ಲಕ್ಷ್ಮೇಶ್ವರನಲ್ಲಿ ಸಿದ್ದರಾಮಯ್ಯ ಹೆಲಿಕಾಪ್ಟರ್​ನಿಂದ ಇಳಿಯುತ್ತಿದ್ದಂತೆಯೇ ಮುಂದಿನ ಮುಖ್ಯಮಂತ್ರಿಗೆ ಜೈ ಅಂತ ಜೈಕಾರ!

ಲಕ್ಷ್ಮೇಶ್ವರನಲ್ಲಿ ಸಿದ್ದರಾಮಯ್ಯ ಹೆಲಿಕಾಪ್ಟರ್​ನಿಂದ ಇಳಿಯುತ್ತಿದ್ದಂತೆಯೇ ಮುಂದಿನ ಮುಖ್ಯಮಂತ್ರಿಗೆ ಜೈ ಅಂತ ಜೈಕಾರ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 06, 2022 | 5:36 PM

ಅವರ ಘೋಷಣೆಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವತ್ತೂ ಅಕ್ಷೇಪಣೆ ವ್ಯಕ್ತಪಡಿಸಿಲ್ಲ ಅನ್ನೋದು ಸಹ ಅಷ್ಟೇ ಸತ್ಯ. ಮುಖ್ಯಮಂತ್ರಿ ಸ್ಥಾನದ ಮೋಹವೇ ಹಾಗಿರಬಹುದು ಮಾರಾಯ್ರೇ. ನಮ್ಮಂಥ ಸಾಮಾನ್ಯ ಜನರಿಗೆ ಅದು ಹೇಗೆ ಗೊತ್ತಾದೀತು? ಬಲ್ಲವನೇ ಬಲ್ಲ ಅಧಿಕಾರದ ಸವಿ!

ಗದಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೆಲಿಕಾಪ್ಟರ್ ನಲ್ಲಿ ರಾಜ್ಯದ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡಿ ತಮ್ಮ ವರ್ಚಸನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು ಮುಂದುವರಿದಿದೆ ಮಾರಾಯ್ರೇ. ಶುಕ್ರವಾರ ಅವರು ಮಂಡ್ಯದಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ (Lakshmeshwara) ಹಾರಿದರು. ಈ ಭಾಗದಲ್ಲೂ ಅವರು ನಿಸ್ಸಂದೇಹವಾಗಿ ಅತ್ಯಂತ ಜನಪ್ರಿಯ ನಾಯಕ (popular leaders) ಅನ್ನೋದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಮಿರಮಿರ ಮಿಂಚುತ್ತಿದ್ದ ಚಾಪರ್ ನಲ್ಲಿ ಅವರು ಬರುವ ಮೊದಲೇ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ಸಾವಿರಾರ ಜನ ಜಮಾಯಿಸಿದ್ದರು. ನೀವು ಇತ್ತೀಚಿನ ಒಂದು ಟ್ರೆಂಡ್ ಗಮನಿಸಿರಬಹುದು. ಸಿದ್ದರಾಮಯ್ಯ ಹೋದೆಡೆಯೆಲ್ಲ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಅಂತ ಜಯಕಾರ ಮಾಡುತ್ತಿದ್ದಾರೆ!

ಅವರ ಘೋಷಣೆಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವತ್ತೂ ಅಕ್ಷೇಪಣೆ ವ್ಯಕ್ತಪಡಿಸಿಲ್ಲ ಅನ್ನೋದು ಸಹ ಅಷ್ಟೇ ಸತ್ಯ. ಮುಖ್ಯಮಂತ್ರಿ ಸ್ಥಾನದ ಮೋಹವೇ ಹಾಗಿರಬಹುದು ಮಾರಾಯ್ರೇ. ನಮ್ಮಂಥ ಸಾಮಾನ್ಯ ಜನರಿಗೆ ಅದು ಹೇಗೆ ಗೊತ್ತಾದೀತು? ಬಲ್ಲವನೇ ಬಲ್ಲ ಅಧಿಕಾರದ ಸವಿ!

ಒಂದು ಸಂಗತಿಯ ಬಗ್ಗೆ ನೀವು ಸಹ ಯೋಚಿಸಿರಬಹುದು. ತಮಗೆ ಈಗ 75 ರ ಪ್ರಾಯ ಅಂತ ಸಿದ್ದರಾಮಯ್ಯ ಹಲವಾರು ಕಡೆ ಹೇಳಿಕೊಂಡಿದ್ದಾರೆ. ಸರಕಾರೀ ನೌಕರಿಯಲ್ಲಿದ್ದಿದ್ದರೆ ಅವರು ರಿಟೈರಾಗಿ 15 ವರ್ಷ ಆಗಿರುತಿತ್ತು. ಅದರೆ ಬಹಳಷ್ಟು ರಾಜಕಾರಣಿಗಳಿಗೆ 60 ರ ನಂತರವೇ ರಾಜಕೀಯ ಬದುಕು ಆರಂಭವಾಗುತ್ತದೆ.

ಬಿಜೆಪಿಯಲ್ಲಿ 75 ವರ್ಷ ದಾಟಿದವರು ಎಕ್ಸಿಕ್ಯೂಟಿವ್ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ ಎಂಬ ನಿಯಮವಿದೆ. ಆ ನಿಯಮ ಕಾಂಗ್ರೆಸ್ ನಲ್ಲೂ ಜಾರಿಗೊಳಿಸಿದರೆ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ರಿಟೈರ್ಡ್ ಹರ್ಟ್ ಆಗುತ್ತಾರೆ!

ಇದನ್ನೂ ಓದಿ:   ಅಶ್ವಥ್ ಗೌಡ ಮತ್ತು ನಾಗೇಶ ಗೌಡ ಹೆಸರಿನ ಅರೋಪಿಗಳು ಸಚಿವ ಅಶ್ವಥ್ ನಾರಾಯಣರವರ ಸಂಬಂಧಿಕರು: ಸಿದ್ದರಾಮಯ್ಯ