ಚುನಾವಣೆ ಟಾರ್ಗೆಟ್: ಜ.20, 21ರಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ತುಮಕೂರಿನಲ್ಲಿ ಫಿಕ್ಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 18, 2023 | 7:01 PM

ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತುಮಕೂರಿನಲ್ಲಿ ಜ. 20, 21ರಂದು BJP ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಿಗದಿ ಮಾಡಲಾಗಿದೆ.

ಚುನಾವಣೆ ಟಾರ್ಗೆಟ್: ಜ.20, 21ರಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ  ತುಮಕೂರಿನಲ್ಲಿ ಫಿಕ್ಸ್
BJP
Image Credit source: mathrubhumi.com
Follow us on

ಬೆಂಗಳೂರು: ಇತ್ತೀಚೆಗೆ ದೆಹಲಿಯ ಬಿಜೆಪಿ (BJP) ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಚರ್ಚೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತುಮಕೂರಿನಲ್ಲಿ ಜ. 20, 21ರಂದು BJP ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಿಗದಿ ಮಾಡಲಾಗಿದೆ. ಈ ಕುರಿತಾಗಿ ಬೆಂಗಳೂರಲ್ಲಿ ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ K.S.ನವೀನ್ ಪತ್ರಿಕಾಗೋಷ್ಠಿ ಮಾಡಿದ್ದು, ತುಮಕೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಿಗದಿಯಾಗಿದೆ. ಎರಡು ದಿನಗಳ ಕಾಲ ನಡೆಯಲಿದೆ. ರಾಷ್ಟ್ರೀಯ ಮತ್ತು ರಾಜ್ಯದ 37 ಘಟಕದ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಕಾರ್ಯಕಾರಿಣಿ ಸಭೆಯನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸ್ ಉದ್ಘಾಟನೆ ಮಾಡಲಿದ್ದಾರೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸಹ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಿ.ಎಲ್.ಸಂತೋಷ್ ಭಾಗವಹಿಸಲಿದ್ದಾರೆ ಎಂದು K.S.ನವೀನ್ ತಿಳಿಸಿದರು.

ಕಾಂಗ್ರೆಸ್​ ನಾ ನಾಯಕಿ ಅಂತ ಹೇಳಿ ಸುಳ್ಳು ಭರವಸೆ ನೀಡುತ್ತಿದೆ: ಗೀತಾ ವಿವೇಕಾನಂದ

ಗೀತಾ ವಿವೇಕಾನಂದ ಮಾತನಾಡಿ, ಕಾರ್ಯಕಾರಿಣಿಯಲ್ಲಿ ಸಾರ್ವಜನಿಕರೂ ಭಾಗಿಯಾಗಬಹುದು. ಕಾಂಗ್ರೆಸ್​ನಲ್ಲಿ ನಾ ನಾಯಕಿ ಅಂತ ಅವರೇ ಬೆಳೆಯುತ್ತಿದ್ದಾರೆ. ಬೇರೆ ಯಾರನ್ನೂ ಬೆಳೆಯಲು ಬೆಳೆಯುತ್ತಿಲ್ಲ. ನಾ ನಾಯಕಿ ಅಂತ ಹೇಳಿ ಸುಳ್ಳು ಭರವಸೆ ನೀಡಿ ಹೋಗ್ತಿದ್ದಾರೆ. ನಾವು ಆ ರೀತಿ ಯಾವುದೇ ಸುಳ್ಳು ಹೇಳ್ತಿಲ್ಲ. ಆದ್ರೆ ನಮ್ಮ ಸರ್ಕಾರ ಮಹಿಳೆಯರಿಗೆ ಏನೆಲ್ಲಾ ಕಾರ್ಯಕ್ರಮ ನೀಡಲಿದೆ ಅನ್ನೋ ವರದಿ ಇದೆ‌. ಹಿಮಾಚಲ ಪ್ರದೇಶದಲ್ಲಿ ನಾಲ್ಕು ವರ್ಷಗಳ ಹಿಂದೆ ಅನೇಕ ಘೋಷಣೆ ಮಾಡಿದ್ರು ಏನೂ ನೀಡಿಲ್ಲ. ಯುವತಿಯರಿಗೆ ನಾಲ್ಕು ಸಾವಿರ ಕೊಡುವುದಾಗಿ ಹೇಳಿ ಕೊಟ್ಟಿಲ್ಲ. ರಾಜಸ್ಥಾನ ಚುನಾವಣೆ ಸಂದರ್ಭದಲ್ಲಿ ಪಿಹೆಚ್​ಡಿ ವರೆಗೂ ಶಿಕ್ಷಣ ನೀಡೋದಾಗಿ ಹೇಳಿದ್ರು, ಅದೂ ಆಗಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಮಹತ್ವದ ಚರ್ಚೆ

ಚುನಾವಣೆ ಬಂದ ಸಂದರ್ಭದಲ್ಲಿ ಈ ರೀತಿ ಮಹಿಳೆಯರನ್ನು ಮರುಳು ಮಾಡುತ್ತಾರೆ. ಹಿಂದುಳಿದ ವರ್ಗ ಅಂತ ಹೇಳದೇ ಮಹಿಳೆಯರಿಗೆ ಅಂತ ಸಾಮೂಹಿಕವಾಗಿ ಕಾಂಗ್ರೆಸ್ ಹೇಳಿದೆ. ಕರ್ನಾಟಕದ ಪ್ರಜ್ಞಾವಂತ ಮಹಿಳೆಯರು ಇದಕ್ಕೆ ಮರುಳಾಗಲ್ಲ. ನಾವು ಹೇಳಿದ ಘೋಷಣೆ ಜಾರಿಗೆ ತರುತ್ತೇವೆ. ಕೇಂದ್ರ ಸರ್ಕಾರ ಆ ಕೆಲಸ ಕೂಡ ಮಾಡಿದೆ ಎಂದರು.

ಮಹಿಳೆಯರಿಗೆ ಈ ಬಾರಿ ಹೆಚ್ಚಿನ ಟಿಕೆಟ್ ಸಿಗುವ ವಿಶ್ವಾಸ

ಖಂಡಿತಾ ಮಹಿಳೆಯರಿಗೆ ಈ ಬಾರಿ ಹೆಚ್ಚಿನ ಟಿಕೆಟ್ ಸಿಗುವ ವಿಶ್ವಾಸ ಇದೆ. ಗೆಲ್ಲುವ ಸಾಮರ್ಥ್ಯ ಇರುವ ಮಹಿಳೆಯರಿಗೆ ಟಿಕೆಟ್ ಕೊಡ್ತಾರೆ. ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ಬಿಜೆಪಿ ಚಟುವಟಿಕೆಗಳಿಂದ ನಟಿ ಶೃತಿ ಮತ್ತಿತರರು ದೂರ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಒಬ್ಬರೋ ಇಬ್ಬರೋ ಕಾಣಿಸ್ತಿಲ್ಲ ಅಂದ್ರೆ ಸಂಘಟನೆ ಆಗ್ತಿಲ್ಲ ಅಂತ ಅರ್ಥ ಅಲ್ಲ. ಅವರಿಗೆ ಕೊಟ್ಟಿರುವ ಜವಾಬ್ದಾರಿ ಅವರು ಮಾಡ್ತಿದ್ದಾರೆ. ನಮಗೆ ಕೊಟ್ಟ ಜವಾಬ್ದಾರಿ ನಾವು ಮಾಡ್ತಿದ್ದೇವೆ ಎಂದು ಹೇಳಿದರು.

ಇನ್ನು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ‌. ಮಹೇಶ್ ಹೇಳಿಕೆ ನೀಡಿದ್ದು, ಅರುಣ್ ಸಿಂಗ್, ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಒಂದಷ್ಟು ಸುದ್ದಿಗಳು ಬಂದಿವೆ. ಅರುಣ್ ಸಿಂಗ್ ಅವರು ಮುಂದಿನ ನಮ್ಮ ಸಂಘಟನಾತ್ಮಕ ವ್ಯವಸ್ಥೆ ಆಗುವವರೆಗೂ ರಾಜ್ಯ ಉಸ್ತುವಾರಿ ಆಗಿರುತ್ತಾರೆ. ನಳಿನ್ ಕುಮಾರ್ ಕಟೀಲ್ ಅವರು ಸಹ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ.