‘ಯಶ್ ಮೇಲೆ ಯಾವಾಗಲೂ ನನಗೆ ಹೆಚ್ಚು ಪ್ರೀತಿ’; ‘ಕೆಜಿಎಫ್ 2’ ನೋಡಿದ ಶಿವಣ್ಣ ಹೇಳಿದ್ದಿಷ್ಟು
ನಟ ಶಿವರಾಜ್ಕುಮಾರ್ ಕೂಡ ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಇಂದು (ಏಪ್ರಿಲ್ 6) ಬೆಂಗಳೂರಿನಲ್ಲಿ ಶಿವಣ್ಣ ಸಿನಿಮಾ ನೋಡಿದ್ದಾರೆ. ಯಶ್ ಬಗ್ಗೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದಾರೆ ಅವರು.
‘ಕೆಜಿಎಫ್ 2’ ಸಿನಿಮಾ ನೋಡಿದ ಅನೇಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇಡೀ ಸಿನಿಮಾದಲ್ಲಿ ಯಶ್ ನಟನೆ ಸಾಕಷ್ಟು ಗಮನ ಸೆಳೆಯುತ್ತದೆ. ಹೀಗಾಗಿ, ಯಶ್ಗೆ ಅನೇಕರು ಫಿದಾ ಆಗಿದ್ದಾರೆ. ಈಗ ನಟ ಶಿವರಾಜ್ಕುಮಾರ್ ಕೂಡ ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಇಂದು (ಏಪ್ರಿಲ್ 6) ಬೆಂಗಳೂರಿನಲ್ಲಿ ಶಿವಣ್ಣ ಸಿನಿಮಾ ನೋಡಿದ್ದಾರೆ. ಯಶ್ ಬಗ್ಗೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದಾರೆ ಅವರು. ‘ಯಶ್ ಅವರನ್ನು ಕಂಡರೆ ನನಗೆ ಮೊದಲಿನಿಂದಲೂ ಹೆಚ್ಚು ಪ್ರೀತಿ. ನೀವು ತುಂಬಾ ಸ್ಮಾರ್ಟ್ ಕಾಣುತ್ತೀರಿ ಎಂದು ಅನೇಕ ಬಾರಿ ಹೇಳಿದ್ದೆ. ಈ ಸಿನಿಮಾದಲ್ಲಿ ಅವರು ಇನ್ನೂ ಸ್ಮಾರ್ಟ್ ಆಗಿ ಕಾಣುತ್ತಾರೆ. ಸಿನಿಮಾ ಚೆನ್ನಾಗಿದೆ’ ಎಂದಿದ್ದಾರೆ ಶಿವಣ್ಣ. ‘ಕೆಜಿಎಫ್ 2’ ಸಿನಿಮಾ ಹಿಂದಿಯಲ್ಲಿ 397 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂದಿನ ಕಲೆಕ್ಷನ್ ಸೇರಿದರೆ ಸಿನಿಮಾ 400 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

