ಸಿಎಂ ಕುರ್ಚಿಗೆ 2,500 ಕೋಟಿ ರೂ. ಕೇಳಿದ್ದು ನಿಜ ಅನಿಸುತ್ತೆ, ಸಿಎಂ ಆಗಬೇಕೆಂದು ಆಸೆ ಪಟ್ಟವರು ಈ ಹೇಳಿಕೆ ನೀಡಿದ್ದಾರೆ; ವಿಪಕ್ಷ ನಾಯಕ ಸಿದ್ದರಾಮಯ್ಯ
ಬೊಮ್ಮಾಯಿ ಸರ್ಕಾರ ಹಗರಣಗಳ ಸರ್ಕಾರವೆಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇಷ್ಟೊಂದು ಹಗರಣಗಳು ಯಾವ ಕಾಲದಲ್ಲೂ ಆಗಿಲ್ಲ. ಇಂತಹ ಭ್ರಷ್ಟ ಸರ್ಕಾರ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ.
ಬೆಳಗಾವಿ: ಸಿಎಂ ಕುರ್ಚಿಗೆ 2,500 ಕೋಟಿ ಕೇಳಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಸಿಎಂ ಆಗಬೇಕೆಂದು ಆಸೆ ಪಟ್ಟವರು ಹೇಳಿದ್ದಾರೆ, ನಿಜ ಅನಿಸುತ್ತೆ. ಯಡಿಯೂರಪ್ಪನವರು ಎಷ್ಟು ದುಡ್ಡು ಕೊಟ್ಟು ಸಿಎಂ ಆಗಿದ್ದರು. ಬೊಮ್ಮಾಯಿ ಎಷ್ಟು ಹಣ ನೀಡಿ ಸಿಎಂ ಆಗಿದ್ದಾರೆಂದು ಗೊತ್ತಾಗಲಿ. ಸಚಿವರು ಎಷ್ಟು ದುಡ್ಡು ಕೊಟ್ಟು ಆಗಿದ್ದಾರೆಂದು ತನಿಖೆ ಆಗಬೇಕು ಎಂದರು. ದುಡ್ಡು ಕೇಳಲು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಳಿಸಿದ್ದಾರಾ? ಪ್ರಧಾನಿ ಕಳಿಸಿದ್ದಾರಾ? ಅಮಿತ್ ಶಾ ಕಳಿಸಿದ್ದಾರಾ? ಗೊತ್ತಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೊಮ್ಮಾಯಿ ಸರ್ಕಾರ ಹಗರಣಗಳ ಸರ್ಕಾರವೆಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇಷ್ಟೊಂದು ಹಗರಣಗಳು ಯಾವ ಕಾಲದಲ್ಲೂ ಆಗಿಲ್ಲ. ಇಂತಹ ಭ್ರಷ್ಟ ಸರ್ಕಾರ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಎಲ್ಲಾ ಇಲಾಖೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನಾ ಖಾವೂಂಗಾ ನಾ ಖಾನೆ ದೂಂಗಾ ಅಂತಾ ಪ್ರಧಾನಿ ಹೇಳ್ತಾರೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ರು. ಪತ್ರ ಬರೆದು 10 ತಿಂಗಳಾದ್ರೂ ಇನ್ನೂ ಯಾಕೆ ತನಿಖೆ ಮಾಡಿಸಿಲ್ಲ. ಭ್ರಷ್ಟಾಚಾರಕ್ಕೆ ಪ್ರಧಾನಿ ಕುಮ್ಮಕ್ಕು ಕೊಡ್ತಿದ್ದಾರೆ ಅಂತ ಆಯ್ತಲ್ಲಾ ಎಂದರು.
ಬಿಜೆಪಿಗೆ ಮುಜುಗರ ತರುತ್ತದೆ- ಆರಗ ಜ್ಞಾನೇಂದ್ರ: ಪಕ್ಷದ ವಿರುದ್ಧವೇ ಯತ್ನಾಳ್ ಹೇಳಿದ್ದಾರೆ. ಈ ಹೇಳಿಕೆ ಖಂಡಿತ ಬಿಜೆಪಿಗೆ ಮುಜುಗರ ತರುತ್ತದೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸಹಜವಾಗಿ ರಾಜಕಾರಣದಲ್ಲಿ ಇವೆಲ್ಲಾ ಇರುತ್ತೆಂದು ಹೇಳಿರಬಹುದು. ನಿರ್ದಿಷ್ಟವಾಗಿ ಇದೇ ಪಕ್ಷ ಎಂದು ಬಸನಗೌಡ ಯತ್ನಾಳ್ ಹೇಳಿಲ್ಲ. ಪಕ್ಷದ ವಿರುದ್ದವೇ ಹೇಳಿದ್ದಾದರೇ ಖಂಡಿತ ಮುಜುಗರ ತರುತ್ತದೆ. ಹಾಗೇ ಮಾತಾಡಿದ್ದರೆ ಅವರನ್ನ ನಾಯಕರು ಕರೆದು ಚರ್ಚಿಸ್ತಾರೆ. ರಾತ್ರಿಯಿಂದ ಯತ್ನಾಳ್ ಸಂಪರ್ಕಕ್ಕೆ ಪ್ರಯತ್ನಿಸ್ತಿದ್ದೇವೆ, ಸಿಕ್ಕಿಲ್ಲ. ಪಿಎಸ್‌ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸುವುದು ಅನಿವಾರ್ಯ ಎಂದರು.
ಯತ್ನಾಳ್ ಯಾವ ಭಾವನೆಯಿಂದ ಹೇಳಿದ್ದಾರೋ ಗೊತ್ತಿಲ್ಲ. ಯತ್ನಾಳ್ ಹೇಳಿಕೆ ಬಗ್ಗೆ ಕೇಂದ್ರ ಶಿಸ್ತು ಸಮಿತಿ ವಿವರಣೆ ಕೇಳುತ್ತೆ. ಹಿಂದೆಯೂ ಯತ್ನಾಳ್ಗೆ 2 ಬಾರಿ ನೋಟಿಸ್ ನೀಡಲಾಗಿತ್ತು. ಅದಕ್ಕೆಲ್ಲಾ ಯತ್ನಾಳ್ ಉತ್ತರ ನೀಡಿದ್ದಾರೆ ಅಂತ ತುಮಕೂರು ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ
Price Hike: ಜನ ಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಶಾಕ್; ಅಡುಗೆ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳ
Published On - 12:43 pm, Sat, 7 May 22