ಸಂಕಷ್ಟದಲ್ಲಿ ಪ್ರಜ್ವಲ್ ರೇವಣ್ಣ: ಸುಪ್ರೀಂಕೋರ್ಟ್ನಲ್ಲೂ ತಕ್ಷಣ ರಿಲೀಫ್ ಸಿಗುವುದು ಕಷ್ಟ, ಕಾರಣ ಇಲ್ಲಿದೆ!
Prajwal Revanna Election Disqualification Case: ಅದ್ಯಾಕೋ ದಳಪತಿಗಳಿಗೆ ಟೈಮ್ ಸರಿ ಇಲ್ಲ ಅನ್ಸುತ್ತೆ.ಒಂದೆಡೆ ಪಕ್ಷ ಸಂಘಟನೆ ಮಾಡಿ, ಪಕ್ಷವನ್ನ ಉಳಿಸಿಕೊಳ್ಳುವುದಕ್ಕೆ ದೊಡ್ಡಗೌಡರಾದಿಯಾಗಿ ಎಲ್ಲರು ಕಸರತ್ತು ನಡೆಸಿದ್ದಾರೆ. ಮತ್ತೊಂದಡೆ ಇದ್ದ ಒಂದೇ ಒಂದು ಸಂಸತ್ ಸ್ಥಾನವೂ ಕೈತಪ್ಪಿ ಹೋಗಿದೆ. ಕಾನೂನು ಹೋರಾಟದ ಮೂಲಕ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಲು ಪ್ರಜ್ವಲ್ ರೇವಣ್ಣ ಮಾಡುತ್ತಿರುವ ಪ್ರಯತ್ನಕ್ಕೂ ದೊಡ್ಡ ಹಿನ್ನೆಡೆಯಾಗಿದೆ. ಅಷ್ಟಕ್ಕೂ ಪ್ರಜ್ವಲ್ ಅರ್ಜಿ ವಜಾ ಆಗಿದ್ದೇಕೆ? ಅವರ ಮುಂದಿನ ನಡೆ ಏನು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಸೆಪ್ಟೆಂಬರ್ 12): ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಯಾನೀಯವಾಗಿ ಸೋಲು ಕಂಡ ದಳಪತಿಗಳಿಗೆ ಸಾಲು ಸಾಲು ಹಿನ್ನಡೆ ಎದುರಾಗುತ್ತಿವೆ. ಜೆಡಿಎಸ್ ಪಕ್ಷ ಹೊಂದಿದ್ದ ರಾಜ್ಯದ ಏಕೈಕ ಸಂಸತ್ ಸ್ಥಾನವೂ ಕೈತಪ್ಪಿ ಹೋಗುವಂತಾಗಿದೆ. ಪ್ರಜ್ವಲ್ ರೇವಣ್ಣ(Prajwal Revanna) ಚುನಾವಣೆ ವೇಳೆ, ತಮ್ಮ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರ ಮುಚ್ಟಿಟ್ಟಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣರ ಆಯ್ಕೆಯನ್ನೇ ಹೈಕೋರ್ಟ್ (Karnataka High Court) ಅಸಿಂಧು ಎಂದು ತೀರ್ಪು ನೀಡಿದೆ. ಕೋರ್ಟ್ ತೀರ್ಪಿನಿಂದ ಕಂಗೆಟ್ಟಿರುವ ಪ್ರಜ್ವಲ್ ತಮ್ಮ ವಿರುದ್ಧ ನೀಡಿರುವ ತೀರ್ಪನ್ನ 30 ದಿನ, ಅಂದ್ರೆ ಸುಪ್ರಿಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವವರೆಗೆ ಅಮಾನತಿನಲ್ಲಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೇ ಹೈಕೋರ್ಟ್ ವಜಾ ಮಾಡಿ. ಮತ್ತೊಂದು ಶಾಕ್ ನೀಡಿದೆ. ಹೀಗಾಗಿ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ನಲ್ಲಿ (Supreme Court) ಕಾನೂನು ಹೋರಾಟ ಮಾಡುವುದು ಅನಿವಾರ್ಯತೆಯಾಗಿದೆ.
ಶಿಕ್ಷೆ ಅಮಾನತಿನಲ್ಲಿಡಲು ಕೋರಿದ್ದ ಅರ್ಜಿ ತಿರಸ್ಕರ ಬಳಿಕ ಪ್ರಜ್ವಲ್ ರೇವಣ್ಣ ಸುಪ್ರೀಂಕೋರ್ಟ್ನಲ್ಲಿ ಕಾನೂನು ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ಹೈಕೋರ್ಟ್ ತೀರ್ಪಿಗೆ ತಡೆ ಕೋರಿ ಅರ್ಜಿ ಸಲ್ಲಿಸಬೇಕಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಸುಪ್ರೀಂಕೋರ್ಟ್ ಮೊರೆ ಹೋಗಲು ಸಕಲ ತಯಾರಿ ನಡೆಸಿದ್ದಾರೆ. ಹೌದು…ಹೈಕೋರ್ಟ್ ತೀರ್ಪಿನ ಬಳಿಕ ಬೆಂಗಳೂರಿನಲ್ಲೇ ಠಿಕಾಣಿ ಹೂಡಿರುವ ಪ್ರಜ್ವಲ್ ರೇವಣ್ಣ, ಇಂದು(ಸೆಪ್ಟೆಂಬರ್ 12) ಮಾಜಿ ಪ್ರದಾನಿ ದೇವೇಗೌಡ, ತಂದೆ ರೇವಣ್ಣ ಜೊತೆ ಚರ್ಚೆ ನಡೆಸಲಿದ್ದಾರೆ. ಬಳಿಕ ವಕೀಲರ ಜೊತೆಗೆ ಮೇಲ್ಮನವಿ ಸಲ್ಲಿಸವ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ದೆಹಲಿಗೆ ತೆರಳಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಅಸಿಂಧು ಆದೇಶಕ್ಕೆ ತಡೆ ಇಲ್ಲ: ಸಂಸದ ಪ್ರಜ್ವಲ್ ರೇವಣ್ಣ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ತಕ್ಷಣ ರಿಲೀಫ್ ಸಿಗುವುದು ಕಷ್ಟ ಸಾಧ್ಯ
ಇನ್ನು ಪ್ರಜ್ವಲ್ ರೇವಣ್ಣ ಪಾಲಿಗೆ ಹೈಕೋರ್ಟ್ ಬಾಗಿಲು ಮುಚ್ಚಿದಂತಾಗಿದ್ದು, ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಿದೆ. ಆದ್ರೆ, ಅಲ್ಲೂ ಪ್ರಜ್ವಲ್ ರೇವಣ್ಣ ತಡೆಯಾಜ್ಞೆ ಅರ್ಜಿಗೆ ತಕ್ಷಣ ರಿಲೀಫ್ ಸಿಗುವುದು ಕಷ್ಟ ಸಾಧ್ಯ.ಯಾಕಂದರೆ ದೂರುದಾರ ದೇವರಾಜೇಗೌಡ, ಕೇವಿಯಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ದೂರುದಾರರಿಗೆ ನೋಟೀಸ್ ನೀಡಿ ಅವರಿಂದ ತಕರಾರು ಅರ್ಜಿ ಬಳಿಕವೇ ಡೆಯಾಜ್ಞೆ ಬಗ್ಗೆ ನಿರ್ದಾರ ಮಾಡುವ ಸಾಧ್ಯತೆ ಇದೆ. ಇದರಿಂದ ಪ್ರಜ್ವಲ್ ರೇವಣ್ಣ ವಿರುದ್ಧದ ತೀರ್ಪಿಗೆ ತಡೆ ಸಿಗದ ಸ್ಥಿತಿ ತಲೆದೋರಿದೆ.
ಹೈಕೋರ್ಟ್ನಲ್ಲಿ ಪ್ರಜ್ವಲ್ ಅರ್ಜಿ ವಜಾ ಆಗಿದ್ದೇಕೆ?
ಅಷ್ಟಕ್ಕೂ ಪ್ರಜ್ವಲ್ ರೇವಣ್ಣ ಅರ್ಜಿ ವಜಾ ಆಗಿದ್ದು ಏಕೆ ಅನ್ನೋದನ್ನ ನೋಡೋದಾದರೆ, ಕಾನೂನಿನ ಪ್ರಕಾರ ಈ ಅರ್ಜಿಯನ್ನು ತೀರ್ಪು ಕೊಟ್ಟ ದಿನವೇ ಸಲ್ಲಿಕೆ ಮಾಡಬೇಕು. ಆದ್ರೆ ತಾಂತ್ರಿಕ ಕಾರಣದ ನೆಪ ಹೇಳಿ ಪ್ರಜ್ವಲ್ ರೇವಣ್ಣ ಪರ ವಕೀಲರು ನಾಲ್ಕು ದಿನಗಳ ಬಳಿಕ ಅರ್ಜಿ ಸಲ್ಲಿಸಿದ್ದರು, ಆದ್ರೆ ನಿಯಮ ಪಾಳಿಸದ ಕಾರಣ ಅರ್ಜಿ ವಜಾ ಆಗಿದೆ.
ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣ ಸದಸ್ಯತ್ವ ಸುಪ್ರೀಂ ಕೋರ್ಟ್ನಲ್ಲಿ ಮುಂದೇನಾಗುತ್ತೆ ಎನ್ನುವ ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ