ಕಾಂಗ್ರೆಸ್ ಸಮಾವೇಶಗಳಿಗೆ ಗೈರು ವಿಚಾರ; ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದ್ದೇನು?

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇನೆ. ತುಮಕೂರು ಜಿಲ್ಲಾ ಪ್ರವಾಸ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದೇವೆ. ನಾನು ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ ಅಂತ ತಿಳಿಸಿದ್ದಾರೆ.

ಕಾಂಗ್ರೆಸ್ ಸಮಾವೇಶಗಳಿಗೆ ಗೈರು ವಿಚಾರ; ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದ್ದೇನು?
ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್
Edited By:

Updated on: May 29, 2022 | 1:02 PM

ಬೆಂಗಳೂರು: ತುಮಕೂರಿನಲ್ಲಿ ಕಾಂಗ್ರೆಸ್ (Congress) ಸಮಾವೇಶಗಳಿಗೆ ಗೈರಾಗಿದ್ದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ (G Parameshwar) ಇದೀಗ ಸ್ಪಷ್ಟನೆ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದ ಕೆಲವು ಕಾರ್ಯಕ್ರಮಗಳಿಗೆ ಹೋಗಿರಲಿಲ್ಲ. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇನೆ. ತುಮಕೂರು ಜಿಲ್ಲಾ ಪ್ರವಾಸ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದೇವೆ. ನಾನು ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ ಅಂತ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಪರಮೇಶ್ವರ್, ನಮ್ಮ ಇತಿಹಾಸವನ್ನು ಬದಲಾಯಿಸುವ ಅವಶ್ಯಕತೆ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂದು ಪ್ರಪಂಚಕ್ಕೆ ಗೊತ್ತು. ಕೇಶವ್ ಹೆಡ್ಗೆವಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ನಮ್ಮ ಇತಿಹಾಸದಲ್ಲಿ ನಾವು ಯಾವತ್ತೂ ನೋಡಿಲ್ಲ, ಓದಿಲ್ಲ ಎಂದರು.

ಇದನ್ನೂ ಓದಿ: ಟ್ರಾಕ್ಟರ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ

ಇದನ್ನೂ ಓದಿ
ಟ್ರಾಕ್ಟರ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ
Pregnancy: ಬೇಸಿಗೆಯಲ್ಲಿ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಸಲಹೆಗಳು
ನಾಯಕಿ ಪ್ರಧಾನ ಸಿನಿಮಾ ಮಾಡ್ತಾರಾ ಪ್ರಶಾಂತ್​ ನೀಲ್​? ಇಂಥ ಗಾಸಿಪ್​ ಹರಡಲು ಕಾರಣ ಇಲ್ಲಿದೆ..
Breaking News: 4 ಮಂದಿ ಭಾರತೀಯರೂ ಸೇರಿ 22 ಪ್ರಯಾಣಿಕರಿದ್ದ ನೇಪಾಳದ ವಿಮಾನ ನಾಪತ್ತೆ

ಸಿಎಂ ಕನಸು ಕಾಣುವ ದಲಿತ ನಾಯಕರು ಹುಚ್ಚರು ಎಂಬ ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿಕೆಗೆ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯವರು ದಲಿತರನ್ನ ಸಿಎಂ ಮಾಡಲ್ಲ ಅನ್ನೋದು ಸ್ಪಷ್ಟವಾಗಿದೆ. ನನ್ನ ಹೆಸರು ಮತ್ತು ಖರ್ಗೆ ಹೆಸರನ್ನ ನಾರಾಯಣಸ್ವಾಮಿಯೇ ಹೇಳಿದ್ದಾರೆ. ನಮ್ಮ ಪಕ್ಷದ ಬಗ್ಗೆ ಕೇಂದ್ರ ಸಚಿವ ನಾರಾಯಣಸ್ವಾಮಿಗೆ ಏನು ಗೊತ್ತು. ಸಮುದಾಯಕ್ಕೆ ಸಿಎಂ ಸ್ಥಾನ ಸಿಗಲ್ಲ ಎಂಬ ಅನಿಸಿಕೆ ಇರಬಹುದು. ಆದರೆ ನಮ್ಮ ಅನಿಸಿಕೆಯಲ್ಲಿ ಕಾಂಗ್ರೆಸ್​ನಲ್ಲಿ ಎಲ್ಲರಿಗೂ ಅವಕಾಶ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದು ತಿಳಿಸಿದರು.

ಸಿದ್ದು ಗರಂ:
ಆರ್‌ಎಸ್‌ಎಸ್‌ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಿರುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಆರ್‌ಎಸ್‌ಎಸ್‌ ಪಠ್ಯ ಪುಸ್ತಕದಲ್ಲಿ ಏಕೆ ಸೇರಿಸಿದ್ದಾರೆ? ಅವರ ಮೂಲವೇನು? ಬಿಜೆಪಿಯವರು ಆರ್‌ಎಸ್ಎಸ್‌ ದೇಶಭಕ್ತರು ಎಂದು ಹೇಳುತ್ತಾರೆ. ಆದರೆ ಆರ್‌ಎಸ್‌ಎಸ್ ಮೂಲ ಯಾವುದು? ಅವರು ಈ ದೇಶಕ್ಕೆ ಕೊಟ್ಟ ಕೊಡುಗೆ ಏನು? ಏಕೆ ಅವರನ್ನ ಪಠ್ಯ ಪುಸ್ತಕದಲ್ಲಿ ಓದಬೇಕು? ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Sun, 29 May 22