ತನಿಖೆ ಪೂರ್ಣಗೊಂಡ ಕೂಡಲೇ ಪಿಎಸ್ ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲಾಗುವುದು: ಆರಗ ಜ್ಞಾನೇಂದ್ರ
ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿರುವ ಎಲ್ಲ 54,000 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು, ಈ ಬಾರಿ ದೈಹಿಕ ಪರೀಕ್ಷೆ ನಡೆಯುವುದಿಲ್ಲ. ನಾವು ಅಧಿಸೂಚನೆಯನ್ನು ಮಾತ್ರ ರದ್ದುಗೊಳಿಸಿದ್ದೇವೆ, ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಜ್ಞಾನೇಂದ್ರ ಹೇಳಿದರು.
Kalaburagi: ಗೃಹಖಾತೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಪಿ ಎಸ್ ಐ ನೇಮಕಾತಿ ಹಗರಣ ಕುರಿತು ಅಕ್ರಮದ ಎಪಿಸೆಂಟರ್ ಅನಿಸಿರುವ ಕಲಬುರಗಿಯಲ್ಲಿ (Kalaburagi) ಪತ್ರಿಕಾ ಸುದ್ದಿಗೊಷ್ಟಿಯೊಂದನ್ನು ನಡೆಸಿದರು. ಪ್ರಮಾಣಿಕವಾಗಿ ಪರೀಕ್ಷೆ ಬರೆದು ಅರ್ಹತೆ ಗಿಟ್ಟಿಸಿದವರು ಮತ್ತೊಮ್ಮೆ ಪರೀಕ್ಷೆ ಬರೆಯುವ ಸನ್ನಿವೇಶ ಸೃಷ್ಟಿಯಾಗಿರುವುದಕ್ಕೆ ಅವರ ಖೇದ (regret) ವ್ಯಕ್ತಪಡಿಸಿದರು. ಈ ನಿರ್ಣಯ ತೆಗದುಕೊಳ್ಳುವುದು ನಮಗೆ ಅಷ್ಟು ಸುಲಭವಾಗಿರಲಿಲ್ಲ. ಒಂದು ವಾರದವರೆಗೆ ಪರಾಮರ್ಶೆ ಮಾಡಿ, ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಬಳಿಕ ಅನಿವಾರ್ಯವಾಗಿ ಮರುಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಸಚಿವರು ಹೇಳಿದರು. ಅಕ್ರಮ ಒಂದೇ ಕೇಂದ್ರದಲ್ಲಿ ನಡೆದಿದ್ದರೆ ವಿಷಯ ಬೇರೆ ಆಗಿರುತಿತ್ತು. ಅದರೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲೂ ಮೋಸ ನಡೆದಿದೆ. ಇನ್ನೊಂದ ವಿಷಯವೆಂದರೆ ಅಕ್ರಮ ನಡೆಸಲು 3-4 ಬಗೆಯ ಅಪರಾಧಗಳನ್ನು ಎಸೆಗಲಾಗಿದೆ. ಒ ಎಮ್ ಅರ್ ಶೀಟ್ ನಲ್ಲಿ ದುರ್ವ್ಯವಹಾರ, ಬ್ಲೂ ಟೂಥ್ ಬಳಕೆ ಮೊದಲಾದವು ನಡೆದಿರುವುದರಿಂದ ಬಹಳ ನೋವಿನಲ್ಲಿ ಮರುಪರೀಕ್ಷೆಯ ಆದೇಶ ನೀಡಲಾಯಿತು ಎಂದು ಸಚಿವರು ಹೇಳಿದರು.
ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿರುವ ಎಲ್ಲ 54,000 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು, ಈ ಬಾರಿ ದೈಹಿಕ ಪರೀಕ್ಷೆ ನಡೆಯುವುದಿಲ್ಲ. ನಾವು ಅಧಿಸೂಚನೆಯನ್ನು ಮಾತ್ರ ರದ್ದುಗೊಳಿಸಿದ್ದೇವೆ, ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಜ್ಞಾನೇಂದ್ರ ಹೇಳಿದರು.
ದೈಹಿಕ ಪರೀಕ್ಷೆಯ ವಿಡಿಯೋ ರೆಕಾರ್ಡಿಂಗ್ ಆಗಿರುವುದರಿಂದ ಅಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ನಗಣ್ಯ, ಎಂದು ಹೇಳಿದ ಸಚಿವರು ಪ್ರಕರಣದಲ್ಲಿ ಅರೆಸ್ಟ್ ಆಗಿರುವವರಿಗೆ ಪರೀಕ್ಷೆ ಬರೆಯುವ ಅನುಮತಿ ಇಲ್ಲ ಎಂದರು. ತನಿಖೆಗೆ 2-3 ತಂಡಗಳನ್ನು ರಚಿಸಿರುವುದರಿಂದ ಅದು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ. ಅದು ಪೂರ್ಣಗೊಂಡ ಕೂಡಲೇ ಮರು ಪರೀಕ್ಷೆ ನಡೆಸಲಾಗುವುದು ಎಂದು ಜ್ಞಾನೇಂದ್ರ ಹೇಳಿದರು.