Assembly election 2023 Dates: ತ್ರಿಪುರಾದಲ್ಲಿ ಫೆ.16, ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಫೆ.27ಕ್ಕೆಚುನಾವಣೆ
ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯ ವಿಧಾನಸಭಾ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ತ್ರಿಪುರಾದಲ್ಲಿ ಫೆಬ್ರುವರಿ 16ಕ್ಕೆ ಚುನಾವಣೆ ನಡೆಯಲಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಫೆ.27ಕ್ಕೆಚುನಾವಣೆ ನಡೆಯಲಿದೆ.
ದೆಹಲಿ: ನಾಗಾಲ್ಯಾಂಡ್ (Nagaland), ತ್ರಿಪುರಾ (Tripura) ಮತ್ತು ಮೇಘಾಲಯ (Meghalaya) ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (Election commission of India) ಪ್ರಕಟಿಸಿದೆ. ತ್ರಿಪುರಾದಲ್ಲಿ ಫೆಬ್ರುವರಿ 16ಕ್ಕೆ ಚುನಾವಣೆ ನಡೆಯಲಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಫೆ.27ಕ್ಕೆಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರದಲ್ಲಿ ತಲಾ 60 ವಿಧಾನಸಭಾ ಕ್ಷೇತ್ರಗಳಿವೆ. ಈ ಮೂರು ರಾಜ್ಯಗಳು ಮತದಾನದಲ್ಲಿ ಹೆಚ್ಚಿನ ಮಹಿಳಾ ಭಾಗವಹಿಸುವಿಕೆಗೆ ಉದಾಹರಣೆಯಾಗಿದೆ. ಹಿಂಸಾಚಾರ ಮುಕ್ತ ಚುನಾವಣೆಗೆ ಆಯೋಗ ಬದ್ಧವಾಗಿದೆ, ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಪ್ರತಿಯೊಂದು ಚುನಾವಣೆಗೂ ತನ್ನದೇ ಆದ ಸವಾಲುಗಳಿರುತ್ತವೆ. ಕಷ್ಟಕರವಾದ ಭೂಪ್ರದೇಶಗಳ ಹೊರತಾಗಿಯೂ, ಈ 3 ರಾಜ್ಯಗಳು ಭಾಗವಹಿಸುವಿಕೆಯ ವಿಷಯದಲ್ಲಿ ದೇಶದ ಉಳಿದ ಭಾಗಗಳಿಗೆ ಮಾದರಿಯಾಗಿವೆ. ಚುನಾವಣಾ ಆಯೋಗವು ಮುಕ್ತ, ನ್ಯಾಯಸಮ್ಮತ, ಭಾಗವಹಿಸುವಿಕೆ, ಒಳಗೊಳ್ಳುವಿಕೆ, ಪ್ರಚೋದನೆ ಮುಕ್ತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಬದ್ಧವಾಗಿದೆ. ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಮತದಾರರ ಲಿಂಗ ಅನುಪಾತವು 1000ಕ್ಕಿಂತ ಕಡಿಮೆ. ತ್ರಿಪುರಾದಲ್ಲಿ, ಇದು 989 ರಷ್ಟಿದೆ, ಇದು ರಾಷ್ಟ್ರೀಯ ಸರಾಸರಿ 969 ಕ್ಕಿಂತ ಹೆಚ್ಚು. 2018 ರ ಅಸೆಂಬ್ಲಿ ಚುನಾವಣೆಯಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳಾ ಮತದಾರರ ಮತದಾನಕ್ಕೆ ರಾಜ್ಯಗಳು ಸಾಕ್ಷಿಯಾಗಿದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
CEC Shri Rajiv Kumar along with ECs Shri Anup Chandra Pandey & Shri Arun Goel to address PC on GE to Legislative Assemblies of Nagaland, Meghalaya & Tripura at Rang Bhawan Auditorium, Akashvani Bhawan, New Delhi today at 2:30 PM.
Watch live here ?? https://t.co/mf9ShwyMfb#ECI pic.twitter.com/tOYvgT9TKH
— Election Commission of India #SVEEP (@ECISVEEP) January 18, 2023
ಚುನಾವಣಾ ಆಯೋಗವು ಜನವರಿ 11-15, 2023 ರ ಅವಧಿಯಲ್ಲಿ ಮೂರು ರಾಜ್ಯಗಳಿಗೆ ಭೇಟಿ ನೀಡಿ ವಿವರವಾದ ಪರಿಶೀಲನಾ ಸಭೆಗಳನ್ನು ನಡೆಸಿತು. ರಾಜಕೀಯ ಪಕ್ಷಗಳನ್ನು ಸಹ ಭೇಟಿ ಮಾಡಿದ್ದು ಅವರು ಎತ್ತಿದ ಬಹುತೇಕ ಎಲ್ಲಾ ರಾಜ್ಯ-ನಿರ್ದಿಷ್ಟ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ತಮಿಳುನಾಡು ಹೆಸರನ್ನು ಬದಲಿಸಲು ನಾನೆಂದೂ ಸೂಚಿಸಿಲ್ಲ; ವಿವಾದದ ಬಗ್ಗೆ ರಾಜ್ಯಪಾಲ ರವಿ ಸ್ಪಷ್ಟನೆ
31.47 ಲಕ್ಷ ಮಹಿಳಾ ಮತದಾರರು, 97,000 ರಷ್ಟು 80 ವಯಸ್ಸು ಮೀರಿದ ಮತದಾರರು ಮತ್ತು 31,700 ಅಂಗವಿಕಲ ಮತದಾರರು ಸೇರಿದಂತೆ 3 ರಾಜ್ಯಗಳಲ್ಲಿ ಒಟ್ಟು 62.8 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಸೇವೆ ಸಲ್ಲಿಸಲು ನಮ್ಮ ತಂಡಗಳು ಸಿದ್ಧವಾಗಿವೆ. 3 ರಾಜ್ಯಗಳಲ್ಲಿ ಚುನಾವಣೆಯಲ್ಲಿ 1.76 ಲಕ್ಷಕ್ಕೂ ಹೆಚ್ಚು ಮತದಾರರು ಮೊದಲ ಬಾರಿ ಮತ ಚಲಾಯಿಸಲಿದ್ದಾರೆ.
Schedule for GE to the Legislative Assemblies of Meghalaya, Nagaland & Tripura.#AssemblyElections2023 #ECI pic.twitter.com/nZLJtADBMz
— Election Commission of India #SVEEP (@ECISVEEP) January 18, 2023
ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು
- ನಾಗಾಲ್ಯಾಂಡ್, ಮೇಘಾಲಯ ಪ್ರವಾಸದ ವಿಧಾನ ಸಭೆಗಳ ಅವಧಿ ಕ್ರಮವಾಗಿ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22 ರಂದು ಕೊನೆಗೊಳ್ಳಲಿದೆ. ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ – ಮೂರು ರಾಜ್ಯಗಳಾದ್ಯಂತ 376 ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿ ನಿರ್ವಹಿಸುತ್ತಾರೆ.
- ಮತದಾನದ ದಿನಾಂಕದ ಮೊದಲು 18 ವರ್ಷ ತುಂಬಲಿರುವ ಯುವಕರನ್ನು ನಾವು ವೆಲ್ಕಮ್ ಕಿಟ್‌ನೊಂದಿಗೆ ಸ್ವಾಗತಿಸಲಿದ್ದೇವೆ. ಈ 3 ರಾಜ್ಯಗಳಿಂದ 10,000 ಯುವಕರು ಅರ್ಜಿ ಸಲ್ಲಿಸಿದ್ದಾರೆ.
- ನಾಗಾಲ್ಯಾಂಡ್, ತ್ರಿಪುರ, ಮೇಘಾಲಯ ಈ ರಾಜ್ಯಗಳಲ್ಲಿ 2.28 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ, 97,000 ಮತದಾರರು 80 ವರ್ಷಕ್ಕಿಂತ ಮೇಲ್ಪಟ್ಟವರು, 2,600 ಮತದಾರರು 100 ವರ್ಷಕ್ಕಿಂತ ಮೇಲ್ಪಟ್ಟವರು.
- ‘ಯಾವುದೇ ಮತದಾರರು ಹಿಂದೆ ಉಳಿಯಬಾರದು’ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ.
- ತ್ರಿಪುರಾದಲ್ಲಿ ಫೆಬ್ರುವರಿ 16, ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಫೆ.27ಕ್ಕೆಚುನಾವಣೆ ನಡೆಯಲಿದೆ
- ಮೂರೂ ರಾಜ್ಯಗಳಲ್ಲಿ ಮಾರ್ಚ್ 2ರಂದು ಮತ ಎಣಿಕೆ ನಡೆದು ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.
- ಫೆಬ್ರವರಿ 27 ರಂದು ಅರುಣಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Wed, 18 January 23