ವಿನಯ ಗುರೂಜಿ ಆಶ್ರಮದಲ್ಲಿ ಡಿಕೆ ಶಿವಕುಮಾರ್​ ಮುಂದಿನ ಸಿಎಂ ಕೂಗು: ಎಂಎಲ್​ಸಿ ಶರವಣ ಬಿಚ್ಚಿಬಿಟ್ಟ 3 ಉಂಗುರಗಳ ಗುಟ್ಟೇನು?

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆನಲ್ಲಿರು ವಿನಯ ಗುರೂಜಿ ಆಶ್ರಮದಲ್ಲಿ ಡಿಕೆ ಶಿವಕುಮಾರ್​ ಮುಂದಿನ ಸಿಎಂ ಕೂಗು ಕೇಳಿಬಂದಿದೆ. ಡಿಕೆ ಶಿವಕುಮಾರ್​ ಸಿಎಂ ಆಗಲು ಆಶೀರ್ವದಿಸಿ ಎಂದು ಶಾಸಕ ತಮ್ಮಯ್ಯ ಮನವಿ ಮಾಡಿದ್ದಾರೆ.

ವಿನಯ ಗುರೂಜಿ ಆಶ್ರಮದಲ್ಲಿ ಡಿಕೆ ಶಿವಕುಮಾರ್​ ಮುಂದಿನ ಸಿಎಂ ಕೂಗು: ಎಂಎಲ್​ಸಿ ಶರವಣ ಬಿಚ್ಚಿಬಿಟ್ಟ 3 ಉಂಗುರಗಳ ಗುಟ್ಟೇನು?
ವಿನಯ ಗುರೂಜಿ, ಡಿ.ಕೆ.ಶಿವಕುಮಾರ್
Follow us
|

Updated on: Jun 17, 2023 | 6:39 PM

ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್​ ನಮಗೆ ಟಿಕೆಟ್​ ನೀಡಿ ಸಹಾಯ ಮಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆಯ ಹಿಂದಿನ ಶಕ್ತಿಯೇ ಡಿ.ಕೆ.ಶಿವಕುಮಾರ್(DK Shivakumar)​​. ನಾವು ಬೇರೇನೂ ಕೇಳಲ್ಲ, ಅವರು ಸಿಎಂ ಆಗಲೆಂದು ಆಶೀರ್ವದಿಸಿ ಎಂದು ಶಾಸಕ ತಮ್ಮಯ್ಯ ಮನವಿ ಮಾಡಿದ್ದಾರೆ. ಆ ಮೂಲಕ ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರು ವಿನಿಯ ಗುರೂಜಿ (Vinay Guruji) ಆಶ್ರಮದಲ್ಲಿ ಡಿಕೆ ಶಿವಕುಮಾರ್​ ಮುಂದಿನ ಸಿಎಂ ಕೂಗು ಕೇಳಿಬಂದಿದೆ. ಜೆಡಿಎಸ್​ ಎಂಎಲ್​ಸಿ ಶರವಣರಿಂದಲೂ ಕೂಡ ಡಿಕೆ ಶಿವಕುಮಾರ್​ ಸಿಎಂ ಜಪ ಮಾಡಿದ್ದಾರೆ.

ಮೂರು ಉಂಗುರ ರಹಸ್ಯ ಏನು?

ಗುರುಗಳು ಮೂರು ಉಂಗುರವನ್ನು ರೆಡಿ ಮಾಡಿ ಇಟ್ಟಿದ್ದರು. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಗೆ ಒಂದು ಉಂಗುರ ಕೊಟ್ರು, ಮತ್ತೊಂದು ಬಿಜೆಪಿ ಹಿರಿಯ ನಾಯಕ ಬಿಎಸ್​​ ಯಡಿಯೂರಪ್ಪಗೆ ಒಂದು ಕೊಟ್ರು. ಮೂರನೇ ಉಂಗುರವನ್ನು ಡಿಕೆ ಶಿವಕುಮಾರ್​​ಗೆ ಕೊಟ್ಟಿದ್ದಾರೆ, ಅದಕ್ಕೆ ನಾನೇ ಸಾಕ್ಷಿ. ಸರ್ಕಾರ ಬರುತ್ತೆ ಅಂತಾ ಡಿ.ಕೆ.ಶಿವಕುಮಾರ್​​ಗೆ ಉಂಗುರ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಬರಲ್ವಾ ಅಂದೆ, ಅದಕ್ಕೆ ಡಿಕೆ ಸರ್ಕಾರ ಎಂದಿದ್ದರು.

ಇದನ್ನೂ ಓದಿ: 9 Years Of PM Modi: ನರೇಂದ್ರ ಮೋದಿ ಪ್ರಧಾನಿಯಾಗಿ 9 ವರ್ಷ ಪೂರೈಕೆ: ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ

ಶರವಣ, ತಮ್ಮಯ್ಯ ಮನವಿಯನ್ನು ಪುರಸ್ಕರಿಸಿದ ವಿನಯ ಗುರೂಜಿ, ಪ್ರಮಾಣ ವಚನದಲ್ಲಿ ಇರಬೇಕು ಎಂದಿದ್ದೆ, ಹಾಗಿಯೇ ಆಯ್ತು. ಶಾಸಕ ತಮ್ಮಯ್ಯ ಬಯಕೆ ಈಡೇರಿಕೆ ದಿನ ಬಹಳ ದೂರವಿಲ್ಲ. ಡಿಕೆ ಶಿವಕುಮಾರ್​​ ಅವರು ಒಳಗೊಂದು-ಹೊರಗೊಂದು ಇಲ್ಲದ ವ್ಯಕ್ತಿತ್ವ. ಮಗುವಿನ ಮನಸ್ಸು ಎಂದು ವಿನಯ ಗುರೂಜಿ ಹೊಗಳಿದ್ದಾರೆ.

ಇದನ್ನೂ ಓದಿ: ಪ್ರತಾಪ್ ಸಿಂಹಗೆ ಆಸೆ ಇದ್ರೆ ಇನ್ನೊಂದು ಮದುವೆಯಾಗಿ ಅನುಭವ ನಮಗೆ ಹೇಳಲಿ: ತನ್ವೀರ್ ಸೇಠ್

ಕೆಲ ಬದಲಾವಣೆಯಿಂದ ಗೃಹಲಕ್ಷ್ಮೀ ಯೋಜನೆ ವಿಳಂಬ 

ವಿನಯ ಗುರೂಜಿ ತಮ್ಮ ಆಶ್ರಮದಲ್ಲಿ ಮಳೆಗಾಗಿ ಚಂಡಿಕಾಯಾಗ ಸಂಕಲ್ಪ ಮಾಡಿದರು. ಚಂಡಿಕಾಯಾಗದಲ್ಲಿ ಭಾಗಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕೂಡ ಭಾಗವಹಿಸಿದ್ದರು. ಯಾಗ ಮುಗಿದ ಬಳಿಕ ಮಾತನಾಡಿದ ಅವರು, ಆಗಸ್ಟ್​​​ 17 ಅಥವಾ 18ರಂದು ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಹಣ ಹಾಕಲಾಗುತ್ತೆ. ಕೆಲ ಬದಲಾವಣೆಯಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಮತ್ತಷ್ಟು ವಿಳಂಬ ಆಗುತ್ತೆ ಅಷ್ಟೇ. ಬಹಳ ಸರಳವಾಗಿ ಗೃಹಲಕ್ಷ್ಮೀ ಯೋಜನೆ ಜನರಿಗೆ ತಲುಪಬೇಕು. ಹಾಗಾಗಿ ಅಧಿಕಾರಿಗಳಿಗೆ ಕೆಲ ಬದಲಾವಣೆ ಮಾಡಲು ಸೂಚನೆ ನೀಡಿದ್ದೇವೆ ಎಂದರು.

ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್​​ನಲ್ಲಿ ಸೇರಿದಂತೆ ಈಗ ಬಾಪೂಜಿ ಸೇವಾ ಕೇಂದ್ರದಲ್ಲೂ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?