ನಿಮ್ ಜೋಡಿ ನಾನೂ ಒಂದ್ ಸೆಲ್ಪೀ ತಗೊಂತೀನ್ರಿ ಸರಾ ಅಂತ ಲಕ್ಷ್ಮೇಶ್ವರದ ಮಹಿಳೆಯರು ಸಿದ್ದರಾಮಯ್ಯನವರ ದುಂಬಾಲು ಬಿದ್ದರು!
ಮೊದಲ ಮಹಿಳೆಯ ಸರದಿ ಮುಗಿದ ಬಳಿಕ ಇನ್ನೋಬ್ಬ ಸ್ತ್ರೀ ಸಿದ್ದರಾಮಯ್ಯನವರಲ್ಲಿಗೆ ಬರುತ್ತಾರೆ. ಸೆಲ್ಫೀ ತೆಗೆದುಕೊಂಡ ಬಳಿಕ ಅವರ ಮುಖದ ಮೇಲೆ ವಿಜಯದ ನಗೆ! ಪ್ರಪಂಚವನ್ನೇ ಗೆದ್ದಷ್ಟು ಖುಷಿ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಗದುಗಿನ ಲಕ್ಷ್ಮೇಶ್ವರಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ವಿಷಯವನ್ನು ನಾವು ಇನ್ನೊಂದು ವಿಡಿಯೋನಲ್ಲಿ ಚರ್ಚಿಸಿದ್ದೇವೆ. ಆದರೆ ಪಟ್ಟಣದೊಳಗೆ ಏನೆಲ್ಲ ನಡೆಯಿತು ಅನ್ನೋದು ನಮಗೆ ಆಗ ಗೊತ್ತಾಗಿರಲಿಲ್ಲ. ಅಂಥದೊಂದು ವಿಡಿಯೋ ನಮಗೆ ಸಿಕ್ಕಿದೆ. ಸಿದ್ದರಾಮಯ್ಯನವರು ಲಕ್ಷ್ಮೇಶ್ವರದ (Lakshmeshwar) ಯಾವುದೋ ಕಚೇರಿಗೆ ಬಂದಿದ್ದಾರೆ. ಪ್ರಾಯಶಃ ಬ್ಲಾಕ್ ಕಾಂಗ್ರೆಸ್ ಕಚೇರಿ ಇರಬಹುದು. ಅವರು ಪಕ್ಷದ ಕಾರ್ಯಕರ್ತರಿಂದ (party workers) ಸುತ್ತುವರಿಯಲ್ಪಟ್ಟಿದ್ದಾರೆ ಮತ್ತು ಮುಂಭಾಗದಲ್ಲಿ ಸ್ಥಳೀಯ ಜನ ಇದ್ದಾರೆ. ಇಲ್ಲಿ ಕಾಮನ್ ಆಗಿ ನಡೆಯುತ್ತಿರುವ ಸಂಗತಿಯೇನೆಂದೆರೆ ಹಿರಿಯ ಕಾಂಗ್ರೆಸ್ ನಾಯಕನೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದು!
ಸದರಿ ಕೆಲಸದಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಅವರೆಲ್ಲ ಈ ಗುಂಪಿನ ಹಿಂದುಗಡೆ ಇರೋದು ಸತ್ಯ, ಆದರೆ ಸೆಲ್ಫೀ ತೆಗೆದುಕೊಳ್ಳಲು ಒಬ್ಬೊಬ್ಬರಾಗಿ ಮುಂದೆ ಬರುವುದನ್ನು ನೀವು ವಿಡಿಯೋನಲ್ಲಿ ನೋಡಬಹುದು. ಎಲ್ಲರಿಗಿಂತ ಮೊದಲು ಹಸಿರು ಸೀರೆ ಉಟ್ಟಿರುವ ಮಹಿಳೆ ಅವಕಾಶ ಗಿಟ್ಟಿಸುತ್ತಾರೆ. ಸೆಲ್ಫೀ ತೆಗೆದುಕೊಳ್ಳುವಾಗ ಅವರು ಮಾಜಿ ಮುಖ್ಯಮಂತ್ರಿಗಳಿಗೆ ಸ್ಮೈಲ್ ಪ್ಲೀಸ್ ಅಂದಿರಬಹುದು.
ಹಾಗಾಗೇ, ಅವರು ಜನರ ನೂಕಾಟ ತಳ್ಳಾಟದಿಂದ ತಾಳ್ಮೆ ಕಳೆದುಕೊಳ್ಳುತ್ತಿದ್ದರೂ ಬಲವಂತದ ಮುಗುಳುನಗೆ ಮುಖದ ಮೇಲೆ ತಂದುಕೊಳ್ಳುತ್ತಾರೆ!
ಮೊದಲ ಮಹಿಳೆಯ ಸರದಿ ಮುಗಿದ ಬಳಿಕ ಇನ್ನೋಬ್ಬ ಸ್ತ್ರೀ ಸಿದ್ದರಾಮಯ್ಯನವರಲ್ಲಿಗೆ ಬರುತ್ತಾರೆ. ಸೆಲ್ಫೀ ತೆಗೆದುಕೊಂಡ ಬಳಿಕ ಅವರ ಮುಖದ ಮೇಲೆ ವಿಜಯದ ನಗೆ! ಪ್ರಪಂಚವನ್ನೇ ಗೆದ್ದಷ್ಟು ಖುಷಿ. ಫೋಟೋ ತೆಗೆದುಕೊಂಡ ಮೇಲೆ ಅವರ ಹಿಂದೆ ನಿಂತಿರುವ ಮಹಿಳೆಯರತ್ತ ಹೆಮ್ಮೆಯಿಂದ ನೋಡುತ್ತಾರೆ.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಿದ್ದರಾಮಯ್ಯನವರಿಗೆ ತುಲಾಭಾರ ಮಾಡುತ್ತೇವೆ ಅಂತ ದುಂಬಾಲು ಬಿದ್ದಿದ್ದರಂತೆ. ಆದರೆ ಸಿದ್ದರಾಮಯ್ಯ ಖಡಾಖಂಡಿತವಾಗಿ ನೋ ಅಂದರಂತೆ.
ಇದನ್ನೂ ಓದಿ: ಲಕ್ಷ್ಮೇಶ್ವರನಲ್ಲಿ ಸಿದ್ದರಾಮಯ್ಯ ಹೆಲಿಕಾಪ್ಟರ್ನಿಂದ ಇಳಿಯುತ್ತಿದ್ದಂತೆಯೇ ಮುಂದಿನ ಮುಖ್ಯಮಂತ್ರಿಗೆ ಜೈ ಅಂತ ಜೈಕಾರ!