ಆರ್​ ಅಶೋಕ್ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಮೇಜರ್ ಸರ್ಜರಿ, ಕಾಂಗ್ರೆಸ್​ನತ್ತ ಮುಖ ಮಾಡಿದ ಘಟಾನುಘಟಿ ಮುಖಂಡರು

| Updated By: ರಮೇಶ್ ಬಿ. ಜವಳಗೇರಾ

Updated on: Sep 12, 2023 | 12:03 PM

ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಮೇಜರ್ ಸರ್ಜರಿಗೆ ಕೈಹಾಕಿದ್ದು, ಆರ್​ ಅಶೋಕ್ ಗೆಲುವಿಗೆ ರೂವಾರಿಗಳಾಗಿದ್ದವರೇ ಆಪರೇಷನ್ ಹಸ್ತಕ್ಕೆ ತುತ್ತಾಗಿದ್ದಾರೆ. ಬಿಜೆಪಿ ಶಾಸಕ ಆರ್​. ಅಶೋಕ್ ಜೊತೆ ಈಗಾಗಲೇ ಸಂಬಂಧ ಕಳೆದುಕೊಂಡಿದ್ದ 5ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್​ಗಳು ಕಾಂಗ್ರೆಸ್ ಸೇರ್ಪಡೆಗೆ ಸನ್ನದ್ಧರಾಗಿದ್ದು, ಅಧಿಕೃತವಾಗಿ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಲು ಮುಹೂರ್ತ ಫಿಕ್ಸ್ ಆಗಿದೆ. ಹಾಗಾದ್ರೆ, ಯಾರೆಲ್ಲಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಪಟ್ಟಿ ಇಲ್ಲಿದೆ.

ಆರ್​ ಅಶೋಕ್ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಮೇಜರ್ ಸರ್ಜರಿ, ಕಾಂಗ್ರೆಸ್​ನತ್ತ ಮುಖ ಮಾಡಿದ ಘಟಾನುಘಟಿ ಮುಖಂಡರು
ಡಿಕೆ ಶಿವಕುಮಾರ್-ಡಿಕೆ ಸುರೇಶ್
Follow us on

ಬೆಂಗಳೂರು, (ಸೆಪ್ಟೆಂಬರ್ 12): ಏನಿಲ್ಲ ಏನಿಲ್ಲ ಎನ್ನುತ್ತಲ್ಲೇ ಡಿಕೆ ಶಿವಕುಮಾರ್​ (DK Shivakumar) ಸದ್ದಿಲ್ಲದೇ ಕಾಂಗ್ರೆಸ್ ಆಪರೇಷನ್​​ ಹಸ್ತವನ್ನು (Congress Operation Hasta) ಶುರು ಮಾಡಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಬಿಜೆಪಿ(BJP) ಶಾಸಕರಾದ ಎಸ್​ಟಿ ಸೋಮಶೇಖರ್, ಮುನಿರತ್ನ ಹಾಗೂ ಬೈರತಿ ಬಸವರಾಜ್ ಬೆಂಬಲಿಗರನ್ನು ಕಾಂಗ್ರೆಸ್​​​ಗೆ ಸೆಳೆದಿದ್ದಾರೆ. ಇದೀಗ ಆರ್.ಅಶೋಕ್ ಅವರ ಪದ್ಮನಾಭನಗರ (padmanabhanagar)ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಮೇಜರ್ ಸರ್ಜರಿಗೆ ಕೈಹಾಕಿದ್ದಾರೆ. ಹೌದು… ಮುಂಬರುವ ಲೋಕಸಭಾ ಹಾಗೂ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು  ಡಿಕೆ ಬ್ರದರ್ಸ್​ ನಡೆಸಿರುವ ಆಪರೇಷನ್ ಹಸ್ತ ಬಹುತೇಕ ಸಕ್ಸಸ್ ಆಗಿದ್ದು, 5ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್​ಗಳು ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಇದೇ ಸೆಪ್ಟೆಂಬರ್ 15ರಂದು  ಶುಕ್ರವಾರ ಬೆಳಿಗ್ಗೆ 9 ಕ್ಕೆ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್​ ಮುಖಂಡರ ಕಾಂಗ್ರೆಸ್​ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ವಿಧಾನಸಭೆ ಚುನಾವಣೆಯಲ್ಲಿ ಆರ್ ಅಶೋಕ್ ಗೆಲುವನ ಹಿಂದಿನ ರೂವಾರಿಗಳೇ ಕಾಂಗ್ರೆಸ್​ ಸೇರುತ್ತಿರುವುದು ಬಿಜೆಪಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್ ​ಡಿ ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸಿ, ಆಶೀರ್ವಾದ ಬೇಡಿದ ಸಂಸದ ಪ್ರತಾಪ್ ಸಿಂಹ

ಯಾರೆಲ್ಲಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ?

1. ಎಲ್. ಶ್ರೀನಿವಾಸ್- ಮಾಜಿ ಉಪ ಮಹಾಪೌರರು ಮತ್ತು ಮಾಜಿ ಪಾಲಿಕೆ ಸದಸ್ಯರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು
2. ಆಂಜಿನಪ್ಪ – ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಬೆಂಗಳೂರು ದಕ್ಷಿಣ ಕ್ಷೇತ್ರ ಹಾಗೂ ಪದ್ಮನಾಭ ನಗರ ಮುಖಂಡರು
3. ಶೋಭ ಆಂಜಿನಪ್ಪ-ಮಾಜಿ ಬಿಬಿಎಂಪಿ ಸದಸ್ಯರು ಪದ್ಮನಾಭನಗರ ವಾರ್ಡ್
4.ಹೆಚ್. ನಾರಾಯಣ್- ಮಾಜಿ ಬಿಬಿಎಂಪಿ ಸದಸ್ಯರು ಹೊಸಕೆರೆಹಳ್ಳಿ ವಾರ್ಡ್ ಮತ್ತು ಮಾಜಿ ಅಧ್ಯಕ್ಷರು ಆರೋಗ್ಯ ಸ್ಥಾಯಿ ಸಮಿತಿ ಬಿಬಿಎಂಪಿ
5. ವೆಂಕಟಸ್ವಾಮಿ ನಾಯ್ಡು- ಮಾಜಿ ಪಾಲಿಕೆ ಸದಸ್ಯರು, ಚಿಕ್ಕಲ್ಲಸಂದ್ರ ವಾರ್ಡ್
6. ಹೆಚ್. ಸುರೇಶ್- ಮಾಜಿ ಪಾಲಿಕೆ ಸದಸ್ಯರು, ಕುಮಾರಸ್ವಾಮಿ ಬಡಾವಣೆ ವಾರ್ಡ್
7. ಶ್ರೀಮತಿ. ಲಕ್ಷ್ಮಿ ಸುರೇಶ್- ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್, ಬೆಂಗಳೂರು ನಗರ
8.  ರಂಗರಾಮೇಗೌಡ್ರು (ಬಿ.ಆರ್. ರಾಮು) ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ ಬಿಜೆಪಿ ಘಟಕ
9. ಪ್ರಸಾದ್ ಬಾಬು ಅಲಿಯಾಸ್ ಕಬಡ್ಡಿ ಬಾಬು- ಜಿಡಿಎಸ್ ಮುಖಂಡ, ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರು,
10 ಪವನ್-ಬಿಜೆಪಿ ಮುಖಂಡ
11 ಸುಪ್ರಿಯ ಶೇಖರ್- ಚಿಕ್ಕಕಲ್ಲಸಂದ್ರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯರು.
12, ಲಕ್ಷ್ಮಿ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ