ದಾರಿ ಕೊಟ್ಟಿದೆ. ರಾಜ್ಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಯಾವುದೇ ಹುದ್ದೆ ಕೇಳೇ ಇಲ್ಲಾ ಅಂದಾಗ ಅಸಮಾಧಾನ ಬರುವುದಿಲ್ಲ. ಸೈದ್ಧಾಂತಿಕ ರಾಜಕೀಯ ಮಾಡಲು ನಾವು ರಾಜಕೀಯಕ್ಕೆ ಬಂದಿದ್ದೇವೆ ಎಂದರು.

ಕುಟುಂಬ ರಾಜಕೀಯ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಟಿ ರವಿ, ನಾನು ಮಾತನಾಡಿದರೆ ಅದು ತುಪ್ಪು ಅರ್ಥವಾಗುತ್ತದೆ. ಎಲ್ಲೆಲ್ಲಿಗೋ ಕನೆಕ್ಟ್​ ಆಗುತ್ತದೆ. ಹೀಗಾಗಿ ಉತ್ತರಿಸಲ್ಲ. ನಾನು ಪಕ್ಷದ ಕಟ್ಟಾಳು. ಪಕ್ಷದ ನಿರ್ಣಯದ ವಿರುದ್ಧ ಮಾತನಾಡಿಲ್ಲ. ನಿರ್ಣಯ ಸರಿಯಿಲ್ಲ ಎಂದು ಅನಿಸಿದರೆ ವೇದಿಕೆ ಇದೆ. ಆದರೆ ಪಕ್ಷ ನಿರ್ಣಯ ತೆಗೆದುಕೊಂಡಿದ್ದರಿಂದ ಯಾವುದೇ ಅಸಮದಾನ ಇಲ್ಲ ಎಂದರು.

ಎಲ್ಲಾ ಜಾಗದಲ್ಲಿ ಸತ್ಯವನ್ನ ಹೇಳಿದರೆ ಅಪಾರ್ಥ ಬರುತ್ತದೆ. ಮೋದಿಯವರನ್ನ ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ವಿಶ್ವಗುರು ಭಾರತ ಆಗಬೇಕು ಅನ್ನೋ ಸಂಕಲ್ಪ ಮಾಡಿದ್ದೇವೆ. ಅದಕ್ಕೆ ಯಾವುದೇ ಕೊರತೆ ಆಗಬಾರದು. ಸಾಮಾನ್ಯ ಕಾರ್ಯಕರ್ತನಾಗಿ ಮತ್ತೆ ಮೋದಿ ಅಧಿಕಾರಕ್ಕೆ ತರೋದಕ್ಕೆ ಕೆಲಸ ಮಾಡುತ್ತೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ