AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಕ್ಟರ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ

ಮದ್ಯ ವೆಸನೆ ಚಟ ಬಿಡಿಸುವ ಔಷಧಿ ಮಿಶ್ರಣ ಮಾಡಿದ ಬಜ್ಜಿ ಸೇವಿಸಿ ಬಾಲಕ ಸಾವನ್ನಪ್ಪಿರುವಂತಹ ದಾರುಣ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿನ್ನೆ ನಡೆದಿದೆ. ಪಟ್ಟಣದ ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಮೃತ ಬಾಲಕ.

ಟ್ರಾಕ್ಟರ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ
ಸೂರ್ಯ (19) ಸೂಲಕುಂಟೆ ಗ್ರಾಮ ಮಹೇಶ್ (20) ಮೃತ ದುರ್ದೈವಿಗಳು.
TV9 Web
| Edited By: |

Updated on:May 29, 2022 | 12:50 PM

Share

ನೆಲಮಂಗಲ: ಟ್ರಾಕ್ಟರ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಬೈಕ್ ಸವಾರರಿಬ್ಬರು ದುರ್ಮರಣ ಹೊಂದಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ತಾಲೂಕು ಕುಲವನಹಳ್ಳಿ ಸೂಲಕುಂಟೆ ರಸ್ತೆಯ ಪಟಾಲಮ್ಮನ ದೇವಸ್ಥಾನದ ಬಳಿ ನಡೆದಿದೆ. ಅರೆಬೊಮ್ಮನಹಳ್ಳಿ ಗ್ರಾಮದ ಸೂರ್ಯ (19) ಸೂಲಕುಂಟೆ ಗ್ರಾಮ ಮಹೇಶ್ (20) ಮೃತ ದುರ್ದೈವಿಗಳು. ಹೆಡ್​ಲೈಟ್ ಹಾಕದೇ ಟ್ರಾಕ್ಟರ್ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಸೂಲಕುಂಟೆಯ ಕುಮಾರ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೂವರು ಸ್ನೇಹಿತರು ತ್ರಿಬಲ್ ರೈಡಿಂಗ್ ಬರುವ ವೇಳೆ ಅವಘಡ ಸಂಭವಿಸಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ

ಚಿಕ್ಕಬಳ್ಳಾಫುರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನ ಬಂಧಿಸಿದ ಪೊಲೀಸರು 4 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಹಾಗೂ ಒಂದು ಬೈಕ್ ಜಪ್ತಿ ಮಾಡಿದ್ದಾರೆ. ಉಪ್ಪಾರಪೇಟೆ ಬಸ್ ನಿಲ್ದಾಣದ ಬಳಿ ಶಿಡ್ಲಘಟ್ಟ ಮೂಲದ ಎನ್. ಅಶೋಕ್ ಬಂಧಿತ ಆರೋಪಿ.

ದೇವರ ಹುಂಡಿ ಕಳ್ಳತನ:

ಶಿವಮೊಗ್ಗ: ದೇವಸ್ಥಾನದ ಬಾಗಿಲ ಬೀಗ ಮುರಿದು, ಹುಂಡಿ ಕಳ್ಳತನ ಮಾಡಿರುವಂತಹ ಘಟನೆ ತಾಲೂಕಿನ ಪುರದಾಳು ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ದೇವಸ್ಥಾನದ ಬೀಗ ಒಡೆದು ಕಳ್ಳತನ ಮಾಡಿದ್ದು, ದೇವಾಲಯದೊಳಗೆ ಮುಂದಿದ್ದ ಹುಂಡಿ ಹೊತ್ತೊಯ್ದಿದ್ದಾರೆ. ದೇಗುಲದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಹಾನಿ ಮಾಡಿರುವ ಕಳ್ಳರು, ಇಂದು ಬೆಳಗ್ಗೆ ಅರ್ಚಕರು ಬಂದು, ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಮದ್ಯ ವೆಸನೆ ಚಟ ಬಿಡಿಸುವ ಔಷಧಿ ಸೇವಿಸಿ ಬಾಲಕ ಸಾವು

ಕಲಬುರಗಿ: ಮದ್ಯ ವೆಸನೆ ಚಟ ಬಿಡಿಸುವ ಔಷಧಿ ಮಿಶ್ರಣ ಮಾಡಿದ ಬಜ್ಜಿ ಸೇವಿಸಿ ಬಾಲಕ ಸಾವನ್ನಪ್ಪಿರುವಂತಹ ದಾರುಣ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿನ್ನೆ ನಡೆದಿದೆ. ಪಟ್ಟಣದ ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಮೃತ ಬಾಲಕ. ಔಷಧ ಮಿಶ್ರಣ ಮಾಡಿ ಇಡಲಾಗಿದ್ದ ಬಜ್ಜಿ ಸೇವಿಸಿದ್ದ ಬಾಲಕ, ನಂತರ ಬಾಲಕಿನಿಗೆ ವಾಂತಿ ಬೇಧಿ ಪ್ರಾರಂಭವಾಗಿತ್ತು. ವಾಂತಿ ಭೇದಿಯಿಂದ ಮೃತಪಟ್ಟಿರುವುದುದಾಗಿ ಕುಟುಂಬಸ್ಥರು ಹೇಳುತ್ತಿದ್ದಾರೆ. ಬಾಲಕನ ತಂದೆಗೆ ವಿಪರೀತ ಮದ್ಯ ಸೇವನೆಯ ಚಟವಿತ್ತು. ಅದನ್ನು ಬಿಡಿಸಲು ಬಜ್ಜಿಯಲ್ಲಿ ಔಷದಿ ಮಿಶ್ರಣ ಮಾಡಿಡಲಾಗಿತ್ತು. ಆದರೆ ಇದೇ ಬಜ್ಜಿಯನ್ನು ಬಾಲಕ ತಿಂದಿದ್ದಾನೆ. ಇದೇ ಕಾರಣಕ್ಕೆ ವಾಂತಿ ಬೇಧಿ ಆಗಿದೆಯಾ ಅಥವಾ ಬೇರೆ ಕಾರಣಕ್ಕೆ ಆಗಿದೆಯಾ ಅನ್ನೋ ಮಾಹಿತಿ ಇಲ್ಲಾ. ಬಾಲಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲಾ. ಈ ಬಗ್ಗೆ ಯಾವುದೇ ದೂರು ದಾಖಲಿಸಿದೆ ಕುಟುಂಬದವರು ಅಂತ್ಯಸಂಸ್ಕಾರ ಮಾಡಿದ್ದಾರೆ. ವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಂಪ್ ಸೆಟ್​ ಕಳವು ಆರೋಪದಡಿ ಕಾರ್ಮಿಕನ ಕೊಲೆ

ಬೆಂಗಳೂರು: ಪಂಪ್​ಸೆಟ್​ ಕಳವು ಆರೋಪದಡಿ ಕಾರ್ಮಿಕನ ಕೊಲೆ ನಡೆದಿರುವಂತಹ ಘಟನೆ ಬೆಂಗಳೂರಿನ ಹೊಯ್ಸಳನಗರದಲ್ಲಿ ತಡರಾತ್ರಿ ದುಷ್ಕೃತ್ಯ ನಡೆದಿದೆ. ಗಾರೆ ಕೆಲಸ ಮಾಡುತ್ತಿದ್ದ ಮುನೇಶ್ವರನಗರ ನಿವಾಸಿ ಅಶ್ವತ್ಥ್​ ರೆಡ್ಡಿ ಮೇಲೆ ಹಲ್ಲೆಗೈದು ಕೊಲೆ ಮಾಡಲಾಗಿದೆ. ನಿರ್ಮಾಣ ಹಂತದ ಕಟ್ಟಡದ ಪಂಪ್​ಸೆಟ್ ಕಳ್ಳತನವಾಗಿತ್ತು. ಕಟ್ಟಡದ ಮಾಲೀಕನ ಸಂಬಂಧಿ ಶ್ರೀನಿವಾಸ್ ರೆಡ್ಡಿಯಿಂದ ಹಲ್ಲೆ ಮಾಡಲಾಗಿದೆ. ಹಿಗ್ಗಾಮುಗ್ಗಾ ಥಳಿತದಿಂದ ಸ್ಥಳದಲ್ಲೇ ಕಾರ್ಮಿಕ ಅಶ್ವತ್ಥ್​ ಸಾವಿಗೀಡಾಗಿದ್ದಾನೆ. ರಾಮಮೂರ್ತಿನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಿದ್ದು, ಆರೋಪಿಗಳಾದ ಶ್ರೀನಿವಾಸ ರೆಡ್ಡಿ, ಸುಬ್ಬಯ್ಯ ನಾಯ್ದು ಬಂಧನ ಮಾಡಲಾಗಿದೆ.

ಬೆಳಗಿನ ಜಾವ 5 ಗಂಟೆಗೆ ಫುಟ್ ಬಾಲ್ ಆಡಲು ಮೈದಾನಕ್ಕೆ ಬಾಲಕ ತೆರಳಿದ್ದಾನೆ. ಈ ವೇಳೆ ಇಬ್ಬರು ಕೈಕಾಲು ಕಟ್ಟಿ ಹಲ್ಲೆ ಮಾಡುತ್ತಿರುವುದು ಕಂಡಿದೆ. ಹಾಗಾಗಿ ಏನು ಅಂತ ತೆರಳಿ ಮೊಬೈಲ್ ವಿಡಿಯೋ ಮಾಡಿದ್ದ. ನಂತರ ಆತ ಅಲ್ಲಿಂದ ಆಟ ಆಡಲು ಹೊಗಿದ್ದ.  ಆದರೆ ಸಂಜೆ ವೇಳೆಗೆ ಹಲ್ಲೆಗೊಳಗಾದ ವ್ಯಕ್ತಿ ಅದೇ ಏರಿಯಾದ ರಸ್ತೆಯಲ್ಲಿ ಶವವಾಗಿ ಬಿದಿದ್ದ. ಈ ವೇಳೆ ಪತ್ನಿಯಿಂದ ಗಂಡ ನಾಪತ್ತೆಯಾದ ಬಗ್ಗೆ ಜೊತೆಗೆ ಯಾರೋ ಕೊಲೆ ಮಾಡಿದ್ದಾಗಿ ದೂರು ನೀಡಿದ್ದರು. ತನಿಖೆ ವೇಳೆ ಪುಟ್ ಬಾಲ್ ಯುವಕ ವಿಡಿಯೋ ಪತ್ತೆಯಾಗಿದೆ. ವಿಡಿಯೋ ಆಧರಿಸಿ ತನಿಖೆ ವೇಳೆ ಕೃತ್ಯ ಬಯಲಾಗಿದೆ. ಅಶ್ವತ್ ಸಾವಿನ ಬಳಿಕ ಆರೋಪಿಗಳು ಹೆದರಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:10 pm, Sun, 29 May 22

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು