ಆರ್​ ಅಶೋಕ್ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಮೇಜರ್ ಸರ್ಜರಿ, ಕಾಂಗ್ರೆಸ್​ನತ್ತ ಮುಖ ಮಾಡಿದ ಘಟಾನುಘಟಿ ಮುಖಂಡರು

ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಮೇಜರ್ ಸರ್ಜರಿಗೆ ಕೈಹಾಕಿದ್ದು, ಆರ್​ ಅಶೋಕ್ ಗೆಲುವಿಗೆ ರೂವಾರಿಗಳಾಗಿದ್ದವರೇ ಆಪರೇಷನ್ ಹಸ್ತಕ್ಕೆ ತುತ್ತಾಗಿದ್ದಾರೆ. ಬಿಜೆಪಿ ಶಾಸಕ ಆರ್​. ಅಶೋಕ್ ಜೊತೆ ಈಗಾಗಲೇ ಸಂಬಂಧ ಕಳೆದುಕೊಂಡಿದ್ದ 5ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್​ಗಳು ಕಾಂಗ್ರೆಸ್ ಸೇರ್ಪಡೆಗೆ ಸನ್ನದ್ಧರಾಗಿದ್ದು, ಅಧಿಕೃತವಾಗಿ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಲು ಮುಹೂರ್ತ ಫಿಕ್ಸ್ ಆಗಿದೆ. ಹಾಗಾದ್ರೆ, ಯಾರೆಲ್ಲಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಪಟ್ಟಿ ಇಲ್ಲಿದೆ.

ಆರ್​ ಅಶೋಕ್ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಮೇಜರ್ ಸರ್ಜರಿ, ಕಾಂಗ್ರೆಸ್​ನತ್ತ ಮುಖ ಮಾಡಿದ ಘಟಾನುಘಟಿ ಮುಖಂಡರು
ಡಿಕೆ ಶಿವಕುಮಾರ್-ಡಿಕೆ ಸುರೇಶ್
Follow us
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ

Updated on: Sep 12, 2023 | 12:03 PM

ಬೆಂಗಳೂರು, (ಸೆಪ್ಟೆಂಬರ್ 12): ಏನಿಲ್ಲ ಏನಿಲ್ಲ ಎನ್ನುತ್ತಲ್ಲೇ ಡಿಕೆ ಶಿವಕುಮಾರ್​ (DK Shivakumar) ಸದ್ದಿಲ್ಲದೇ ಕಾಂಗ್ರೆಸ್ ಆಪರೇಷನ್​​ ಹಸ್ತವನ್ನು (Congress Operation Hasta) ಶುರು ಮಾಡಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಬಿಜೆಪಿ(BJP) ಶಾಸಕರಾದ ಎಸ್​ಟಿ ಸೋಮಶೇಖರ್, ಮುನಿರತ್ನ ಹಾಗೂ ಬೈರತಿ ಬಸವರಾಜ್ ಬೆಂಬಲಿಗರನ್ನು ಕಾಂಗ್ರೆಸ್​​​ಗೆ ಸೆಳೆದಿದ್ದಾರೆ. ಇದೀಗ ಆರ್.ಅಶೋಕ್ ಅವರ ಪದ್ಮನಾಭನಗರ (padmanabhanagar)ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಮೇಜರ್ ಸರ್ಜರಿಗೆ ಕೈಹಾಕಿದ್ದಾರೆ. ಹೌದು… ಮುಂಬರುವ ಲೋಕಸಭಾ ಹಾಗೂ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು  ಡಿಕೆ ಬ್ರದರ್ಸ್​ ನಡೆಸಿರುವ ಆಪರೇಷನ್ ಹಸ್ತ ಬಹುತೇಕ ಸಕ್ಸಸ್ ಆಗಿದ್ದು, 5ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್​ಗಳು ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಇದೇ ಸೆಪ್ಟೆಂಬರ್ 15ರಂದು  ಶುಕ್ರವಾರ ಬೆಳಿಗ್ಗೆ 9 ಕ್ಕೆ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್​ ಮುಖಂಡರ ಕಾಂಗ್ರೆಸ್​ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ವಿಧಾನಸಭೆ ಚುನಾವಣೆಯಲ್ಲಿ ಆರ್ ಅಶೋಕ್ ಗೆಲುವನ ಹಿಂದಿನ ರೂವಾರಿಗಳೇ ಕಾಂಗ್ರೆಸ್​ ಸೇರುತ್ತಿರುವುದು ಬಿಜೆಪಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್ ​ಡಿ ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸಿ, ಆಶೀರ್ವಾದ ಬೇಡಿದ ಸಂಸದ ಪ್ರತಾಪ್ ಸಿಂಹ

ಯಾರೆಲ್ಲಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ?

1. ಎಲ್. ಶ್ರೀನಿವಾಸ್- ಮಾಜಿ ಉಪ ಮಹಾಪೌರರು ಮತ್ತು ಮಾಜಿ ಪಾಲಿಕೆ ಸದಸ್ಯರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು 2. ಆಂಜಿನಪ್ಪ – ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಬೆಂಗಳೂರು ದಕ್ಷಿಣ ಕ್ಷೇತ್ರ ಹಾಗೂ ಪದ್ಮನಾಭ ನಗರ ಮುಖಂಡರು 3. ಶೋಭ ಆಂಜಿನಪ್ಪ-ಮಾಜಿ ಬಿಬಿಎಂಪಿ ಸದಸ್ಯರು ಪದ್ಮನಾಭನಗರ ವಾರ್ಡ್ 4.ಹೆಚ್. ನಾರಾಯಣ್- ಮಾಜಿ ಬಿಬಿಎಂಪಿ ಸದಸ್ಯರು ಹೊಸಕೆರೆಹಳ್ಳಿ ವಾರ್ಡ್ ಮತ್ತು ಮಾಜಿ ಅಧ್ಯಕ್ಷರು ಆರೋಗ್ಯ ಸ್ಥಾಯಿ ಸಮಿತಿ ಬಿಬಿಎಂಪಿ 5. ವೆಂಕಟಸ್ವಾಮಿ ನಾಯ್ಡು- ಮಾಜಿ ಪಾಲಿಕೆ ಸದಸ್ಯರು, ಚಿಕ್ಕಲ್ಲಸಂದ್ರ ವಾರ್ಡ್ 6. ಹೆಚ್. ಸುರೇಶ್- ಮಾಜಿ ಪಾಲಿಕೆ ಸದಸ್ಯರು, ಕುಮಾರಸ್ವಾಮಿ ಬಡಾವಣೆ ವಾರ್ಡ್ 7. ಶ್ರೀಮತಿ. ಲಕ್ಷ್ಮಿ ಸುರೇಶ್- ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್, ಬೆಂಗಳೂರು ನಗರ 8.  ರಂಗರಾಮೇಗೌಡ್ರು (ಬಿ.ಆರ್. ರಾಮು) ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ ಬಿಜೆಪಿ ಘಟಕ 9. ಪ್ರಸಾದ್ ಬಾಬು ಅಲಿಯಾಸ್ ಕಬಡ್ಡಿ ಬಾಬು- ಜಿಡಿಎಸ್ ಮುಖಂಡ, ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರು, 10 ಪವನ್-ಬಿಜೆಪಿ ಮುಖಂಡ 11 ಸುಪ್ರಿಯ ಶೇಖರ್- ಚಿಕ್ಕಕಲ್ಲಸಂದ್ರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯರು. 12, ಲಕ್ಷ್ಮಿ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ