Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಪ್ರಧಾನಿ ಹೆಚ್ ​ಡಿ ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸಿ, ಆಶೀರ್ವಾದ ಬೇಡಿದ ಸಂಸದ ಪ್ರತಾಪ್ ಸಿಂಹ

ಮಾಜಿ ಪ್ರಧಾನಿ ಹೆಚ್ ​ಡಿ ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸಿ, ಆಶೀರ್ವಾದ ಬೇಡಿದ ಸಂಸದ ಪ್ರತಾಪ್ ಸಿಂಹ

ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​

Updated on: Sep 12, 2023 | 10:34 AM

ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರು ಪ್ರಾಬಲ್ಯ ಹೊಂದಿದ್ದಾರೆ. ಈಗಿನಿಂದಲೇ JDS ಮತ ಬ್ಯಾಂಕ್​ಗೆ ಕೈಹಾಕಿದ ಸಂಸದ ಪ್ರತಾಪ್​ ಸಿಂಹ ಜೆಡಿಎಸ್​​​ ನಾಯಕರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಲ್ಲೂ ಮೈಸೂರು ಭಾಗದ ಜೆಡಿಎಸ್​​​ ನಾಯಕರೊಂದಿಗೆ ಉತ್ತಮ ಬಾಂಧವ್ಯ ಗಳಿಸಿದ್ದು, ಸಂಸದ ಪ್ರತಾಪ್​​​ ಸಿಂಹ ತಮ್ಮ ಹ್ಯಾಟ್ರಿಕ್ ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ.

ಮೈಸೂರು: ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ನಡೆದಿರುವ ಹಿನ್ನೆಲೆಯಲ್ಲಿ ಅಲರ್ಟ್ ಆದ ಕೊಡಗು ಮೈಸೂರು ಸಂಸದ ಪ್ರತಾಪ ಸಿಂಹ (Mysore MP Pratap Simha) ಅವರು ಜೆಡಿಎಸ್ ವರಿಷ್ಠ ಎಚ್.ಡಿ, ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸಿ, ಆಶೀರ್ವಾದ (Blessings) ಪಡೆದಿದ್ದಾರೆ. ಮೊನ್ನೆ ಭಾನುವಾರ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಹೆಚ್ ​ಡಿ ದೇವೇಗೌಡರು (JDS Supremo and former Prime Minister HD Deve Gowda) ಭೇಟಿ ನೀಡಿದ್ದರು. ಈ ವೇಳೆ ಹೆಚ್​ಡಿಡಿ, ಜಿಟಿ ದೇವೇಗೌಡ ಅವರುಗಳನ್ನು ಭೇಟಿಯಾಗಿ ಪ್ರತಾಪ್​ ಸಿಂಹ ಮಾತುಕತೆ ನಡೆಸಿದರು. ಪ್ರತಾಪ್ ​ಸಿಂಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ.

ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರು ಪ್ರಾಬಲ್ಯ ಹೊಂದಿದ್ದಾರೆ. ಈಗಿನಿಂದಲೇ JDS ಮತ ಬ್ಯಾಂಕ್​ಗೆ ಕೈಹಾಕಿದ ಸಂಸದ ಪ್ರತಾಪ್​ ಸಿಂಹ ಜೆಡಿಎಸ್​​​ ನಾಯಕರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಲ್ಲೂ ಮೈಸೂರು ಭಾಗದ ಜೆಡಿಎಸ್​​​ ನಾಯಕರೊಂದಿಗೆ ಉತ್ತಮ ಬಾಂಧವ್ಯ ಗಳಿಸಿದ್ದು, ಸಂಸದ ಪ್ರತಾಪ್​​​ ಸಿಂಹ ತಮ್ಮ ಹ್ಯಾಟ್ರಿಕ್ ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ.

ಸಂಸದ ಪ್ರತಾಪ್ ಸಿಂಹ ಒಂದು ಫೋಟೊ/ಪೋಸ್ಟ್​​ ಹಲವು ರಾಜಕೀಯ ಲೆಕ್ಕಾಚಾರ…

ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ JDS ಮತ ಬ್ಯಾಂಕ್​ಗೆ ಸಂಸದ ಪ್ರತಾಪ್​ ಸಿಂಹ ಕೈಹಾಕಿದ್ದು, ಜೆಡಿಎಸ್​​​ ನಾಯಕರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರಾದರೂ ಸಂಸದ ಪ್ರತಾಪ ಸಿಂಹ ಅವರಿಗೆ ದೊಡ್ಡಗೌಡರ ಆಶೀರ್ವಾದ ಸಿಕ್ಕಿದ್ಯಾ ಎಂಬುದು ಸದ್ಯದ ಕುತೂಹಲ.