ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರು ಬೆಂಗಳೂರಿನಲ್ಲಿ ತಮ್ಮದೇ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2008ರಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾರಣ. ಅದಾದ ಮೇಲೆ, 2009ರಲ್ಲಿ ಚಿಕ್ಕಬಳ್ಳಾಪುರದಿಂದ ನನಗೆ ಬಿ ಫಾರಂ ತಪ್ಪಿಸಲಾಯ್ತು. ವೀರಪ್ಪ ಮೊಯ್ಲಿಯವರು ದೆಹಲಿಯಿಂದ ಹೈ ಜಂಪ್ ಲಾಂಗ್ ಜಂಪ್ ಮಾಡ್ಕೊಂಡು ಬಂದು ಸ್ಪರ್ಧೆ ಮಾಡಿದ್ರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಮೊಯ್ಲಿ ಹೇಳಿದ್ದರು. ಆದ್ರೆ ಆ ಚುನಾವಣೆಯಲ್ಲೂ ಅವರೇ ನಿಂತ್ರು, ನಂತರ ಸೋತರು. ಈ ಪರಿಷತ್ ಚುನಾವಣೆಯಲ್ಲಿ 1 ಟಿಕೆಟ್ ಹಿಂದುಳಿದ ವರ್ಗಕ್ಕೆ, ಒಂದು ಟಿಕೆಟ್ ಅಲ್ಪಸಂಖ್ಯಾತ ಸಮುದಾಯಕ್ಕೆ ಕೊಡುವುದಿತ್ತು. ಪರಿಷತ್ ಚುನಾವಣೆ ಮುಗಿದು ಒಂದು ತಿಂಗಳು ಕಳೆದು ಹೋಗಿದೆ. ಒಂದು ತಿಂಗಳಾದರೂ ಸೌಜನ್ಯಕ್ಕಾದರೂ ಯಾರೂ ಮಾತಾಡಿಸಿಲ್ಲ. ಟಿಕೆಟ್ ವಂಚಿತರ ಜೊತೆ ಕಾಂಗ್ರೆಸ್ ನಾಯಕರು ಮಾತನಾಡಿಲ್ಲ ಎಂದು ಹೇಳಿದ್ದಾರೆ.
ನನ್ನ ಮಗ ರಕ್ಷಾ ರಾಮಯ್ಯಗೂ ಪಕ್ಷದಿಂದ ಅನ್ಯಾಯವಾಗಿದೆ. ಒಂದು ವರ್ಷದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದರು. ಕಾಂಗ್ರೆಸ್ ಪಕ್ಷದಿಂದ ನನಗೆ ಈವರೆಗೆ 4 ಬಾರಿ ಅನ್ಯಾಯವಾಗಿದೆ. ನನ್ನ ಆತ್ಮೀಯರು, ಹಿತೈಷಿಗಳ ಜತೆ ಸಮಾಲೋಚನೆ ಮಾಡಬೇಕು. ಮುಂದಿನ ತಿಂಗಳು ಸಮಾವೇಶ ನಡೆಸಿ ನಿರ್ಣಯ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಎಂ.ಆರ್.ಸೀತಾರಾಂ ತಿಳಿಸಿದ್ದಾರೆ.
ಮುಂದಿನ ತಿಂಗಳು ಮತ್ತೊಂದು ಸಮಾವೇಶ ಮಾಡುತ್ತೇನೆ. ಆ ಸಮಾವೇಶದಲ್ಲಿ ನಾನು ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುತ್ತೇನೆ. ಸೌಮ್ಯವಾಗಿ ಇರೋದು ಹಲವರಿಗೆ ಆಯುಧ. ನಾನು ವೈಯಕ್ತಿಕವಾಗಿ ನೂರು ಜನರಿಗೆ ನೆರವು ಕೊಡಬಹುದು. ಶಾಸಕನಾದರೆ ತುಂಬಾ ಜನಕ್ಕೆ ಒಳ್ಳೆಯದು ಮಾಡಬಹುದು. ಮಂತ್ರಿ ಆದರೆ ಇನ್ನೂ ಹೆಚ್ಚು ಜನಸೇವೆ ಮಾಡಬಹುದು. ಅದಕ್ಕಾಗಿ ಅಧಿಕಾರ ಇರಬೇಕು ಎಂದು ಎಂ.ಆರ್. ಸೀತಾರಾಂ ಬಯಸಿದರು.
Also Read:
‘ನಾವು ಕನ್ನಡತಿ ಧಾರಾವಾಹಿ ನೋಡಲ್ಲ’; ವೀಕ್ಷಕರಿಗೆ ಬೇಸರ ತರಿಸಿದ ಆ ಒಂದು ಟ್ವಿಸ್ಟ್
Also Read: ವಿಕಲಚೇತನ ವ್ಯಕ್ತಿಯ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು, ನ್ಯಾಯ ಕೊಡಿಸಿ ಎಂದು ಕಣ್ಣೀರಾಕಿದ ವಿಕಲಚೇತನ