ಯಾವ ಪುಡಿರೌಡಿಗಿಂತ ಕಡಿಮೆ‌ ಇಲ್ಲ ಸಚಿವ ಡಿ.ಸುಧಾಕರ್ ಗೂಂಡಾವರ್ತನೆ: ಬಿಜೆಪಿ ಟ್ವೀಟ್

ಭೂಕಬಳಿಕೆ, ಹಲ್ಲೆ, ಜಾತಿ ನಿಂದನೆ ಆರೋದ ಅಡಿಯಲ್ಲಿ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ಸುಧಾಕರ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದ ಬಿಜೆಪಿ, ಸುಧಾರಕರ್ ವಿರುದ್ಧ ಮಾತ್ರವಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ ಹೊರಹಾಕಿದೆ. ಯಾವ ಪುಡಿರೌಡಿಗಿಂತ ಕಡಿಮೆ‌ ಇಲ್ಲ ಡಿ.ಸುಧಾಕರ್ ಗೂಂಡಾವರ್ತನೆ ಎಂದು ಹೇಳಿದ ಬಿಜೆಪಿ, ಸಿದ್ದರಾಮಯ್ಯಗೆ ದಲಿತರನ್ನು ಮೂಲೆಗುಂಪು ಮಾಡುವುದು ಕರಗತವಾಗಿದೆ ಎಂದು ಹೇಳಿದೆ.

ಯಾವ ಪುಡಿರೌಡಿಗಿಂತ ಕಡಿಮೆ‌ ಇಲ್ಲ ಸಚಿವ ಡಿ.ಸುಧಾಕರ್ ಗೂಂಡಾವರ್ತನೆ: ಬಿಜೆಪಿ ಟ್ವೀಟ್
ಸಚಿವ ಡಿ.ಸುಧಾಕರ್ ವಿರುದ್ಧ ಬಿಜೆಪಿ ವಾಗ್ದಾಳಿ
Follow us
TV9 Web
| Updated By: Rakesh Nayak Manchi

Updated on: Sep 12, 2023 | 2:39 PM

ಬೆಂಗಳೂರು, ಸೆ.12: ಭೂಕಬಳಿಕೆ, ಹಲ್ಲೆ, ಜಾತಿ ನಿಂದನೆ ಆರೋದ ಅಡಿಯಲ್ಲಿ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ಸುಧಾಕರ್ (D.Sudhakar) ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದ ಬಿಜೆಪಿ (BJP), ಸುಧಾರಕರ್ ವಿರುದ್ಧ ಮಾತ್ರವಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧವೂ ಆಕ್ರೋಶ ಹೊರಹಾಕಿದೆ. ಯಾವ ಪುಡಿರೌಡಿಗಿಂತ ಕಡಿಮೆ‌ ಇಲ್ಲ ಡಿ.ಸುಧಾಕರ್ ಗೂಂಡಾವರ್ತನೆ ಎಂದು ಹೇಳಿದ ಬಿಜೆಪಿ, ಸಿದ್ದರಾಮಯ್ಯಗೆ ದಲಿತರನ್ನು ಮೂಲೆಗುಂಪು ಮಾಡುವುದು ಕರಗತವಾಗಿದೆ ಎಂದು ಹೇಳಿದೆ.

“ಯಾವ ಪುಡಿ ರೌಡಿಗಿಂತಲೂ ಕಡಿಮೆ‌ ಇಲ್ಲ ಸಚಿವ ಡಿ. ಸುಧಾಕರ್ ಅವರ ಗೂಂಡಾವರ್ತನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಾತಿ ನಿಂದಕರು, ಗೂಂಡಾಗಳೇ ತುಂಬಿ ತುಳುಕುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ದಲಿತರನ್ನು ಮೂಲೆಗುಂಪು ಮಾಡುವುದು ಕರಗತವಾದರೆ, ಸಚಿವ ಡಿ. ಸುಧಾಕರ್ ಅವರಿಗೆ ದಲಿತರನ್ನು ಅವಮಾನಿಸಿ ಗೂಂಡಾಗಿರಿ ಮಾಡುವ ಅಹಂ ಸಿದ್ಧಿಸಿದೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಸಚಿವ ಡಿ.ಸುಧಾಕರ್​ ವಿರುದ್ಧ ಎಫ್​ಐಆರ್: ಮಹಿಳೆ ಜತೆ ಗಲಾಟೆ, ಏನಿದು ಪ್ರಕರಣ? ಇಲ್ಲಿದೆ ಡಿಟೇಲ್ಸ್

ಅಲ್ಲದೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಈ ಕೂಡಲೇ ದಲಿತ ವಿರೋಧಿ ಗೂಂಡಾ ಸಚಿವರನ್ನು ಬಂಧಿಸಿ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಟ್ವೀಟ್ ಮೂಲಕ ಆಗ್ರಹಿಸಿದೆ.

ಜಮೀನು ವ್ಯವಹಾರದ ವೇಳೆ ಸಚಿವ ಡಿ.ಸುಧಾಕರ್​ ಬ್ರಾಹ್ಮಣರ ಬಗ್ಗೆ ಮಾತಾಡಿರುವ ವಿಡಿಯೋ ವೈರಲ್​ ಆಗಿದೆ. ಯಲಹಂಕ ಸರ್ವೆ ನಂಬರ್ 108/1 ಜಮೀನು ವ್ಯವಹಾರದಲ್ಲಿ ಬ್ರಾಹ್ಮಣರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ.

… (ಅವಾಚ್ಯ ಪದ) ಮಕ್ಕಳು ಬ್ರಾಹ್ಮಣರಿಗೆ ಯಾಕೆ ಎದುರುತ್ತೇವೆ ಗೊತ್ತಾ ನಾವು? ನೀನು ಹಗ್ಗದಲ್ಲಿ ಕಟ್ಟಿಹಾಕು, ಚೈನಲ್ಲಿ ಕಟ್ಟಿ ಹಾಕು. ಆ … (ಅವಾಚ್ಯ ಪದ) ಮಕ್ಕಳು ಜನಿವಾರದಲ್ಲಿ ನೇಣು ಹಾಕಿಬಿಡುತ್ತಾರೆ. ನಾನು ನಿನ್ನ ಹತ್ತಿರ ಮಾತಾಡುವುದಿಲ್ಲ ಕಣಯ್ಯ ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ